ಭಾನುವಾರ, ನವೆಂಬರ್ 1, 2009

೧೫]ನವಂಬರ್-೧ ನಮ್ಮ ಕನ್ನಡ [ಕರ್ನಾಟಕ] ರಾಜ್ಯೋತ್ಸವ . ಭಾಗ-೨ .


ನವಂಬರ್
-೧,ನಮ್ಮ ಕನ್ನಡ ರಾಜ್ಯೋತ್ಸವ [ಮುಂದುವರೆದ ಭಾಗ]
ಬಿ .ಎಂ.ಶ್ರೀ :
ದಿನಾಂಕ ೦೩-೦೧ -೧೮೮೪ ರಲ್ಲಿ ಜನಿಸಿದ ಆಚಾರ್ಯ ಬಿ.ಎಂ.ಶ್ರೀಕಂಠಯ್ಯ [ಇವರು ಬಿ.ಎಂ.ಶ್ರೀ ಎಂದೇ ಪ್ರಸಿದ್ದರು ]ನವರು ಕನ್ನಡದ ಕಣ್ವ ಋಷಿ ಎನಿಸಿಕೊಂಡವರು . 'ಇಂಗ್ಲಿಷ್ ಗೀತೆಗಳು ' ,'ಗದಾಯುದ್ದ ನಾಟಕಂ ', 'ಕನ್ನಡ ಬಾವುಟ ', ಮುಂತಾದ ಕೃತಿಗಳನ್ನು ರಚಿಸಿರುವ ಬಿ.ಎಂ.ಶ್ರೀ ಶಿಕ್ಷಕ ರಾಗಿದ್ದರು .ಗ್ರಂಥ ಸಂಪಾದಕ ,ಕವಿ ,ಹಾಗು ನಾಟಕಕಾರರಾಗಿದ್ದ ಇವರು ಕನ್ನಡ ಕವಿ ಪುಂಗವರು.

ಕನ್ನಡ ಕವಿ ಮುದ್ದಣ:
ನಂದಳಿಕೆ ನಾರಣಪ್ಪ ಮುದ್ದಣ ದಿನಾಂಕ ೨೪-೦೧-೧೮೭೦ ರಲ್ಲಿ ಜನಿಸಿದರು.ಇವರು ಹೊಸಗನ್ನಡ ಕಾವ್ಯಕ್ಕೆ ನಾಂದಿ ಹಾಡಿದವರು . 'ರಾಮಾಶ್ವ ಮೇಧಂ 'ಇವರ ಮೌಲಿಕ ಕೃತಿ .ಕನ್ನಡ ಕತ್ತುರಿಯಲ್ತೆ ಎಂದ ಅವರು ಪ್ರಾತ:ಸ್ಮರಣೀಯರು.

ದ .ರಾ .ಬೇಂದ್ರೆ :
೩೧-೦೧-೧೮೯೬ ರಲ್ಲಿ ಧಾರವಾಡದಲ್ಲಿ ಜನಿಸಿದ ಡಾ.ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕನ್ನಡದ ಪ್ರಸಿದ್ದ ಕವಿಗಳು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಇವರು "ವರಕವಿ' ಎಂದೇ ಪ್ರಸಿದ್ದರು.ಜ್ಞಾನಪೀಠ ಪ್ರಶಸ್ತಿ ಯನ್ನೂ ಪಡೆದಿರುವ ಇವರು ,'ನಾಕು ತಂತಿ ' 'ಅರಳುಮರಳು' 'ನಾದಲೀಲ. ಶಿವಮೊಗ್ಗಾ ದಲ್ಲಿ ನಡೆದ ೨೭ನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು.

ಕೆ.ಎಸ್ .ನ.:
'ಶೃಂಗಾರ ಕವಿ' ಎಂದೇ ಪ್ರಸಿದ್ದರಾಗಿದ್ದ ಡಾ.ಕೆ.ಎಸ್ ನರಸಿಂಹಸ್ವಾಮಿ ೨೬-೦೧ ೧೯೧೫ರಲ್ಲಿ ಜನಿಸಿದರು.'ಮೈಸೂರು ಮಲ್ಲಿಗೆ'ಕವನ ಸಂಕಲನದಿಂದ ಕನ್ನಡ ನಾಡಿನ ಮನೆಮಾತಾಗಿರುವ ಇವರು ೧೯೭೨ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ,೧೯೯೯ ರ ಕೇಂದ್ರ ಸಾಹಿತ್ಯ ಅಕಾಡೆಮಿ ಯಾ ಫೆಲೋಶಿಪ್ ಪಡೆದರು.ಇವರು ಉತ್ತಮ ಅನುವಾದಕರು,ಹಾಗು ಮಕ್ಕಳ ಸಾಹಿತ್ಯ ರಚನೆಕಾರರು . 'ಹಾಡು ಹಸೆ 'ಇವರ ಕವನ ಸಂಕಲಗಳಲ್ಲೊಂದು.

ಕು.ವೆಂ.ಪು :
ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಸ್ಥಾನ ತಂದು ಕೊಟ್ಟವರು ಈ ರಸಋಷಿ .ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಇವರ ಪೂರ್ಣ ನಾಮಧೇಯ .೨೯-೧೨-೧೯೦೪ ರಂದು ಜನಿಸಿದರು .ಕನ್ನಡ ಕಾವ್ಯ ಪ್ರಪಂಚದಲ್ಲಿ ಹೊಸ ಚಿಂತನೆ ಹುಟ್ಟುಹಾಕಿದರು .ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟರು .ಇವರ ಕವನ 'ಜಯ ಭಾರತ ಜನನಿಯ ತನುಜಾತೆ ' ನಾದ ಗೀತೆಯ ಸ್ಥಾನ ಪಡೆದಿದೆ .ಇವರು ಮಹರಾಜ ಕಾಲೇಜಿನ ಪ್ರಾಂಶುಪಾಲ ರಾಗಿ ಸೇವೆ ಸಲ್ಲಿಸಿದರಲ್ಲದೆ,ಮೈಸೂರು ವಿಶ್ವ ವಿದ್ಯಾಲಯದ ಉಪ ಕುಲಪತಿಯಾಗಿ ಕಾರ್ಯ ನಿರ್ವಹಿಸಿದರು. ಇವರ ೩೦ ಕ್ಕೂ ಹೆಚ್ಹು ಕವನ ಸಂಕಲನ ಗಳು. ಪ್ರಕಟವಾಗಿವೆ .ನಾಟಕ ,ಕಾದಂಬರಿ ಮಕ್ಕಳ ಸಾಹಿತ್ಯ ಹಾಗೂ ವಿಮರ್ಶೆಯಲ್ಲಿಯೂ ಅಸಾದಾರಣ ಪ್ರತಿಭೆ ತೋರಿದರು .ಇವರು
'ರಾಷ್ಟ್ರಕವಿ ' 'ಪದ್ಮ ವಿಭೂಷಣ''ಪಂಪ ಪ್ರಶಸ್ತಿ'ಮತ್ತಿತರ ಸನ್ಮಾನಗಳಿಗೆ ಪಾತ್ರರಾಗಿದ್ದರು.

ಬೀ chi.
೨೩-೦೪-೧೯೧೩ ರಲ್ಲಿ ಜನಿಸಿದ ರಾಯಸೇನ ಭೀಮಸೇನ ರಾವ್, ಭಿ.chi. ಎಂದೇ ಪ್ರಸಿದ್ದರು .೩೫ ಕಾದಂಬರಿ ಗಳೂ ಸೇರಿದಂತೆ ೬೦ ಕ್ಕೂ ಹೆಚ್ಹು ಕೃತಿಗಳನ್ನು ರಚಿಸಿದ್ದಾರೆ . ಇವರ 'ತಿಮ್ಮ ರಸಾಯನ' ಒಂದು ಅಪರೂಪದ ತಿಳಿಹಾಸ್ಯ ಕೃತಿ. ಅದರಲ್ಲಿ 'ತಿಮ್ಮ ನ ಪಾತ್ರ ವಿಶಿಷ್ಟ ವಾಗಿದೆ.
ಇವರು ಹಾಸ್ಯ ಬ್ರಹ್ಮ ಎಂದೇ ಪ್ರಸಿದ್ದರಾಗಿದ್ದರು .ರೇಡಿಯೋ ನಾಟಕಗಳು,ಇವರ ಮೊದಲಕ್ರುತಿ.೩೫ಕ್ಕೂ ಹೆಚ್ಹು ಕಾದಂಬರಿ ಗಳು ಅನೇಕ ನಗೆಬರಹಗಳು ,ಏಕಾಂಕ ನಾಟಕಗಳು ,ಸೇರಿ ೬೦ಕ್ಕೂ ಹೆಚ್ಹು ಕೃತಿಗಳನ್ನು ರಚಿಸಿದ್ದಾರೆ.'ದೇವರಿಲ್ಲದ ಗುಡಿ'ಅವರ ರಷ್ಯಾ ಪ್ರವಾಸ ಕಥನ .'ನನ್ನ ಭಯಾಗ್ರಫಿ'ಇವರ ಆತ್ಮಕಥನ .'ತಿಮ್ಮನ ತಲೆ'ಕೃತಿಗೆ ಮದರಾಸು ಸರ್ಕಾರದ ಪ್ರಶಸ್ತಿ ದೊರಕಿತ್ತು.'ಚಿನ್ನದ ಕಸ 'ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

ಅ.ನ.ಕೃ. :
ಇವರೊಬ್ಬ ಕನ್ನಡದ ಪ್ರಖ್ಯಾತ ಕಾದಂಬರಿಕಾರ ರಲ್ಲದೆ ಕನ್ನಡನಾಡು ,ನುಡಿಯ ಬಗ್ಗೆ ಮಂಚೂಣಿ ಹೋರಾಟಗಾರರಾಗಿ ತನು ಕನ್ನಡ ,ಮನ ಕನ್ನಡ ,ನುಡಿ ಕನ್ನಡ ಎಂದು ಬದುಕಿರುವವರೆಗೂ ನಂಬಿ ,ಕನ್ನಡಿಗರಲ್ಲಿ ಕನ್ನಡತನವನ್ನು ಬಡಿದೆಬ್ಬಿಸಿದ ಪ್ರಮುಖರು.ಅವರು ಹುಟ್ಟಿದ್ದು ಹಾಸನ
ಜಿಲ್ಲೆಯ ಅರಕಲಗೂಡು. ಮೊದಲು ನಾಟಕವೊಂದನ್ನು ರಚಿಸಿದರು .'ಮದುವೆಯೋ ಮನೆಹಾಳೋ' ಎಂಬುದೇ ಆ ನಾಟಕ.ಇವರ ಮೊದಲ ಕಾದಂಬರಿ -ಜೀವನ ಯಾತ್ರೆ. ಮುಂದೆ,ಸಂಧ್ಯಾರಾಗ ,ಉದಯರಾಗ,ಸಾಹಿತ್ಯರತ್ನ,ನಟ ಸಾರ್ವಭೌಮ ,'ವಿಜಯನಗರ ಸಾಮ್ರಾಜ್ಯ 'ಮಾಲೆಯ
ಹತ್ತು ಸಂಪುಟಗಳು,ಇಂದಿಗೂ ಮಹತ್ವದ ಕ್ರುತಿಗಳೆನಿಸಿವೆ. ೧೪ ಐತಿಹಾಸಿಕ ಕಾದಂಬರಿಗಳೂ ಸೇರಿ ೧೧೬ ಕಾದಂಬರಿಗಳನ್ನು ಇವರು ಬರೆದಿದ್ದಾರೆ.ಅಗ್ನಿಕನ್ಯೆ,ಕಣ್ಣಾ ಮುಚ್ಚಾಲೆ ,ಕಾಮನಸೋಲು ,ಕಿಡಿ,ಪಾಪಪುಣ್ಯ ಇವರ ಕಥಾ ಸಂಕಲನಗಳು.ಅನೇಕ ಸಾಮಾಜಿಕ ,ಐತಿಹಾಸಿಕ ಹಾಗು ಪೌರಾಣಿಕ ನಾಟಕಗಳನ್ನು ರಚಿಸಿ ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲಿ ಬರೆದು ಭೇಷ್ ಎನಿಸಿಕೊಂಡಿದ್ದಾರೆ.'ಕಥಾಂಜಲಿ' 'ವಿಶ್ವವಾಣಿ' 'ಕನ್ನಡ ನುಡಿ' 'ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ' ಮುಂತಾದವುಗಳ ಸಂಪಾದಕರಾಗಿ ,ಚಲನ ಚಿತ್ರೋದ್ಯಮದಲ್ಲಿ ಸಕ್ರೀಯರಾಗಿ ಪ್ರಗತಿಶೀಲ ಚಳುವಳಿಯ ಮುಂದಾಳಾಗಿ ದುಡಿದರು.

ಮಣಿಪಾಲದಲ್ಲಿ ನಡೆದ ೪೨ ನೇಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾಗಿ ಅವರನ್ನು ಆಯ್ಕೆ ಮಾಡಿ ಕನ್ನಡನಾಡು ಅವರನ್ನು ಗೌರವಿಸಿತು.
ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ,ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ,ಯನ್ನೂ ಪಡೆದ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಯಾ ಪ್ರಥಮ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.೮ ಮಂದಿ ಸಾಹಿತಿಗಳು ಅ.ನ ಕೃ. ಬಗ್ಗೆ ಗ್ರಂಥ ರಚಿಸಿ ಗೌರವ ತೋರಿದ್ದಾರೆ.

ತ.ರಾ.ಸು.:
ತಳುಕಿನ ರಾಮಚಂದ್ರಯ್ಯ ಸುಬ್ಬರಾವ್ -ತ.ರಾ.ಸು.ಎಂದೇ ಪ್ರಸಿದ್ದರು .೨೧-೦೪-೧೯೨೦ ರಲ್ಲಿ ಚಿತ್ರದುರ್ಗ ಜಿಲ್ಲೆ ,ಚಳ್ಳಕೆರೆ ತಾಲೂಕಿನ ತಳುಕು
ಎಂಬಲ್ಲಿ ಹುಟ್ಟಿದರು .ಇವರ ಐತಿಹಾಸಿಕ ಕಾದಂಬರಿಗಳನ್ನು ಓದುವುದೆಂದರೆ ಅದೊಂದು ತರಹ ರೋಮಾಂಚನ ಅನುಭವ.ಐತಿಹಾಸಿಕ ಕಾದಂಬರಿಗಳ ಸಾರ್ವಭೌಮ ರೆನಿಸಿಕೊಂಡಿದ್ದ ಇವರು,ಎಚ್.ಏ ಇತಿಹಾಸದ ಬಗ್ಗೆ ,ಸರಣಿ ಐತಿಹಾಸಿಕ ಕಾದಂಬರಿಗಳನ್ನು ಬರೆದರು.ಇವರ 'ದುರ್ಗಾಸ್ತಮಾನ' ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ.

ಹೀಗೆ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತ ಗೊಳಿಸಿದವರ ಸಾಲು ಬಹಳ ದೊಡ್ಡದು.ಇತ್ತೀಚಿನವರಲ್ಲಿ ಪ್ರೊ.ನಿಸಾರ್ ಅಹಮೆದ್ ,ಡಾ.ಅಕಬರ ಅಲಿ ,ವಿಜಯ ಸಾಸನೂರ, ಡಾ . ಎಚ್ ಎಲ್. ನಾಗೇಗೌಡ ,ಪಾಟಿಲ ಪುಟ್ಟಪ್ಪ ,ಡಾ.ಸುರ್ಯನಾಥಕಾಮತ್ ,ಡಾ.ಗಿರೀಶ್ ಕಾರ್ನಾಡ್ , ಯು .ಆರ್. ಅನಂತ ಮೂರ್ತಿ ,ಬರಗೂರ್ ರಾಮಚಂದ್ರಪ್ಪ ,ಪಿ.ಲಂಕೇಶ್, ಮುಖ್ಯವಾಗಿ ಎಸ್.ಎಲ್.ಭೈರಪ್ಪ ಹೀಗೆ ಬೆಳೆಯುತ್ತದೆ ಪಟ್ಟಿ.

ಇನ್ನು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತ ಗೊಳಿಸುವುದರಲ್ಲಿ ಕನ್ನಡ ನಾಡಿನ ಮಹಿಳೆಯರೂ ಹಿಂದೆ ಬಿದ್ದಿಲ್ಲ . ಕನ್ನಡದ ಪ್ರಥಮ ಕಾದಂಬರಿಗಾರ್ತಿ ತಿರುಮಲಾಂಬ ಅವರಿಂದ ಹಿಡಿದು ,ತ್ರಿವೇಣಿ ,ವಾಣಿ ,ವೈದೇಹಿ ,ಎಂ ಕೆ ಇಂದಿರಾ, ಆರ್ಯಾಂಬ ಪಟ್ಟಾಭಿ , ಡಾ.ಅನುಪಮ ನಿರಂಜನ ,ಅಶ್ವಿನಿ [ಶ್ರೀಮತಿ.ಎಂ.ವಿ.ಕಮಲಮ್ಮ ],ಎಚ್ .ಜಿ ರಾಧಾದೇವಿ ,ಸಾಯಿಸುತೆ ,ಉಷಾ ನವರತ್ನ ರಾವ್, ಏನ್.ಪಂಕಜ , kodagina gouramma ,h.es.paarvati. hiige aneka kaadambarigaartiyaru kannada saahitya kshetrakke tammade aada vishistha seve sallisiddaare.
vijayaa dabbe,vijayasree ,baanu mastaq, h.es.muktaayakka,innu muntaadavaru kannada kavana lokadalli tammade staanagalannu padedukondiddaare.
[ mundina blognalli muktaaya]






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ