ಭಾನುವಾರ, ನವೆಂಬರ್ 1, 2009

೧೪]ನವಂಬರ್ ೧ ,ನಮ್ಮ ಕನ್ನಡ [ಕರ್ನಾಟಕ] ರಾಜ್ಯೊತ್ಸವ ಭಾಗ - ೧

ಶ್ರೀ ವಿರೋಧಿನಾಮ ಸಂವತ್ಸರ ದಕ್ಷಿಣಾಯಣ ಶರದೃತು ಕಾರ್ತಿಕ ಮಾಸ -ಶುಕ್ಲಪಕ್ಷ -ಚತುರ್ದಶಿ ಭಾನುವಾರ ,
ನವಂಬರ್ - ,೨೦೦೯ ಇಂದು ನಮ್ಮ ಕನ್ನಡ ರಾಜೋತ್ಸವ.
ಭಾಷೆಗಳ ಆಧಾರದ ಮೇಲೆ ,ಭಾರತ ಸರ್ಕಾರ ೧೯೫೬ ರ ನವಂಬರ್ ೧ ರಂದು ರಾಜ್ಯಗಳನ್ನು ಪುನರ್ ವಿಂಗಡಣೆ ಮಾಡಿತು.
೧೯೫೬ ರ ಹಿಂದೆ ನಮ್ಮ ಕನ್ನಡನಾಡು ಮೈಸೂರು ,ಬಾಂಬೇ ,ಮದ್ರಾಸ್ ,ಹಾಗು ಹೈದರಾಬಾದ್ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿತ್ತು .ಈ ಕನ್ನಡ ಮಾತನ್ನಾಡುವ ಪ್ರದೆಶಗಳನ್ನೆಲ್ಲ ಸೇರಿಸಿ ನಮ್ಮ ರಾಜ್ಯ ಉದಯವಾಯಿತು .ಆಗ ಅದು ಮೈಸೂರು ರಾಜ್ಯ ವಾಯಿತು.೧೯೭೩ರ ನವಂಬರ್ ೧ ರಂದು ,ನಮ್ಮ ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ಡಿ .ದೇವರಾಜಅರಸ್ ನಮ್ಮ ರಾಜ್ಯಕ್ಕೆ 'ಕರ್ನಾಟಕ' ಎಂದು ಪುನರ್ ನಾಮಕರಣ ಮಾಡಿದರು .ಈ ಹಿನ್ನೆಲೆಯಲ್ಲಿ ನವಂಬರ್ ೧ ನ್ನು ಕನ್ನಡ ರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತಿದೆ.
"ಕರ್ನಾಟಕದ ಬಗ್ಗೆ ಯಾವ ಕನ್ನಡಿಗನ ಹೃದಯ ಮಿಡಿಯುವುದಿಲ್ಲವೋ ,ಅದು ಹೃದಯವಲ್ಲ ಕಲ್ಲಿನ ಬಂಡೆ' ಎಂದ ಕರ್ನಾಟಕ ಕುಲ ಪುರೋಹಿತ ,ಕನ್ನಡ ತಪಸ್ವಿ ಆಲೂರು ವೆಂಕಟ ರಾಯರು ಕನ್ನಡ ನಾಡಿನ ಮೂಲೆ ಮೂಲೆಗೂ ತಿರುಗಿ ಕನ್ನಡಕ್ಕಾಗಿ ಶ್ರಮಿಸಿದರು . ಅಲೂರು ಮತ್ತು ಅನೇಕ ಅನೇಕ ಹಿರಿಯರ ಪರಿಶ್ರಮದ ಫಲವಾಗಿ ೧೯೫೬ ರಲ್ಲಿ
ಅನೇಕ ಹಿರಿಯರ ಪರಿಶ್ರಮಏಕೀಕೃತ ಕನ್ನಡನಾಡು ರೂಪಗೊಂಡಿತು ಎಂಬುದನ್ನೂ ನಾವುಮರೆಯಲಾಗದು.
ಕನ್ನಡ ಭಾಷೆ ,ನೆಲ ಜಲ ಅಭಿವೃದ್ದಿಗಾಗಿ ಅನೇಕ ಮಹನೀಯರುಗಳು ಅವಿರತ ಶ್ರಮವಹಿಸಿದ್ದಾರೆ .ಅವರುಗಳಲ್ಲಿ ಕೆಲವರನ್ನಾದರೂ ಸಮಯದಲ್ಲಿ ನೆನಪು ಮಾಡಿಕೊಳ್ಳೋಣ.
ತಳುಕಿನ ವೆಂಕಣ್ಣಯ್ಯ :
೦೧-೧೦-೧೮೮೫ ರಂದು ಚಿತ್ರದುರ್ಗ ಜಿಲ್ಲೆಯ 'ತಳುಕು' ಎಂಬಲ್ಲಿ ಜನಿಸಿದ ಟಿ.ಎಸ್.ವೆಂಕಣ್ಣಯ್ಯ ಕನ್ನಡದ 'ಅಶ್ವಿನಿ ದೇವತೆ' ಗಳಲ್ಲಿ ಒಬ್ಬರು.
ಮೈಸೂರು ವ್ವಿಶ್ವವಿದ್ಯಾಲಯದ ಪ್ರಥಮ ಕನ್ನಡ ಪ್ರಾಧ್ಯಾಪಕರು .ಹರಿಶ್ಚಂದ್ರ ಕಾವ್ಯ ಸಂಗ್ರಹ ,ಕರ್ನಾಟಕ ಕಾದಂಬರಿ ಸಂಗ್ರಹ ,ಬಸವರಾಜ ದೇವರಗಳೆ,ಸಿದ್ದರಾಮಚರಿತೆಯ ಸಂಗ್ರಹ ,ಪ್ರಾಚೀನ ಸಾಹಿತ್ಯ -ಇವರ ಮುಖ್ಯ ಕೃತಿಗಳು.

ತಿರುಮಲಾಂಬ:
ಕನ್ನಡದ ಪ್ರಪ್ರಥಮ ಕಾದಂಬರಿಗಾರ್ತಿ .ನಂಜನಗೂಡಿನಲ್ಲಿ [೦೧-೧೦-೧೮೮೭] ಜನನ.೧೯೧೩ರಲ್ಲಿ 'ಸತಿ ಹಿತೈಷಿಣಿ 'ಗ್ರಂಥ ಮಾಲೆ ಆರಂಬಿಸಿ
"ಸುಶೀಲ' ಎಂಬ ಕಾದಂಬರಿ ಪ್ರಕಟಿಸಿ ಕನ್ನಡದ ಮೊದಲ ಪ್ರಕಾಶಕಿ -ಮುದ್ರಕಿ ಎನಿಸಿಕೊಂಡರು.
ಹುಯಿಲಗೋಳ ನಾರಾಯಣರಾಯರು :
'ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು 'ಎಂಬ ತಮ್ಮ ಗೀತೆಯಿಂದ ಜನಮನ ಸೂರೆಗೊಂಡು ,ಪ್ರಖ್ಯಾತಿಯಾದ ಹುಯಿಲಗೋಳನಾರಾಯಣರಾಯರು ,ಉತ್ತಮ ಶಿಕ್ಷಕರು ,ವಕೀಲರಾಗಿದ್ದರು. ಇವರು ಪ್ರಶಸ್ತಿವಿಜೇತ ನಾಟಕಕಾರರು ಆಗಿದ್ದರು.

ಡಾ.ಶಿವರಾಮ ಕಾರಂತರು:
೧೦-೧೦-೧೯೦೨ ರಂದು ದಕ್ಷಿಣ ಕನ್ನಡ ಜಿಲ್ಲೆಯ ಕೋಟಾ ದಲ್ಲಿ ಜನಿಸಿದ ಡಾ.ಶಿವರಾಮ ಕಾರಂತರು ಕಡಲ ತೀರದ ಭಾರ್ಗವ ಎಂದೇ ಪ್ರಖ್ಯಾತಿ .೧೯೫೫ ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾಗಿದ್ದ ಇವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕೃತರು .ಇವರು ಯಕ್ಷಗಾನ ಕಲೆಯಲ್ಲಿ ಅತ್ಯಂತ ನಿಪುಣರಾಗಿದ್ದರು


ಡಾ.ಮಾಸ್ತಿ ವೆಂಕಟೇಶ ಅಯಂಗಾರ್:
'ಸಣ್ಣ ಕತೆಗಳ ಬ್ರಹ್ಮ 'ಎಂದೇ ಪ್ರಸಿದ್ದ. ಕನ್ನಡದ ಆಸ್ತಿ, ಮಾಸ್ತಿ ವೆಂಕಟೇಶ ಅಯಂಗಾರ್ ಹುಟ್ಟಿದ್ದು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ,೦೬-೦೮-೧೮೯೧ ರಂದು. ಇವರು ಜ್ಞಾನ ಪೀಠ ಪ್ರಶಸ್ತಿ ವಿಜೇತರು. ಕತೆಗಾರರೂ ,ನಾಟಕಕಾರರೂ,ವಿಮರ್ಶಕರೂ, ಪತ್ರಿಕಾ ಸಂಪಾದಕರೂಆಗಿದ್ದರು.೧೯೨೯ರ ಬೆಳಗಾವಿ , ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು .ಇವರು 'ಶ್ರೀನಿವಾಸ' ಎಂಬ ಕಾವ್ಯ ನಾಮ ದಿಂದಪ್ರಸಿದ್ದರು.

ಪಂಜೆ ಮಂಗೇಶರಾಯರು:
ಇವರು ಕನ್ನಡ ಶಿಶು- ಸಾಹಿತ್ಯದ ಪಿತಾಮಹರು.ಇವರ ಕಾವ್ಯ ನಾಮ 'ಕವಿಶಿಷ್ಯ'. ದಿನಾಂಕ ೨೨-೦೨-೧೮೭೪ ರಲ್ಲಿ ಜನಿಸಿದರು. ಕನ್ನಡ ಪಂಡಿತರುಶಿಕ್ಷಣ ತಜ್ಞರು ,ಅರ್ಥಶಾಸ್ತ್ರ ವಿಶಾರದ ರಾಗಿದ್ದರು. ಕನ್ನಡದಲ್ಲಿ ಸುಧಾರಣೆಗಳು,ಮತ್ತು ಕೋಟಿ ಚನ್ನಯ್ಯ ಇವರ ಕೃತಿಗಳು. ೧೯೩೪ ರಲ್ಲಿ ನಡೆದಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು .

,
'ಸತ್ಯಕಾಮ' [ಅನಂತಾಚಾರ್ಯ ಕೃಷ್ಣಾಚಾರ್ಯ ಶಹಾಪುರ] :
ದಿನಾಂಕ ೦೨-೦೩-೧೯೨೦ ರಲ್ಲಿ ಬಿಜಾಪುರ ಜಿಲ್ಲೆಯ ಗಲಗಲಿ ಯಲ್ಲಿ ಜನಿಸಿದರು.ಕತೆ ,ಕವಿತೆ ,ಕಾದಂಬರಿ ಗಳನ್ನೂ ಬರೆದು ಪ್ರಸಿದ್ದರಾಗಿದ್ದರು.
ಸ್ವಾತಂತ್ರ್ಯ ಚಳುವಳಿ ಕಾಲದಲ್ಲಿ ಪತ್ರಿಕೆಗಳ ಸಂಪರ್ಕ ಹೊಂದಿದ್ದರು.'ಕಪಿಲ ವಸ್ತು','ರಾಜಬಲಿ ' ,ಬೃಹಸ್ಪತಿ' ಲಾವಣ್ಯ'ಶೃಂಗಾರ ತೀರ್ಥ ' ಚಂಡ-ಪ್ರಚಂಡ ಇವರ ಕೃತಿಗಳು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತರು.

ಕಾರ್ನಾಡು ಸದಾಶಿವರಾಯರು:
ದಿನಾಂಕ ೦೧-೦೪ ೧೮೮೧ ರಲ್ಲಿ ಮಂಗಳೂರಿನಲ್ಲಿ ಜನಿಸಿದರು.ಇವರು ವಕೀಲರಾಗಿದ್ದರು.ಅಪ್ಪಟ ಗಾಂಧೀ ವಾದಿಗಳು. ಗಾಂಧೀಜಿಯವರೊಂದಿಗೆಸತ್ಯಾಗ್ರಹ ಪ್ರತಿಜ್ಞೆಗೆ ಸಹಿ ಹಾಕಿದ ಮೊದಲ ಕನ್ನಡಿಗರು.ದೇಶ ಸೇವೆಗಾಗಿ ತಮ್ಮ ಆಸ್ತಿ-ಪಾಸ್ತಿ ಆರೋಗ್ಯಗಳನ್ನು ಮುಡುಪಾಗಿಟ್ಟ ರು.
ಬೆಂಗಳೂರಿನ ಪ್ರಖ್ಯಾತ ಬಡಾವಣೆಯೊಂದಕ್ಕೆ ಇವರ ಹೆಸರನ್ನು ಇಟ್ಟಿರುವುದನ್ನು ಗಮನಿಸಬಹುದು.

ಡಾ.ರೆವರೆಂಡ್ ಕಿಟ್ಟೆಲ್:
ಜರ್ಮನಿಯಲ್ಲಿ ೦೭-೦೪-೧೮೩೨ ರಲ್ಲಿ ಹುಟ್ಟಿದರು.ನಮ್ಮ ಭಾರತ ದೇಶಕ್ಕೆ ಆಗಮಿಸಿ ಕರ್ನಾಟಕದಲ್ಲಿ ನೆಲೆಸಿದ ಇವರು ಕನ್ನಡ ಭಾಷೆಗೆ ಅಪೂರ್ವ
ಸಲ್ಲಿಸಿದರು. ಕನ್ನಡ -ಇಂಗ್ಲಿಷ್ ನಿಘಂಟು,ಗ್ರಾಮರ್ ಆಫ್ ದಿ ಕನ್ನಡ ಲಾಂಗ್ವೇಜ್ ,ಮತ್ತು ಸಂಪಾದಿತ ಕೃತಿಗಳಾದ 'ಕೇಶಿರಾಜನ -'ಶಬ್ದಮಣಿ ದರ್ಪಣ',ನಾಗವರ್ಮನ 'ಚಂದೊಮ್ಬುಧಿ ' ಕಿಟ್ಟೆಲ್ ಪಾಂಡಿತ್ಯಕ್ಕೆ ಸಾಕ್ಷಿ.
[ಮುಂದಿನ ಬ್ಲಾಗ್ ನಲ್ಲಿ ಮತ್ತಷ್ಟು ಮಹನಿಯರುಗಳು]

ದಿನದ ಸ್ಪಂದನ:
ಕನ್ನಡ ನಾಡು,ನುಡಿ,ಸಂಸ್ಕೃತಿಗಳ ಸಂವರ್ದನೆ ಹಾಗು ಸಂರಕ್ಷಣೆಗಾಗಿ ಕಳೆದ ತೊಂಬತ್ತು ವರ್ಷಗಳಿಂದ ಶ್ರಮಿಸುತ್ತಾ ಬಂದಿರುವ ಏಕೈಕಪ್ರಾತಿನಿಧಿಕ ಸಂಸ್ಥೆ :ಕನ್ನಡ ಸಾಹಿತ್ಯ ಪರಿಷತ್ತು .
ಪರಿಷತ್ತಿನ ಬಹುಮುಖೀ ಅಸ್ತಿತ್ವದ ಒಂದು ಪ್ರಧಾನ ಕಾರ್ಯ ಕ್ಸೇತ್ರ :ಪುಸ್ತಕ ಪ್ರಕಟಣೆ .ಈವರೆಗೆ ಒಂದು ಸಾವಿರಕ್ಕೂ ಹೆಚ್ಚು ಅಮೂಲ್ಯ ಕೃತಿಗಳುಪ್ರಕಟಗೊಂಡು ನಾಡಿನ ತುಂಬಾ ಅಕ್ಷರದ ಬೆಳಕನ್ನು ಹರಡಿವೆ.ಕನ್ನಡ ಜನತೆ ಕೂಡ ಅತ್ಯಂತ ಪ್ರೀತಿಯಿಂದ ಜ್ಞಾನ ದಾಸೋಹದಲ್ಲಿಪಾಲುಗೊಂಡಿದೆ.
[ಕನ್ನಡ ನಾಡಿನ ಚರಿತ್ರೆ -ಭಾಗ - ಹಿನ್ನುಡಿ ಯಿಂದ ]


ಕನ್ನಡ ಕಂದನ ಮೊದಲ ತೊದಲ ನುಡಿ -'ಅಮ್ಮ'
ನಂತರ ಏನಿದ್ದರೂ ಉಳಿದ 'ಸರಿಗಮ
___
------------------------------------------------------ಓಂ--------------------------------------------------------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ