ಮಂಗಳವಾರ, ನವೆಂಬರ್ 3, 2009

೧೬]ನವಂಬರ್ ೧ ಕನ್ನಡ ರಾಜ್ಯೋತ್ಸವ -ಭಾಗ-೩.

[ಕನ್ನಡ ರಾಜ್ಯೋತ್ಸವ -ಭಾಗ ೨ ರ ಮುಂದವರೆದ ಭಾಗ]
ಶ್ರೀ ವಿರೋಧಿನಾಮ ಸಂವತ್ಸರ ದಕ್ಷಿಣಾಯಣ ಶರದೃತು ಕಾರ್ತಿಕ ಮಾಸ ಕೃಷ್ಣ ಪಕ್ಷ ,ಪಾಡ್ಯ -ತಾ.೦೩-೧೧-೨೦೦೯ .
ಕನ್ನಡ ನಾಡಿನ ಏಳ್ಗೆಗಾಗಿ ಸಾಹಿತ್ಯ ಕ್ಷೇತ್ರವಲ್ಲದೆ ಇನ್ನು ಅನೇಕ ಕ್ಷೇತ್ರಗಳಲ್ಲಿ ,ಅನೆಕ ಮಹನಿಯರುಗಳು ದುಡಿದಿದ್ದಾರೆ.ಅದು,ವೈಜ್ಞಾನಿಕ ಕ್ಷೇತ್ರವಿರಬಹುದು,ವಿದ್ಯಾ ಕ್ಷೇತ್ರವಿರಬಹುದು,ವ್ಯವಸಾಯ ಕ್ಷೇತ್ರವಿರಬಹುದು,ಸಂಗೀತ ಕ್ಷೇತ್ರವಿರಬಹುದು,ಸಿನಿಮಾ ಕ್ಸೆತ್ರವಿರಬಹುದು ,ಸೇವಾ ಕ್ಷೇತ್ರವಿರಬಹುದು,ಕ್ರೀಡಾ ಕ್ಷೇತ್ರವಿರಬಹುದು,ಇಂಜಿನೀರಿಂಗ್ ಕ್ಷೇತ್ರವಿರಬಹುದು,ಔದ್ಯೋಗಿಕ ಕ್ಷೇತ್ರವಿರಬಹುದು,ಹೀಗೆ ನಾಡಿಗಾಗಿ ಹೋರಾಡಿದವರು ,ನುಡಿಗಾಗಿ ಹೋರಾಡಿದವರು ,ಕನ್ನಡ ಸಂಸ್ಕೃತಿಯ ಉಳುವಿಗಾಗಿಹೋರಾಡಿದವರು,ಕಲೆಯ ಏಳ್ಗೆಗಾಗಿ ಜೀವನವನ್ನೇ ಮುಡಿಪಾಗಿಟ್ಟವರು,ರಾಜಕೀಯ,ಆರ್ಥಿಕ,ಸಾಮಾಜಿಕ, ಸಮಾನತೆ, ನೈತಿಕತೆ,ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಅನೇಕ ಮಹನೀಯರುಗಳು ಕನ್ನಡ ಭಾಷೆಯ,ನಾಡು ನುಡಿಯ ಬಗ್ಗೆ ದುಡಿದು ತಮ್ಮದೇ ಛಾಪು ಮೂಡಿಸಿದ್ದಾರೆ .ಹಲವರನ್ನಾದರು ನೆನೆಯುವುದು ಇಂದಿನ ಕರ್ತವ್ಯವಾದೀತು.
ಸರ್.ಎಂ.ವಿಶ್ವೇಶ್ವರಯ್ಯ ನವರು ಆಧುನಿಕ ಮೈಸೂರಿನ ನಿರ್ಮಾಪಕ ರೆನಿಸಿಕೊಂಡವರು. ಪ್ರಖ್ಯಾತ ಇಂಜಿನೀಯರ್ ,ಹಾಗು ದಕ್ಷ ಆಡಳಿತಗಾರರಾಗಿದ್ದರು .ಅವರು ಇಂಜಿನೀಯರ್ ಆಗಿ ನಿರ್ವಹಿಸಿದ ಅನೇಕ ಕಾರ್ಯ ಯೋಜನೆಗಳು ಅದ್ಭುತವೆನಿಸಿದವು. ಕೃಷ್ಣರಾಜ ಸಾಗರ ಅಣೆಕಟ್ಟು ,ವಾಣಿವಿಲಾಸ ಸಾಗರ ,ಶರಾವತಿ ವಿದ್ಯುತ್ ಯೋಜನೆ ,ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ,ಹೀಗೆ ಒಂದೇ ,ಎರಡೇ,ಎಲ್ಲಾ ವಿಶಿಷ್ಟ ಯೋಜನೆಗಳೇ.
ವೈಜ್ಞಾನಿಕ ಕ್ಷೇತ್ರ ದಲ್ಲಿ ಡಾ.ಯು.ಅರ್ .ರಾವ್,ಅವರನ್ನು ಮರೆಯುವುದು ಉಂಟೆ? ಇವರು ಆಂತರ ರಾಷ್ಟ್ರೀಯ ಖ್ಯಾತೀಯ ಬಾಹ್ಯಾಕಾಶ ವಿಜ್ಞಾನಿ."ಆರ್ಯಭಟ"ಉಡಾವಣೆಯ ನೇತೃತ್ವ ವಹಿಸಿದ್ದವರು.
ಕನ್ನಡ ಸಿನಿಮಾ ಪ್ರಪಂಚ ಅನೇಕ ಅದ್ಭುತಗಳನ್ನು ಸಾಧಿಸಿದೆ. 'ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ 'ಪ್ರಶಸ್ತಿ ವಿಜೇತ ನಮ್ಮ ಕೆಂಟುಕಿ ಕರ್ನಲ್,ಡಾ.ರಾಜಕುಮಾರ್ ಕನ್ನಡಿಗರ ಹ್ರುನ್ಮನಗಳಲ್ಲಿ ನೆಲೆಸಿರುವ ಮೇರು ನಟರು. ಕನ್ನಡ ಚಿತ್ರರಂಗ ವೆಂದರೆ ನಮ್ಮ ರಾಜಕುಮಾರ ಎನ್ನುವಂತೆ ಮನೆ ಮಾತಾಗಿದ್ದವರು.
ಕುಮಾರ ತ್ರಯರಲ್ಲಿ ಇನ್ನಿಬ್ಬರು,ಕಲ್ಯಾಣ್ ಕುಮಾರ್,ಹಾಗು ಉದಯಕುಮಾರ.ಇವರುಗಳೂ ಸಹ ಅಂದಿನ ಕಾಲಕ್ಕೆ ಮೇರು ನಟರುಗಳೇ. ಡಾ.ವಿಷ್ಣುವರ್ಧನ್ ,ಅಂಬರೀಶ್,ಅನಂತನಾಗ್, ಶಂಕರನಾಗ್,ಕ.ಎಸ್.ಆಶ್ವಥ್. ಆರ್.ಏನ್ .ನಾಗೇಂದ್ರ ರಾಯರು, ನರಸಿಂಹ ರಾಜು, ಬಾಲಕೃಷ್ಣ,,ದಿನೇಶ್,ದ್ವಾರಕೀಶ್, ರಾಜೇಶ್ ,ಗಂಗಾಧರ್,ಶ್ರೀನಿವಾಸಮೂರ್ತಿ ,ತೂಗುದೀಪ ಶ್ರೀನಿವಾಸ್ ,ಸುಂದರ ಕೃಷ್ಣ ಅರಸ್, ಶಕ್ತಿ ಪ್ರಸಾದ್ ,ಹೀಗೆ ನಟರುಗಳ ದೊಡ್ಡ ಸಾಲು.
ಇನ್ನು ಮಹಿಳಾ ಅಭಿನೆತ್ರೆ ಯರಲ್ಲಿ ಪಂಡರಿಬಾಯಿ,ಹರಿಣಿ ,ಲೀಲಾವತಿ, ಬಿ.ಸರೋಜಾದೇವಿ,ಸಾಹುಕಾರ್ ಜಾನಕೀ,ಉದಯಚಂದ್ರಿಕ , ಕಲ್ಪನಾ,,ಜಮುನ , ಜಯಂತಿ,ಭಾರತಿ,ಆರತಿ,ಲಕ್ಷ್ಮಿ, ಭವ್ಯ, ಮುಂತಾದ ವರು ಕನ್ನಡ ಚಿತ್ರರಂಗದಲ್ಲಿ ಪ್ರಮುಖರೆನಿಸಿದವರು.
ಇಲ್ಲಿ ಎಲ್ಲಾ ರಂಗಗಳಲ್ಲಿ ಸೇವೆ ಸಲ್ಲಿಸಿದವರನ್ನು ನೆನೆಸಿಕೊಳ್ಳುವುದು ಕರ್ತವ್ಯವಾದರೂ ಅದು ಕಷ್ಟ ಸಾಧ್ಯ.ಆದರಿಂದ ಯಾರು ತಪ್ಪು ತಿಳಿದು ಕೊಳ್ಳು ವಂತಿಲ್ಲ.
ಮತ್ತೊಮ್ಮೆ ಕನ್ನಡ ರಾಜ್ಯೋತ್ಸವ ಬಂದಿದೆ .ನವಂಬರ್ ತಿಂಗಳು ಪೂರ್ತ ಕನ್ನಡ ರಾಜ್ಯೋತ್ಸವ.ನವಂಬರ್ ತಿಂಗಳಿನಲ್ಲಿ ಮಾತ್ರ ಕನ್ನಡದ ಬಗ್ಗೆ ಚಿಂತನೆ,ಜಿಜ್ಞಾಸೆ, ಮರು ಹುಟ್ಟು ಪಡೆಯುತ್ತದೆ.ಅಂದರೆ ಆ ತಿಂಗಳಿನಲ್ಲಿ ಮಾತ್ರ ಕನ್ನಡದ ಬಗ್ಗೆ ಚಿಂತನ-ಮಂಥನ ನಡೆಯಬೇಕೆ? ಉಳಿದ ಹನ್ನೊಂದು ತಿಂಗಳೂ ಕನ್ನಡದ ಬಗ್ಗೆ ಅಸಡ್ಡೆ ಯಾಕೆ? ಕನ್ನಡ ಭಾಷೆ ಕನ್ನಡ ರಾಜ್ಯದಲ್ಲಿಯೇ ಮೂಲೆಗುಂಪಾಗಿ ,ಕನ್ನಡ ಭಾಷಿಕರು ಮುಲೆಗುಂಪಾಗಬೇಕೆ? ಕರ್ನಾಟಕ ರಾಜ್ಯಕ್ಕೆ ವಲಸೆ ಬಂದಿರುವವರೇ ರಾಜ್ಯದ ಸಾರ್ವಭೌಮ ರಾಗಬೇಕೆ? ಕನ್ನಡಿಗರೇ ಕನ್ನಡ ರಾಜ್ಯದಲ್ಲಿ ಪರಕೀಯರಾಗಬೇಕೆ? ಕನ್ನಡ ,ಕರ್ನಾಟಕ್ ರಾಜ್ಯ ತಬ್ಬಲಿಯಾಗುತ್ತಿವೆಯಾ? ಕಾಲವೇ ಉತ್ತರಿಸಬೇಕಿದೆ..
ಕನ್ನಡ ಭಾಷೆ ,ಸಂಸ್ಕೃತಿ ಯನ್ನು ಉಳಿಸಬೇಕಾದ ಅನಿವಾರ್ಯತೆ ಎಂದಿಗಿಂತ ಇಂದು ಹೆಚ್ಹಾಗಿರುತ್ತದೆ.

ಗಮನಿಸಬೇಕಾದ ಒಂದಂಶವಿದೆ.ಇತ್ತೀಚಿಗೆ ಉತ್ತರ ಕರ್ನಾಟಕದ ಬಹುತೇಕ ಭಾಗಗಳು ಮಳೆಯ ಅಬ್ಬರದಿಂದ ತುಂಬಾ ತೊಂದರೆಗೆ ಸಿಲುಕಿವೆ.ಇದನ್ನು ಮನಗಂಡ ಕನ್ನಡ ಜನತೆ ಈ ಭಾರಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುವುದಿಲ್ಲ ಎಂದು ತೀರ್ಮಾನಿಸಿ ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ.ಎಲ್ಲೂ ಅದ್ದೂರಿ ಸಮಾರಂಭಗಳು ನಡೆದಿಲ್ಲ.ನಮ್ಮ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗಳನ್ನೂ ಪ್ರಕಟಿಸಿಲ್ಲ. ಅದು ನೆರೆ ಹಾವಳಿಯ ಪರಿಹಾರ ಕಾರ್ಯದತ್ತ ಮನ ಮಾಡಿದೆ.
ಒಂದು ಅತ್ಯಂತ ಸಂತಸದ ಸಮಾಚಾರವೆಂದರೆ ಬಂಗಾರದ ಮನುಷ್ಯನಿಗೆ ಭಾರತದ ಗೌರವಾರ್ಪಣೆ.'ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ' ಪುರುಸ್ಕೃತ ಡಾ. ರಾಜಕುಮಾರ್ ಅವರ ಅಂಚೆ ಚೀಟಿ ನವಂಬರ್ ೧ ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ.ರೂ ೫ ರ ಮುಖ ಬೆಲೆಯ ಈ ಅಂಚೆ ಚೀಟಿ ಯನ್ನು ಮುಖ್ಯ ಮಂತ್ರಿ ಯಡಿಯೂರಪ್ಪ ಬಿಡುಗಡೆ ಮಾಡಿದರು .

ಈ ದಿನದ ಸ್ಪಂದನ:
'ವಂದೇ ಮಾತರಂ'ರಚಿಸಿದ ಬಂಕಿಮ ಚಂದ್ರ ಚಟರ್ಜಿ-
'ವಂದೇ ಮಾತರಂ'ಈ ರಾಷ್ಟ್ರಭಕ್ತಿ ಗೀತೆಯನ್ನು ಕೇಳುತ್ತಿದ್ದಂತೆಯೇ ,ಹಾಡುತ್ತಿದ್ದಂತೆಯೇ ನಾವುಗಳೆಲ್ಲಾ ಪುಳಕ ಗೊಳ್ಳುತ್ತೇವೆ ಅಲ್ಲವೇ?ಈ ಗೀತೆಯನ್ನು ರಚಿಸಿದ ಅಪ್ರತಿಮ ದೇಶಭಕ್ತ ಕವಿ ,ಕಾದಂಬರಿಕಾರ ಬಂಕಿಮ ಚಂದ್ರ ಚಟರ್ಜಿ ಯವರು ,ಬಂಗಾಳಿಗಳು.ಪದವಿ ಪಡೆದ ಬಂಗಾಲದ ಮೊದಲ ಇಬ್ಬರಲ್ಲಿ ಇವರೂ ಒಬ್ಬರು.ಇವರ ಪೂರ್ತಾ ಹೆಸರು ಬಂಕಿಮ ಚಂದ್ರ ಚಟ್ಟೋಪಾಧ್ಯಾಯ .ಇವರು ೨೭,ಜೂನ್ ೧೮೩೮ ರಂದು ಬಂಗಾಲದ ಕತಲಾಪುರ ಎಂಬಲ್ಲಿ ಜನಿಸಿದರು.ಆನಂದಮಠ ಎಂಬ ಕಾದಂಬರಿಯ ಬಗ್ಗೆ ಯಾರಿಗೆ ಗೊತ್ತಿಲ್ಲ ,ಆ ಕೃತಿಯ ಕರ್ತೃ ಇವರೇ .ಸ್ವಾತಂತ್ರ್ಯ ಪೂರ್ವದಲ್ಲಿ 'ವಂದೇ ಮಾತರಂ' ಗೀತೆ ,ಸ್ವಾತಂತ್ರ್ಯ ಹೋರಾಟಗಾರರಲ್ಲಿ ಸ್ಪೂರ್ತಿ ಯನ್ನು ತುಂಬಿತ್ತು.ಒಗ್ಗಟ್ಟನ್ನು ಪ್ರೇರೆಪಿಸುತ್ತಿತ್ತು .ಛಲವನ್ನು ತಂದು ಕೊಟ್ಟಿತ್ತು .ಇಂತಹದೊಂದು ಪರಮ ದೇಶಭಕ್ತಿ ಗೀತೆಯನ್ನು ನಮಗೆ ಕೊಟ್ಟ ಬಂಕಿಮ ರನ್ನು ನಾವು ಅನುದಿನವೂ ನೆನೆಯೋಣ.


ಹೀಗೊಂದು ಕನ್ನಡ ಕವನ:
ಮಾತನಾಡಿ
ಯಾವಾಗಲೂ
ಸುಂದರ ಭಾಷೆ ಕನ್ನಡ.
ಓದಿ ,ಯಾವಾಗಲೂ
ಸರಳ ಭಾಷೆ ಕನ್ನಡ.
ಬೇಡ ನಮಗೆ ,
ಎನ್ನಡ ,ಪನ್ನಡ,
ಮಮ್ಮಿ-ಡ್ಯಾಡಿ ಎನಬೇಡಿ ,
ತರಬೇಡಿ ಕನ್ನಡಕ್ಕೆ
ಅವಗಡ!
[ನನ್ನ "ಬಣ್ಣಗಳು" ಎಂಬ ಕವನ ಸಂಕಲನದಿಂದ]

***************************************ಓಂ********************************************************







ಭಾನುವಾರ, ನವೆಂಬರ್ 1, 2009

೧೫]ನವಂಬರ್-೧ ನಮ್ಮ ಕನ್ನಡ [ಕರ್ನಾಟಕ] ರಾಜ್ಯೋತ್ಸವ . ಭಾಗ-೨ .


ನವಂಬರ್
-೧,ನಮ್ಮ ಕನ್ನಡ ರಾಜ್ಯೋತ್ಸವ [ಮುಂದುವರೆದ ಭಾಗ]
ಬಿ .ಎಂ.ಶ್ರೀ :
ದಿನಾಂಕ ೦೩-೦೧ -೧೮೮೪ ರಲ್ಲಿ ಜನಿಸಿದ ಆಚಾರ್ಯ ಬಿ.ಎಂ.ಶ್ರೀಕಂಠಯ್ಯ [ಇವರು ಬಿ.ಎಂ.ಶ್ರೀ ಎಂದೇ ಪ್ರಸಿದ್ದರು ]ನವರು ಕನ್ನಡದ ಕಣ್ವ ಋಷಿ ಎನಿಸಿಕೊಂಡವರು . 'ಇಂಗ್ಲಿಷ್ ಗೀತೆಗಳು ' ,'ಗದಾಯುದ್ದ ನಾಟಕಂ ', 'ಕನ್ನಡ ಬಾವುಟ ', ಮುಂತಾದ ಕೃತಿಗಳನ್ನು ರಚಿಸಿರುವ ಬಿ.ಎಂ.ಶ್ರೀ ಶಿಕ್ಷಕ ರಾಗಿದ್ದರು .ಗ್ರಂಥ ಸಂಪಾದಕ ,ಕವಿ ,ಹಾಗು ನಾಟಕಕಾರರಾಗಿದ್ದ ಇವರು ಕನ್ನಡ ಕವಿ ಪುಂಗವರು.

ಕನ್ನಡ ಕವಿ ಮುದ್ದಣ:
ನಂದಳಿಕೆ ನಾರಣಪ್ಪ ಮುದ್ದಣ ದಿನಾಂಕ ೨೪-೦೧-೧೮೭೦ ರಲ್ಲಿ ಜನಿಸಿದರು.ಇವರು ಹೊಸಗನ್ನಡ ಕಾವ್ಯಕ್ಕೆ ನಾಂದಿ ಹಾಡಿದವರು . 'ರಾಮಾಶ್ವ ಮೇಧಂ 'ಇವರ ಮೌಲಿಕ ಕೃತಿ .ಕನ್ನಡ ಕತ್ತುರಿಯಲ್ತೆ ಎಂದ ಅವರು ಪ್ರಾತ:ಸ್ಮರಣೀಯರು.

ದ .ರಾ .ಬೇಂದ್ರೆ :
೩೧-೦೧-೧೮೯೬ ರಲ್ಲಿ ಧಾರವಾಡದಲ್ಲಿ ಜನಿಸಿದ ಡಾ.ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕನ್ನಡದ ಪ್ರಸಿದ್ದ ಕವಿಗಳು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಇವರು "ವರಕವಿ' ಎಂದೇ ಪ್ರಸಿದ್ದರು.ಜ್ಞಾನಪೀಠ ಪ್ರಶಸ್ತಿ ಯನ್ನೂ ಪಡೆದಿರುವ ಇವರು ,'ನಾಕು ತಂತಿ ' 'ಅರಳುಮರಳು' 'ನಾದಲೀಲ. ಶಿವಮೊಗ್ಗಾ ದಲ್ಲಿ ನಡೆದ ೨೭ನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು.

ಕೆ.ಎಸ್ .ನ.:
'ಶೃಂಗಾರ ಕವಿ' ಎಂದೇ ಪ್ರಸಿದ್ದರಾಗಿದ್ದ ಡಾ.ಕೆ.ಎಸ್ ನರಸಿಂಹಸ್ವಾಮಿ ೨೬-೦೧ ೧೯೧೫ರಲ್ಲಿ ಜನಿಸಿದರು.'ಮೈಸೂರು ಮಲ್ಲಿಗೆ'ಕವನ ಸಂಕಲನದಿಂದ ಕನ್ನಡ ನಾಡಿನ ಮನೆಮಾತಾಗಿರುವ ಇವರು ೧೯೭೨ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ,೧೯೯೯ ರ ಕೇಂದ್ರ ಸಾಹಿತ್ಯ ಅಕಾಡೆಮಿ ಯಾ ಫೆಲೋಶಿಪ್ ಪಡೆದರು.ಇವರು ಉತ್ತಮ ಅನುವಾದಕರು,ಹಾಗು ಮಕ್ಕಳ ಸಾಹಿತ್ಯ ರಚನೆಕಾರರು . 'ಹಾಡು ಹಸೆ 'ಇವರ ಕವನ ಸಂಕಲಗಳಲ್ಲೊಂದು.

ಕು.ವೆಂ.ಪು :
ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಸ್ಥಾನ ತಂದು ಕೊಟ್ಟವರು ಈ ರಸಋಷಿ .ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಇವರ ಪೂರ್ಣ ನಾಮಧೇಯ .೨೯-೧೨-೧೯೦೪ ರಂದು ಜನಿಸಿದರು .ಕನ್ನಡ ಕಾವ್ಯ ಪ್ರಪಂಚದಲ್ಲಿ ಹೊಸ ಚಿಂತನೆ ಹುಟ್ಟುಹಾಕಿದರು .ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟರು .ಇವರ ಕವನ 'ಜಯ ಭಾರತ ಜನನಿಯ ತನುಜಾತೆ ' ನಾದ ಗೀತೆಯ ಸ್ಥಾನ ಪಡೆದಿದೆ .ಇವರು ಮಹರಾಜ ಕಾಲೇಜಿನ ಪ್ರಾಂಶುಪಾಲ ರಾಗಿ ಸೇವೆ ಸಲ್ಲಿಸಿದರಲ್ಲದೆ,ಮೈಸೂರು ವಿಶ್ವ ವಿದ್ಯಾಲಯದ ಉಪ ಕುಲಪತಿಯಾಗಿ ಕಾರ್ಯ ನಿರ್ವಹಿಸಿದರು. ಇವರ ೩೦ ಕ್ಕೂ ಹೆಚ್ಹು ಕವನ ಸಂಕಲನ ಗಳು. ಪ್ರಕಟವಾಗಿವೆ .ನಾಟಕ ,ಕಾದಂಬರಿ ಮಕ್ಕಳ ಸಾಹಿತ್ಯ ಹಾಗೂ ವಿಮರ್ಶೆಯಲ್ಲಿಯೂ ಅಸಾದಾರಣ ಪ್ರತಿಭೆ ತೋರಿದರು .ಇವರು
'ರಾಷ್ಟ್ರಕವಿ ' 'ಪದ್ಮ ವಿಭೂಷಣ''ಪಂಪ ಪ್ರಶಸ್ತಿ'ಮತ್ತಿತರ ಸನ್ಮಾನಗಳಿಗೆ ಪಾತ್ರರಾಗಿದ್ದರು.

ಬೀ chi.
೨೩-೦೪-೧೯೧೩ ರಲ್ಲಿ ಜನಿಸಿದ ರಾಯಸೇನ ಭೀಮಸೇನ ರಾವ್, ಭಿ.chi. ಎಂದೇ ಪ್ರಸಿದ್ದರು .೩೫ ಕಾದಂಬರಿ ಗಳೂ ಸೇರಿದಂತೆ ೬೦ ಕ್ಕೂ ಹೆಚ್ಹು ಕೃತಿಗಳನ್ನು ರಚಿಸಿದ್ದಾರೆ . ಇವರ 'ತಿಮ್ಮ ರಸಾಯನ' ಒಂದು ಅಪರೂಪದ ತಿಳಿಹಾಸ್ಯ ಕೃತಿ. ಅದರಲ್ಲಿ 'ತಿಮ್ಮ ನ ಪಾತ್ರ ವಿಶಿಷ್ಟ ವಾಗಿದೆ.
ಇವರು ಹಾಸ್ಯ ಬ್ರಹ್ಮ ಎಂದೇ ಪ್ರಸಿದ್ದರಾಗಿದ್ದರು .ರೇಡಿಯೋ ನಾಟಕಗಳು,ಇವರ ಮೊದಲಕ್ರುತಿ.೩೫ಕ್ಕೂ ಹೆಚ್ಹು ಕಾದಂಬರಿ ಗಳು ಅನೇಕ ನಗೆಬರಹಗಳು ,ಏಕಾಂಕ ನಾಟಕಗಳು ,ಸೇರಿ ೬೦ಕ್ಕೂ ಹೆಚ್ಹು ಕೃತಿಗಳನ್ನು ರಚಿಸಿದ್ದಾರೆ.'ದೇವರಿಲ್ಲದ ಗುಡಿ'ಅವರ ರಷ್ಯಾ ಪ್ರವಾಸ ಕಥನ .'ನನ್ನ ಭಯಾಗ್ರಫಿ'ಇವರ ಆತ್ಮಕಥನ .'ತಿಮ್ಮನ ತಲೆ'ಕೃತಿಗೆ ಮದರಾಸು ಸರ್ಕಾರದ ಪ್ರಶಸ್ತಿ ದೊರಕಿತ್ತು.'ಚಿನ್ನದ ಕಸ 'ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

ಅ.ನ.ಕೃ. :
ಇವರೊಬ್ಬ ಕನ್ನಡದ ಪ್ರಖ್ಯಾತ ಕಾದಂಬರಿಕಾರ ರಲ್ಲದೆ ಕನ್ನಡನಾಡು ,ನುಡಿಯ ಬಗ್ಗೆ ಮಂಚೂಣಿ ಹೋರಾಟಗಾರರಾಗಿ ತನು ಕನ್ನಡ ,ಮನ ಕನ್ನಡ ,ನುಡಿ ಕನ್ನಡ ಎಂದು ಬದುಕಿರುವವರೆಗೂ ನಂಬಿ ,ಕನ್ನಡಿಗರಲ್ಲಿ ಕನ್ನಡತನವನ್ನು ಬಡಿದೆಬ್ಬಿಸಿದ ಪ್ರಮುಖರು.ಅವರು ಹುಟ್ಟಿದ್ದು ಹಾಸನ
ಜಿಲ್ಲೆಯ ಅರಕಲಗೂಡು. ಮೊದಲು ನಾಟಕವೊಂದನ್ನು ರಚಿಸಿದರು .'ಮದುವೆಯೋ ಮನೆಹಾಳೋ' ಎಂಬುದೇ ಆ ನಾಟಕ.ಇವರ ಮೊದಲ ಕಾದಂಬರಿ -ಜೀವನ ಯಾತ್ರೆ. ಮುಂದೆ,ಸಂಧ್ಯಾರಾಗ ,ಉದಯರಾಗ,ಸಾಹಿತ್ಯರತ್ನ,ನಟ ಸಾರ್ವಭೌಮ ,'ವಿಜಯನಗರ ಸಾಮ್ರಾಜ್ಯ 'ಮಾಲೆಯ
ಹತ್ತು ಸಂಪುಟಗಳು,ಇಂದಿಗೂ ಮಹತ್ವದ ಕ್ರುತಿಗಳೆನಿಸಿವೆ. ೧೪ ಐತಿಹಾಸಿಕ ಕಾದಂಬರಿಗಳೂ ಸೇರಿ ೧೧೬ ಕಾದಂಬರಿಗಳನ್ನು ಇವರು ಬರೆದಿದ್ದಾರೆ.ಅಗ್ನಿಕನ್ಯೆ,ಕಣ್ಣಾ ಮುಚ್ಚಾಲೆ ,ಕಾಮನಸೋಲು ,ಕಿಡಿ,ಪಾಪಪುಣ್ಯ ಇವರ ಕಥಾ ಸಂಕಲನಗಳು.ಅನೇಕ ಸಾಮಾಜಿಕ ,ಐತಿಹಾಸಿಕ ಹಾಗು ಪೌರಾಣಿಕ ನಾಟಕಗಳನ್ನು ರಚಿಸಿ ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲಿ ಬರೆದು ಭೇಷ್ ಎನಿಸಿಕೊಂಡಿದ್ದಾರೆ.'ಕಥಾಂಜಲಿ' 'ವಿಶ್ವವಾಣಿ' 'ಕನ್ನಡ ನುಡಿ' 'ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ' ಮುಂತಾದವುಗಳ ಸಂಪಾದಕರಾಗಿ ,ಚಲನ ಚಿತ್ರೋದ್ಯಮದಲ್ಲಿ ಸಕ್ರೀಯರಾಗಿ ಪ್ರಗತಿಶೀಲ ಚಳುವಳಿಯ ಮುಂದಾಳಾಗಿ ದುಡಿದರು.

ಮಣಿಪಾಲದಲ್ಲಿ ನಡೆದ ೪೨ ನೇಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾಗಿ ಅವರನ್ನು ಆಯ್ಕೆ ಮಾಡಿ ಕನ್ನಡನಾಡು ಅವರನ್ನು ಗೌರವಿಸಿತು.
ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ,ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ,ಯನ್ನೂ ಪಡೆದ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಯಾ ಪ್ರಥಮ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.೮ ಮಂದಿ ಸಾಹಿತಿಗಳು ಅ.ನ ಕೃ. ಬಗ್ಗೆ ಗ್ರಂಥ ರಚಿಸಿ ಗೌರವ ತೋರಿದ್ದಾರೆ.

ತ.ರಾ.ಸು.:
ತಳುಕಿನ ರಾಮಚಂದ್ರಯ್ಯ ಸುಬ್ಬರಾವ್ -ತ.ರಾ.ಸು.ಎಂದೇ ಪ್ರಸಿದ್ದರು .೨೧-೦೪-೧೯೨೦ ರಲ್ಲಿ ಚಿತ್ರದುರ್ಗ ಜಿಲ್ಲೆ ,ಚಳ್ಳಕೆರೆ ತಾಲೂಕಿನ ತಳುಕು
ಎಂಬಲ್ಲಿ ಹುಟ್ಟಿದರು .ಇವರ ಐತಿಹಾಸಿಕ ಕಾದಂಬರಿಗಳನ್ನು ಓದುವುದೆಂದರೆ ಅದೊಂದು ತರಹ ರೋಮಾಂಚನ ಅನುಭವ.ಐತಿಹಾಸಿಕ ಕಾದಂಬರಿಗಳ ಸಾರ್ವಭೌಮ ರೆನಿಸಿಕೊಂಡಿದ್ದ ಇವರು,ಎಚ್.ಏ ಇತಿಹಾಸದ ಬಗ್ಗೆ ,ಸರಣಿ ಐತಿಹಾಸಿಕ ಕಾದಂಬರಿಗಳನ್ನು ಬರೆದರು.ಇವರ 'ದುರ್ಗಾಸ್ತಮಾನ' ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ.

ಹೀಗೆ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತ ಗೊಳಿಸಿದವರ ಸಾಲು ಬಹಳ ದೊಡ್ಡದು.ಇತ್ತೀಚಿನವರಲ್ಲಿ ಪ್ರೊ.ನಿಸಾರ್ ಅಹಮೆದ್ ,ಡಾ.ಅಕಬರ ಅಲಿ ,ವಿಜಯ ಸಾಸನೂರ, ಡಾ . ಎಚ್ ಎಲ್. ನಾಗೇಗೌಡ ,ಪಾಟಿಲ ಪುಟ್ಟಪ್ಪ ,ಡಾ.ಸುರ್ಯನಾಥಕಾಮತ್ ,ಡಾ.ಗಿರೀಶ್ ಕಾರ್ನಾಡ್ , ಯು .ಆರ್. ಅನಂತ ಮೂರ್ತಿ ,ಬರಗೂರ್ ರಾಮಚಂದ್ರಪ್ಪ ,ಪಿ.ಲಂಕೇಶ್, ಮುಖ್ಯವಾಗಿ ಎಸ್.ಎಲ್.ಭೈರಪ್ಪ ಹೀಗೆ ಬೆಳೆಯುತ್ತದೆ ಪಟ್ಟಿ.

ಇನ್ನು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತ ಗೊಳಿಸುವುದರಲ್ಲಿ ಕನ್ನಡ ನಾಡಿನ ಮಹಿಳೆಯರೂ ಹಿಂದೆ ಬಿದ್ದಿಲ್ಲ . ಕನ್ನಡದ ಪ್ರಥಮ ಕಾದಂಬರಿಗಾರ್ತಿ ತಿರುಮಲಾಂಬ ಅವರಿಂದ ಹಿಡಿದು ,ತ್ರಿವೇಣಿ ,ವಾಣಿ ,ವೈದೇಹಿ ,ಎಂ ಕೆ ಇಂದಿರಾ, ಆರ್ಯಾಂಬ ಪಟ್ಟಾಭಿ , ಡಾ.ಅನುಪಮ ನಿರಂಜನ ,ಅಶ್ವಿನಿ [ಶ್ರೀಮತಿ.ಎಂ.ವಿ.ಕಮಲಮ್ಮ ],ಎಚ್ .ಜಿ ರಾಧಾದೇವಿ ,ಸಾಯಿಸುತೆ ,ಉಷಾ ನವರತ್ನ ರಾವ್, ಏನ್.ಪಂಕಜ , kodagina gouramma ,h.es.paarvati. hiige aneka kaadambarigaartiyaru kannada saahitya kshetrakke tammade aada vishistha seve sallisiddaare.
vijayaa dabbe,vijayasree ,baanu mastaq, h.es.muktaayakka,innu muntaadavaru kannada kavana lokadalli tammade staanagalannu padedukondiddaare.
[ mundina blognalli muktaaya]






೧೪]ನವಂಬರ್ ೧ ,ನಮ್ಮ ಕನ್ನಡ [ಕರ್ನಾಟಕ] ರಾಜ್ಯೊತ್ಸವ ಭಾಗ - ೧

ಶ್ರೀ ವಿರೋಧಿನಾಮ ಸಂವತ್ಸರ ದಕ್ಷಿಣಾಯಣ ಶರದೃತು ಕಾರ್ತಿಕ ಮಾಸ -ಶುಕ್ಲಪಕ್ಷ -ಚತುರ್ದಶಿ ಭಾನುವಾರ ,
ನವಂಬರ್ - ,೨೦೦೯ ಇಂದು ನಮ್ಮ ಕನ್ನಡ ರಾಜೋತ್ಸವ.
ಭಾಷೆಗಳ ಆಧಾರದ ಮೇಲೆ ,ಭಾರತ ಸರ್ಕಾರ ೧೯೫೬ ರ ನವಂಬರ್ ೧ ರಂದು ರಾಜ್ಯಗಳನ್ನು ಪುನರ್ ವಿಂಗಡಣೆ ಮಾಡಿತು.
೧೯೫೬ ರ ಹಿಂದೆ ನಮ್ಮ ಕನ್ನಡನಾಡು ಮೈಸೂರು ,ಬಾಂಬೇ ,ಮದ್ರಾಸ್ ,ಹಾಗು ಹೈದರಾಬಾದ್ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿತ್ತು .ಈ ಕನ್ನಡ ಮಾತನ್ನಾಡುವ ಪ್ರದೆಶಗಳನ್ನೆಲ್ಲ ಸೇರಿಸಿ ನಮ್ಮ ರಾಜ್ಯ ಉದಯವಾಯಿತು .ಆಗ ಅದು ಮೈಸೂರು ರಾಜ್ಯ ವಾಯಿತು.೧೯೭೩ರ ನವಂಬರ್ ೧ ರಂದು ,ನಮ್ಮ ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ಡಿ .ದೇವರಾಜಅರಸ್ ನಮ್ಮ ರಾಜ್ಯಕ್ಕೆ 'ಕರ್ನಾಟಕ' ಎಂದು ಪುನರ್ ನಾಮಕರಣ ಮಾಡಿದರು .ಈ ಹಿನ್ನೆಲೆಯಲ್ಲಿ ನವಂಬರ್ ೧ ನ್ನು ಕನ್ನಡ ರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತಿದೆ.
"ಕರ್ನಾಟಕದ ಬಗ್ಗೆ ಯಾವ ಕನ್ನಡಿಗನ ಹೃದಯ ಮಿಡಿಯುವುದಿಲ್ಲವೋ ,ಅದು ಹೃದಯವಲ್ಲ ಕಲ್ಲಿನ ಬಂಡೆ' ಎಂದ ಕರ್ನಾಟಕ ಕುಲ ಪುರೋಹಿತ ,ಕನ್ನಡ ತಪಸ್ವಿ ಆಲೂರು ವೆಂಕಟ ರಾಯರು ಕನ್ನಡ ನಾಡಿನ ಮೂಲೆ ಮೂಲೆಗೂ ತಿರುಗಿ ಕನ್ನಡಕ್ಕಾಗಿ ಶ್ರಮಿಸಿದರು . ಅಲೂರು ಮತ್ತು ಅನೇಕ ಅನೇಕ ಹಿರಿಯರ ಪರಿಶ್ರಮದ ಫಲವಾಗಿ ೧೯೫೬ ರಲ್ಲಿ
ಅನೇಕ ಹಿರಿಯರ ಪರಿಶ್ರಮಏಕೀಕೃತ ಕನ್ನಡನಾಡು ರೂಪಗೊಂಡಿತು ಎಂಬುದನ್ನೂ ನಾವುಮರೆಯಲಾಗದು.
ಕನ್ನಡ ಭಾಷೆ ,ನೆಲ ಜಲ ಅಭಿವೃದ್ದಿಗಾಗಿ ಅನೇಕ ಮಹನೀಯರುಗಳು ಅವಿರತ ಶ್ರಮವಹಿಸಿದ್ದಾರೆ .ಅವರುಗಳಲ್ಲಿ ಕೆಲವರನ್ನಾದರೂ ಸಮಯದಲ್ಲಿ ನೆನಪು ಮಾಡಿಕೊಳ್ಳೋಣ.
ತಳುಕಿನ ವೆಂಕಣ್ಣಯ್ಯ :
೦೧-೧೦-೧೮೮೫ ರಂದು ಚಿತ್ರದುರ್ಗ ಜಿಲ್ಲೆಯ 'ತಳುಕು' ಎಂಬಲ್ಲಿ ಜನಿಸಿದ ಟಿ.ಎಸ್.ವೆಂಕಣ್ಣಯ್ಯ ಕನ್ನಡದ 'ಅಶ್ವಿನಿ ದೇವತೆ' ಗಳಲ್ಲಿ ಒಬ್ಬರು.
ಮೈಸೂರು ವ್ವಿಶ್ವವಿದ್ಯಾಲಯದ ಪ್ರಥಮ ಕನ್ನಡ ಪ್ರಾಧ್ಯಾಪಕರು .ಹರಿಶ್ಚಂದ್ರ ಕಾವ್ಯ ಸಂಗ್ರಹ ,ಕರ್ನಾಟಕ ಕಾದಂಬರಿ ಸಂಗ್ರಹ ,ಬಸವರಾಜ ದೇವರಗಳೆ,ಸಿದ್ದರಾಮಚರಿತೆಯ ಸಂಗ್ರಹ ,ಪ್ರಾಚೀನ ಸಾಹಿತ್ಯ -ಇವರ ಮುಖ್ಯ ಕೃತಿಗಳು.

ತಿರುಮಲಾಂಬ:
ಕನ್ನಡದ ಪ್ರಪ್ರಥಮ ಕಾದಂಬರಿಗಾರ್ತಿ .ನಂಜನಗೂಡಿನಲ್ಲಿ [೦೧-೧೦-೧೮೮೭] ಜನನ.೧೯೧೩ರಲ್ಲಿ 'ಸತಿ ಹಿತೈಷಿಣಿ 'ಗ್ರಂಥ ಮಾಲೆ ಆರಂಬಿಸಿ
"ಸುಶೀಲ' ಎಂಬ ಕಾದಂಬರಿ ಪ್ರಕಟಿಸಿ ಕನ್ನಡದ ಮೊದಲ ಪ್ರಕಾಶಕಿ -ಮುದ್ರಕಿ ಎನಿಸಿಕೊಂಡರು.
ಹುಯಿಲಗೋಳ ನಾರಾಯಣರಾಯರು :
'ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು 'ಎಂಬ ತಮ್ಮ ಗೀತೆಯಿಂದ ಜನಮನ ಸೂರೆಗೊಂಡು ,ಪ್ರಖ್ಯಾತಿಯಾದ ಹುಯಿಲಗೋಳನಾರಾಯಣರಾಯರು ,ಉತ್ತಮ ಶಿಕ್ಷಕರು ,ವಕೀಲರಾಗಿದ್ದರು. ಇವರು ಪ್ರಶಸ್ತಿವಿಜೇತ ನಾಟಕಕಾರರು ಆಗಿದ್ದರು.

ಡಾ.ಶಿವರಾಮ ಕಾರಂತರು:
೧೦-೧೦-೧೯೦೨ ರಂದು ದಕ್ಷಿಣ ಕನ್ನಡ ಜಿಲ್ಲೆಯ ಕೋಟಾ ದಲ್ಲಿ ಜನಿಸಿದ ಡಾ.ಶಿವರಾಮ ಕಾರಂತರು ಕಡಲ ತೀರದ ಭಾರ್ಗವ ಎಂದೇ ಪ್ರಖ್ಯಾತಿ .೧೯೫೫ ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾಗಿದ್ದ ಇವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕೃತರು .ಇವರು ಯಕ್ಷಗಾನ ಕಲೆಯಲ್ಲಿ ಅತ್ಯಂತ ನಿಪುಣರಾಗಿದ್ದರು


ಡಾ.ಮಾಸ್ತಿ ವೆಂಕಟೇಶ ಅಯಂಗಾರ್:
'ಸಣ್ಣ ಕತೆಗಳ ಬ್ರಹ್ಮ 'ಎಂದೇ ಪ್ರಸಿದ್ದ. ಕನ್ನಡದ ಆಸ್ತಿ, ಮಾಸ್ತಿ ವೆಂಕಟೇಶ ಅಯಂಗಾರ್ ಹುಟ್ಟಿದ್ದು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ,೦೬-೦೮-೧೮೯೧ ರಂದು. ಇವರು ಜ್ಞಾನ ಪೀಠ ಪ್ರಶಸ್ತಿ ವಿಜೇತರು. ಕತೆಗಾರರೂ ,ನಾಟಕಕಾರರೂ,ವಿಮರ್ಶಕರೂ, ಪತ್ರಿಕಾ ಸಂಪಾದಕರೂಆಗಿದ್ದರು.೧೯೨೯ರ ಬೆಳಗಾವಿ , ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು .ಇವರು 'ಶ್ರೀನಿವಾಸ' ಎಂಬ ಕಾವ್ಯ ನಾಮ ದಿಂದಪ್ರಸಿದ್ದರು.

ಪಂಜೆ ಮಂಗೇಶರಾಯರು:
ಇವರು ಕನ್ನಡ ಶಿಶು- ಸಾಹಿತ್ಯದ ಪಿತಾಮಹರು.ಇವರ ಕಾವ್ಯ ನಾಮ 'ಕವಿಶಿಷ್ಯ'. ದಿನಾಂಕ ೨೨-೦೨-೧೮೭೪ ರಲ್ಲಿ ಜನಿಸಿದರು. ಕನ್ನಡ ಪಂಡಿತರುಶಿಕ್ಷಣ ತಜ್ಞರು ,ಅರ್ಥಶಾಸ್ತ್ರ ವಿಶಾರದ ರಾಗಿದ್ದರು. ಕನ್ನಡದಲ್ಲಿ ಸುಧಾರಣೆಗಳು,ಮತ್ತು ಕೋಟಿ ಚನ್ನಯ್ಯ ಇವರ ಕೃತಿಗಳು. ೧೯೩೪ ರಲ್ಲಿ ನಡೆದಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು .

,
'ಸತ್ಯಕಾಮ' [ಅನಂತಾಚಾರ್ಯ ಕೃಷ್ಣಾಚಾರ್ಯ ಶಹಾಪುರ] :
ದಿನಾಂಕ ೦೨-೦೩-೧೯೨೦ ರಲ್ಲಿ ಬಿಜಾಪುರ ಜಿಲ್ಲೆಯ ಗಲಗಲಿ ಯಲ್ಲಿ ಜನಿಸಿದರು.ಕತೆ ,ಕವಿತೆ ,ಕಾದಂಬರಿ ಗಳನ್ನೂ ಬರೆದು ಪ್ರಸಿದ್ದರಾಗಿದ್ದರು.
ಸ್ವಾತಂತ್ರ್ಯ ಚಳುವಳಿ ಕಾಲದಲ್ಲಿ ಪತ್ರಿಕೆಗಳ ಸಂಪರ್ಕ ಹೊಂದಿದ್ದರು.'ಕಪಿಲ ವಸ್ತು','ರಾಜಬಲಿ ' ,ಬೃಹಸ್ಪತಿ' ಲಾವಣ್ಯ'ಶೃಂಗಾರ ತೀರ್ಥ ' ಚಂಡ-ಪ್ರಚಂಡ ಇವರ ಕೃತಿಗಳು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತರು.

ಕಾರ್ನಾಡು ಸದಾಶಿವರಾಯರು:
ದಿನಾಂಕ ೦೧-೦೪ ೧೮೮೧ ರಲ್ಲಿ ಮಂಗಳೂರಿನಲ್ಲಿ ಜನಿಸಿದರು.ಇವರು ವಕೀಲರಾಗಿದ್ದರು.ಅಪ್ಪಟ ಗಾಂಧೀ ವಾದಿಗಳು. ಗಾಂಧೀಜಿಯವರೊಂದಿಗೆಸತ್ಯಾಗ್ರಹ ಪ್ರತಿಜ್ಞೆಗೆ ಸಹಿ ಹಾಕಿದ ಮೊದಲ ಕನ್ನಡಿಗರು.ದೇಶ ಸೇವೆಗಾಗಿ ತಮ್ಮ ಆಸ್ತಿ-ಪಾಸ್ತಿ ಆರೋಗ್ಯಗಳನ್ನು ಮುಡುಪಾಗಿಟ್ಟ ರು.
ಬೆಂಗಳೂರಿನ ಪ್ರಖ್ಯಾತ ಬಡಾವಣೆಯೊಂದಕ್ಕೆ ಇವರ ಹೆಸರನ್ನು ಇಟ್ಟಿರುವುದನ್ನು ಗಮನಿಸಬಹುದು.

ಡಾ.ರೆವರೆಂಡ್ ಕಿಟ್ಟೆಲ್:
ಜರ್ಮನಿಯಲ್ಲಿ ೦೭-೦೪-೧೮೩೨ ರಲ್ಲಿ ಹುಟ್ಟಿದರು.ನಮ್ಮ ಭಾರತ ದೇಶಕ್ಕೆ ಆಗಮಿಸಿ ಕರ್ನಾಟಕದಲ್ಲಿ ನೆಲೆಸಿದ ಇವರು ಕನ್ನಡ ಭಾಷೆಗೆ ಅಪೂರ್ವ
ಸಲ್ಲಿಸಿದರು. ಕನ್ನಡ -ಇಂಗ್ಲಿಷ್ ನಿಘಂಟು,ಗ್ರಾಮರ್ ಆಫ್ ದಿ ಕನ್ನಡ ಲಾಂಗ್ವೇಜ್ ,ಮತ್ತು ಸಂಪಾದಿತ ಕೃತಿಗಳಾದ 'ಕೇಶಿರಾಜನ -'ಶಬ್ದಮಣಿ ದರ್ಪಣ',ನಾಗವರ್ಮನ 'ಚಂದೊಮ್ಬುಧಿ ' ಕಿಟ್ಟೆಲ್ ಪಾಂಡಿತ್ಯಕ್ಕೆ ಸಾಕ್ಷಿ.
[ಮುಂದಿನ ಬ್ಲಾಗ್ ನಲ್ಲಿ ಮತ್ತಷ್ಟು ಮಹನಿಯರುಗಳು]

ದಿನದ ಸ್ಪಂದನ:
ಕನ್ನಡ ನಾಡು,ನುಡಿ,ಸಂಸ್ಕೃತಿಗಳ ಸಂವರ್ದನೆ ಹಾಗು ಸಂರಕ್ಷಣೆಗಾಗಿ ಕಳೆದ ತೊಂಬತ್ತು ವರ್ಷಗಳಿಂದ ಶ್ರಮಿಸುತ್ತಾ ಬಂದಿರುವ ಏಕೈಕಪ್ರಾತಿನಿಧಿಕ ಸಂಸ್ಥೆ :ಕನ್ನಡ ಸಾಹಿತ್ಯ ಪರಿಷತ್ತು .
ಪರಿಷತ್ತಿನ ಬಹುಮುಖೀ ಅಸ್ತಿತ್ವದ ಒಂದು ಪ್ರಧಾನ ಕಾರ್ಯ ಕ್ಸೇತ್ರ :ಪುಸ್ತಕ ಪ್ರಕಟಣೆ .ಈವರೆಗೆ ಒಂದು ಸಾವಿರಕ್ಕೂ ಹೆಚ್ಚು ಅಮೂಲ್ಯ ಕೃತಿಗಳುಪ್ರಕಟಗೊಂಡು ನಾಡಿನ ತುಂಬಾ ಅಕ್ಷರದ ಬೆಳಕನ್ನು ಹರಡಿವೆ.ಕನ್ನಡ ಜನತೆ ಕೂಡ ಅತ್ಯಂತ ಪ್ರೀತಿಯಿಂದ ಜ್ಞಾನ ದಾಸೋಹದಲ್ಲಿಪಾಲುಗೊಂಡಿದೆ.
[ಕನ್ನಡ ನಾಡಿನ ಚರಿತ್ರೆ -ಭಾಗ - ಹಿನ್ನುಡಿ ಯಿಂದ ]


ಕನ್ನಡ ಕಂದನ ಮೊದಲ ತೊದಲ ನುಡಿ -'ಅಮ್ಮ'
ನಂತರ ಏನಿದ್ದರೂ ಉಳಿದ 'ಸರಿಗಮ
___
------------------------------------------------------ಓಂ--------------------------------------------------------------

ಗುರುವಾರ, ಅಕ್ಟೋಬರ್ 29, 2009

೧೩]'ಮತಾಂತರ 'ಕ್ಕೆ ಲವ್ ಜಿಹಾದ್ ಎಂಬ ಹೊಸ ಅಸ್ತ್ರ -ಭಾಗ -೩.

ಶ್ರೀ ವಿರೋಧಿನಾಮ ಸಂವತ್ಸರ ದಕ್ಷಿಣಾಯಣ ಶರದೃತು ಕಾರ್ತಿಕ ಮಾಸ ಶುಕ್ಲ ಪಕ್ಷ -ಗುರುವಾರ ೨೯-೧೦-೦೯.
ಮತಾಂತರ -ಲವ್ ಜಿಹಾದ್ -ಭಾಗ -೩. [ಮುಂದುವರೆದುದು]
ಇದುವರೆಗೂ ಈ ವಿಷಯದಲ್ಲಿ ಕಣ್ಣು ಮುಚ್ಚಿ ಕುಳಿತಿದ್ದ ನಮ್ಮ ಸರ್ಕಾರ ಈಗ ಎಚ್ಚೆತ್ತುಕೊಂಡಿದೆ .ಲವ್ ಜಿಹಾದ್ ಬಗ್ಗೆ ನಿಗಾ ವಹಿಸುವಂತೆಯೂ ಅದರ ಕಾರ್ಯ ವ್ಯಾಪ್ತಿಯ ಬಗ್ಗೆ ವಿವರ ವಾಗಿ ತಿಳಿಸುವಂತೆಯೂ ಸರ್ಕಾರಕ್ಕೆ ಹೈ ಕೋರ್ಟ್ ಆದೇಶಿಸಿದೆ. ಈ ಲವ್ ಜಿಹಾದ್ ಪ್ರಕರಣಗಳು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು ,ಇದರಿಂದ ಧಾರ್ಮಿಕ ಕ್ಷೋಭೆಗಳು ಉಂಟಾಗಬಹುದಾಗಿದ್ದು ,ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟಾಗಬಹುದು ಎಂದು ಮನ ಗಂಡಿರುವ ಹೈ ಕೋರ್ಟ್ ,ತಕ್ಷಣ ಈ ಬಗ್ಗೆ ಕಾರ್ಯೋನ್ಮುಖವಾಗುವಂತೆ ಸರ್ಕಾರಕ್ಕೆ ತಾಕೀತು ಮಾಡಿದೆ.
ಈ ಲವ್ ಜಿಹಾದ್ ಪ್ರಕರಣಗಳು ಒಳ್ಳೆಯ ಬೆಳವಣಿಗೆಯಂತೂ ಅಲ್ಲವೇ ಅಲ್ಲ. ಇದು ಸಮಾಜದಲ್ಲಿ ಸಮುದಾಯ ಗಳೊಡನೆ ವೈಮನಸ್ಯ ಮೂಡಲು
ಕಾರಣವಾಗಬಹುದು .ದೇಶದಲ್ಲಿ ಮುಸ್ಲಿಂ ಬಾಹುಳ್ಯ ಉಂಟಾಗಬಹುದು. ಅವರೇ ಬಹುಸಂಖ್ಯಾತರಾಗಬಹುದು ಎಂಬ ದಿಗಿಲು !
ಅವರ ದಿಗಿಲಿಗೆ ಕಾರಣ ? ಮುಸ್ಲಿಮರು ಯಾವ ಯಾವ ಸ್ಥಳಗಳಲ್ಲಿ ಹೆಚ್ಚಾಗಿದ್ದಾರೆಯೋ ,ಅಂದರೆ ಬಹುಸಂಖ್ಯಾತರಾಗಿದ್ದಾರೆಯೋ ಆ ಸ್ತಳ ಗಳಲ್ಲಿ
ಅನ್ಯ ಧರ್ಮೀಯರು ಸಹಜವಾಗಿ ಬದುಕಲು ಸಾಧ್ಯವಿಲ್ಲ ಎಂಬ ನಂಬಿಕೆ. ಯಾವಾಗಲೂ ಭಯ -ಭೀತಿ ಗಳಿಂದ ಬದುಕು ನಡೆಸುವಂತೆ ಆಗಬಹುದು .ಅನೇಕ ಸಮಾಜಿಕ ,ಆರ್ಥಿಕ ನೈತಿಕ ವಿಪ್ಲವಗಳು ಉಂಟಾಗಬಹುದು ಎಂಬ ಭಯ.
ಮನೆ, ಮಠ ,ಆಸ್ತಿ -ಪಾಸ್ತಿ ಮಾರಿಕೊಂಡು ಸುರಕ್ಷಿತ ಸ್ಥಳಗಳಿಗೆ ಹೋಗಬೇಕಾಗಬಹುದೇನೋ ಎಂಬ ಭಯ .ಇದಕ್ಕೆ ಜೀವಂತ ಉದಾಹರಣೆ ಎಂದರೆ ನಮ್ಮ ಕಾಶ್ಮೀರ ರಾಜ್ಯದ್ದು. ಅಲ್ಲಿ ಅಲ್ಪ ಸಂಖ್ಯಾತ ಹಿಂದೂಗಳು ಸಹಜವಾಗಿ ಬದುಕಲು ಆಗುತ್ತಿಲ್ಲ .ಅನೇಕ ಹಿಂದೂ ದೇವಾಲಯಗಳನ್ನು ಕೆಡವಿಹಾಕಲಾಗಿದೆ. ಮನೆ ಮಠ ಗಳನ್ನೂ ನಾಶಪಡಿಸಲಾಗಿದೆ .ಆಸ್ತಿ-ಪಾಸ್ತಿ ಗಳನ್ನೂ ಬಲವಂತದಿಂದ ವಶಪಡಿಸಿಕೊಳ್ಳ ಲಾಗುತ್ತಿದೆ,ಎಂಬ ದೂರು ಇಂದು ನಿನ್ನೆಯದಲ್ಲ! ಇದರಿಂದಾಗಿ ಲಕ್ಷಾಂತರ ಹಿಂದೂ ಕುಟುಂಬಗಳು ಕಾಶ್ಮೀರರಾಜ್ಯ ವನ್ನು ತೊರೆದು ಬಂದಿದ್ದಾರೆ.
ಅಲ್ಲಿ ಹಿಂದೂ ಯುವತಿಯರ ಹಾಗು ಹೆಂಗಸರ ಮಾನಭಂಗ ನಿತ್ಯದ ಮಾಮೂಲಿ ವಿಷಯವಾಗಿಬಿಟ್ಟಿದೆ. ಅತ್ಯಾಚಾರವೆಸಗಿ ನಂತರ ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ.ಮತಾಂತರಕ್ಕೆ ಒಪ್ಪದಿದ್ದರೆ ನಿಷ್ಕರುಣೆಯಿಂದ ಕೊಲೆ ಮಾಡಲಾಗುತ್ತದೆ ,ಮತಾಂತರಕ್ಕೆ ಒಪ್ಪಿದರೆ ಜೀವ ಸಹಿತ ಬಿಡಲಾಗುತ್ತದೆಯಂತೆ. ಇದು ಮುಸ್ಲಿಂ ಬಾಹುಳ್ಯ ವುಳ್ಳ ಸ್ತಳಗಳ ನರಕ ಸದೃಶ್ಯ ಬದುಕು.
ಪ್ರೀತಿಸಿ,ಪ್ರೇಮಿಸಿ ಮದುವೆಯಾಗುವುದೆನೂ ತಪ್ಪಿಲ್ಲ .ಅದು ಅಂತರ ಜಾತಿಯಾಗಿದ್ದರೂ ಪರವಾಗಿಲ್ಲ. ಆದರೆ ಉದ್ದೇಶ ಪೂರ್ವಕವಾಗಿ ಮಾಡಿ ಕೊಳ್ಳುವ ಪ್ರೇಮ ವಿವಾಹದ ಬಗ್ಗೆ ಜಗೃತಿಯಿಂದಿರಬೇಕಾದುದು ಇಂದಿನ ಅವಶ್ಯಕತೆ .

ಒಂದಂಶವನ್ನು ಇಲ್ಲಿ ಗಮನಿಸೋಣ.ಕಾಕತಾಳೀಯ ಎನಿಸ ಬಹುದು.ಬಾಲಿವುಡ್ ನ ಕೆಲವು ಪ್ರಖ್ಯಾತ ಮುಸ್ಲಿಂ ನಟರು ಹಿಂದೂ ಹುಡುಗಿಯರನ್ನು ಮದುವೆಯಾಗಿದ್ದಾರೆ.ತಪ್ಪೇನಿಲ್ಲ .ಇದು ಅವರ ಸ್ವಂತ ವಿಚಾರ. ಆದರೆ ಈ ವಿವಾಹಗಳು ಇತರ ಮುಸ್ಲಿಂ ಯುವಕರಿಗೆ ಪ್ರೇರಣೆ ಯಾಗಬಾರದೆನ್ದೆನೂ ಇಲ್ಲವಲ್ಲ. ಇದು ಅವರಿಗೆ ಆದರ್ಶ ಆದರೂ ಆಗಬಹುದು ಅಲ್ಲವೇ?
ಇನ್ನೊಂದು ವಿಚಾರ ಇಲ್ಲಿ ಗಮನಿಸಲು ಕುತೂಹಲವೆನಿಸುತ್ತದೆ. ಲವ್ ಜಿಹಾದ್ ಕೇವಲ ಹಿಂದೂ ಕುಟುಂಬಗಳನ್ನು ಮಾತ್ರ ಕಾಡುತ್ತಿಲ್ಲ ,ಕ್ರಿಶ್ಚಿಯನ್ ಸಮುದಾಯಕ್ಕೂ ಈ ಬಿಸಿ ತಟ್ಟಿದೆ. ಏಕೆಂದರೆ ಈ ಲವ್ ಜಿಹಾದ್ ಕೇವಲ ಹಿಂದೂ ಹುಡುಗಿಯರನ್ನು ಗಮನದಲ್ಲಿರಿಸಿಕೊಂಡು ರೂಪಿಸಿದ್ದಲ್ಲ, ಕ್ರಿಶ್ಚಿಯನ್ ಹುಡುಗಿಯರನ್ನು ಸಹ ಖೆಡ್ಡಾಕ್ಕೆ ಕೆಡವಲಾಗುತ್ತಿದೆ ಎಂದು ಆ ಸಮುದಾಯದವರು ಹೇಳುತ್ತಿದ್ದಾರೆ . ಪೆಡಂ ಭೂತ
ಹಿಂದೂ-ಕ್ರಿಶ್ಚಿಯನ್ ಎರಡು ಸಮುದಾಯಗಳನ್ನೂ ಕಾಡುತ್ತಿರುವ ಹಿನ್ನೆಲೆಯಲ್ಲಿ ,ಎರಡೂ ಜನಾಂಗದವರೂ ಈ ಪಿಡುಗನ್ನು ಒಗ್ಗಟ್ಟಾಗಿ ಎದುರಿಸುವ ಪ್ರಯತ್ನ ಮಾಡುತ್ತಿದ್ದಾರೆಂದು ತಿಳಿದು ಬಂದಿದೆ
ಜಿಹಾದ್ ಉದ್ದೇಶಕ್ಕೆ ಪ್ರೀತಿ ಬಳಕೆಯಾದರೆ ಅದು ಘೋರ.ಜಿಹಾದ್ ಉದ್ದೇಶಕ್ಕೆ ಪ್ರೀತಿ,ಪ್ರೇಮ -ವಿವಾಹ ಬಳಕೆಯಾದರೆ ಕಾನುಉನು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಬಹುದು.
ಪತ್ರಿಕೆಗಳಲ್ಲಿ ,ಆರ್ಕುಟ್ ಗಳಲ್ಲಿ ದಿನ ನಿತ್ಯ ಈ ಲವ್ಜಿಹಾದ್ ಬಗ್ಗೆ ವಿವರ ಗಳು ಪ್ರಕಟ ವಾಗುತ್ತಿರುವುದರಿಂದ ಜನತೆ ಎಚ್ಚೆತ್ತುಕೊಳ್ಳುತ್ತಿದ್ದಾರೆ .ಇಂತಹ ಮತಾಂತರಗಳಿಂದ ದೇಶಕ್ಕೆ ವಿಪತ್ತು ಉಂಟಾಗಬಹುದು ಎಂದು ಮನಗಂಡಿರುವ ಮಠ ಮಾನ್ಯಗಳು ಈ ವಿಷಯದಲ್ಲಿ ಜಾಗೃತರಾಗಿರುವುದು ಒಳ್ಳೆಯದೇ. ಮತಾಂತರ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ವಿಷಯ ಮಾತ್ರವಲ್ಲ ,ಇದರಿಂದಾಗಿ ಸಮಾಜ,aಕುಟುಂಬ ಹಾಗು ಸಾರ್ವಜನಿಕ ಶಾಂತಿ ನಾಶವಾಗುತ್ತದೆ,ಎಂದು ಈಗಾಗಲೇ ಹಲವಾರು ಮುಖಂಡರುಗಳು ಚಿಂತಿತರಾಗಿದ್ದಾರೆ . ಒಂದು ಅಚ್ಹರಿಯ ಸಂಗತಿಯೆಂದರೆ ಸೆಕ್ಯುಲರ್ವಾದಿಗಳು,ಹಾಗು ವಿಚಾವಾದಿಗಳೂ ಈ ಲವ್ಜಿಹಾದ್ ಬಗ್ಗೆ ಚಕಾರವೆತ್ತದೆ ಇರುವುದು .
ಹುಡುಗಿಯರೇ ಹುಷಾರ್ !ಅದು 'ಲವ್' ಅಲ್ಲ ,ಜಿಹಾದ್!! ಎಂದು ಪ್ರತಾಪಸಿಂಹ - ಬೆತ್ತಲೆ ಜಗತ್ತು ಅಂಕಣದಲ್ಲಿ [ವಿಜಯ ಕರ್ನಾಟಕ /ಶನಿವಾರ ,೧೭ ಅಕ್ತೊಬ್ಬರ್ ೨೦೦೯/ಬೆಂಗಳೂರು ] ಎಂದು ಬರೆದು ಹುಡುಗಿಯರನ್ನು ಎಚ್ಚರಿಸಿದ್ದಾರೆ.
"ಲವ್ ಜಿಹಾದ್ ಒಂದು ವ್ಯವಸ್ತಿತ ಹಾಗು ವಿಸ್ತೃತ ಜಾಲವಾಗಿದ್ದು ಅನ್ಯ ಧರ್ಮೀಯ ಹುಡುಗಿಯರನ್ನು ಪುಸಲಾಯಿಸಿ
ಪ್ರೇಮಿಸುವ ನಾಟಕವಾಡಿ,
ಅವರನ್ನು ಕೆಡಿಸಿ ಹೊರತಳ್ಳುವ ಉದ್ದೇಶವನ್ನು ಹೊಂದಿದೆ" ಎಂದು "ಲವ್ ಜಿಹಾದ್"ಬಗ್ಗೆ ನಡೆಯುತ್ತಿರುವ ತನಿಕೆಯವಹಿಸಿರುವ ಪೋಲಿಸ್ ಅಧಿಕಾರಿ ಅಂಡರ್ ಅಟ್ಯಾಕ್ ಭಾಂದವರು ಭಾರತಕ್ಕೆ ಹಲವು.
ಇಸ್ಟಾದರೂ halavu muslim bhaandavaru bhaaratakke halavu ರೀತಿಯ ಸೇವೆ ಸಲ್ಲಿಸಿದ್ದಾರೆ ,ಈಗಲೂ ಸಲ್ಲಿಸುತ್ತಿದ್ದಾರೆ .ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ರವರ ಸೇವೆಯನ್ನು ಮರೆಯಲಾದೀತೆ? ಅಸಂಖ್ಯಾತ
ಮುಸ್ಲಿಂ ಪಂಗಡದ ಸೈನಿಕರು ನಮ್ಮ ಸೇನೆ ಯಲ್ಲಿದ್ದು ರಾಷ್ಟ್ರಪ್ರೇಮಿಗಳಾಗಿ ,ದೇಶಕ್ಕೋಸ್ಕರ ದುಡಿಯುತ್ತಿರುವುದು ಸುಳ್ಳೇ? ಈ ತರಹ ಮುಸ್ಲಿಂ ಪಂಗಡ ದವರು ನಿಜಕ್ಕೂ ಧನ್ಯರು!
ನಮ್ಮ ಅಭಿಮಾನ ರಹಿತ ಸ್ವಧರ್ಮೀಯರು ಹಾಗು ರಾಜಕಾರಣಿಗಳೂ ಯೋಚಿಸುವ ಕಾಲ ಬಂದಿದೆ.

ಈ ದಿನದ ಸ್ಪಂದನ:
"ದೇಶದ ಏಕತೆ ಹಾಗು ಭಾವೈಕ್ಯತೆಗಳನ್ನೂ ಸಾರಲು ,ವ್ಯಕ್ತಿಯಲ್ಲಿ ಭ್ರಾತೃತ್ವ ಹಾಗು ಸ್ವಾಭಿಮಾನವನ್ನು ಬಿತ್ತುವುದು
ಸಂವಿಧಾನದ ಉದ್ದೇಶ"
ಡಾ.ಬಿ.ಆರ್.ಅಂಬೇಡ್ಕರ್


ಹೀಗೊಂದು ಪ್ರಶ್ನೆ:
ಬೇಲಿಯೇ ಎದ್ದು ಹೊಲ ಮೆಯ್ದರೆ ,
ಭೂಮಿಯೇ ಬಂಜೆಯಾದರೆ ,
ಬೇವಿನ ಮರಕ್ಕೇ ರೋಗ ಬಂದರೆ ,
ಸೂರ್ಯನೆ ಶಾಖರಹಿತನಾದರೆ ,
ಕೇಳುವುದು ಯಾರನ್ನು?

ಮನೆಯ ಯಜಮಾನನೇ ತುಡುಗು ಮಾಡಿದರೆ ,
ತಾಯಿಯೇ ಮಗನಿಗೆ ವಿಷ ಉಣಿಸಿದರೆ ,
ಜ್ಞಾನ ನೀಡುವ ಗುರುವೇ ಅಜ್ನಾನಿಯಾದರೆ ,
ಮಠದ ಗುರುವೇ ಅಧರ್ಮಿಯಾದರೆ ,
ಕೇಳುವುದು ಯಾರನ್ನು?

ಕಂದಾಯ ಮಂತ್ರಿಯೇ ಸುಸ್ತಿದಾರನಾದರೆ,
ವನ ಸಂರಕ್ಷಣ ಅಧಿಕಾರಿಯೇ ಮರ ಕಡಿಸಿದರೆ ,
ಸಂಚಾರಿ ನಿರಿಕ್ಷಕರೆ ರಸ್ತೆ ನಿಯಮ ಪಾಲಿಸದಿದ್ದರೆ,
ರಕ್ಷಣಾ ಮಂತ್ರಿಯೇ ಮೀರಸಾದಕ ನಾದರೆ,
ಕೇಳುವುದು ಯಾರನ್ನು?

ನ್ಯಾಯಾಲಯವೇ ತಪ್ಪು ತೀರ್ಪು ನೀಡಿದರೆ ,
ಲೋಕಾಯುಕ್ತರೆ ಲಂಚ ಕೇಳುವುದಾದರೆ ,
ವೈದ್ಯರೇ ರೋಗಿಯ ಮರಣಕ್ಕೆ ಕಾರಣರಾದರೆ,
ದೇಶದ ಅಧ್ಯಕ್ಷರೇ ನಿಷ್ಕ್ರೀಯರಾದರೆ ,
ಕೇಳುವುದು ಯಾರನ್ನು? ಕೇಳುವುದು ಯಾರನ್ನು?

ಬೇಲೂರು ದ .ಶಂ .ಪ್ರಕಾಶ .
ವಂದನೆಗಳು .ನಿಮ್ಮ ಅಭಿಪ್ರಾಯ ತಿಳಿಸಿ.
----------------------------------------- ಓಂ ------------------------------------------------




ಸೋಮವಾರ, ಅಕ್ಟೋಬರ್ 26, 2009

೧೨] 'ಮತಾಂತರ'-ಲವ್ ಜಿಹಾದ್ ಎಂಬ ಹೊಸ ಅಸ್ತ್ರ . ಭಾಗ-೨.

ಶ್ರೀ ವಿರೋಧಿನಾಮ ಸಂವತ್ಸರ ದಕ್ಷಿಣಾಯಣ ಶರದೃತು ಕಾರ್ತಿಕ ಮಾಸ ಶುಕ್ಲ ಪಕ್ಷ , ಮಂಗಳವಾರ -೨೭.೧೦.೨೦೦೯.

೨೫-೧೦-೨೦೦೯ ರ ನನ್ನ ಬ್ಲಾಗ್ ನಲ್ಲಿ 'ಮತಾಂತರ -ಲವ್ ಜಿಹಾದ್ 'ಎಂಬ ಹೊಸ ಅಸ್ತ್ರ ದ ಬಗ್ಗೆ ಬರೆಯಲು ಹೊರಟು,ಕೇವಲ ಪೀಟಿಕೆ ಯನ್ನಷ್ಟೇ ಬರೆದಿದ್ದೆ.ಪೀಟಿಕೆಯೇ ಅತಿಯಾಯಿತೇನೋ ಅಷ್ಟಕ್ಕೆ ನಿಲ್ಲಿಸಿದ್ದೆ.
ಮತ್ತೆ ಅದೇ ಬರೆಯಬೇಕಾಗಿದೆ. ಈ ಮತಾಂತರ ಎಂಬ ಪಿಡುಗಿನಿಂದ ನಮ್ಮ ರಾಷ್ಟ್ರ ಅನೇಕ ಸಾಮಾಜಿಕ ಹಾಗು ರಾಷ್ಟ್ರೀಯ ಸಮಸ್ಯೆ ಗಳನ್ನೂ ಎದುರಿಸ ಬೇಕಾಗಿದೆ .ಅಲ್ಪ ಸಂಖ್ಯಾತ ರಲ್ಲಿ ಮುಖ್ಯವಾದ ಎರಡು ಪಂಗಡಗಳು ನಮ್ಮ ದೇಶದಲ್ಲಿ ಸ್ವಾತಂತ್ಯ್ರ ಪೂರ್ವದಿಂದಲೂ ಈ ಮತಾಂತರ ಸಮಸ್ಯೆಯನ್ನು ಹುಟ್ಟಿ ಹಾಕಿವೆ. ಕ್ರಿಶ್ಚಿಯನ್ ಹಾಗು ಮುಸ್ಲಿಂ ಆ ಎರಡು ಕಮ್ಯುನಿಟಿ ಗಳೆಂದು ಬೇರೆ ಹೇಳಬೇಕಾಗಿಲ್ಲ ತಾನೆ?
"ಹುಲುಸು ಮೇವು ಇರುವಕದೆ ತಾನೆ ,ಎಲ್ಲಿ ಬೇಲಿ ಯಿಲ್ಲವೋ ಅಲ್ಲಿ ತಾನೆ ಪುಂಡು ದನಗಳು ನುಗ್ಗಿ ಮೇಯುವುದು ,ಮೇಯ್ದು ಕೊಬ್ಬುವುದು.ಮೇವು ತಿನ್ನುವುದಲ್ಲದೆ ಅಲ್ಲಿಯ ಪರಿಸರವನ್ನು ಹಾಳುಮಾಡುವುದು ತಾನೆ ಅವುಗಳ ಕೆಲಸ? ಹಾಗೆ ಆಗಿದೆ ನಮ್ಮ ಪರಿಸ್ತಿತಿ ! ಹಿಂದೂ ಸಮಾಜಕ್ಕೆ ಭದ್ರ ಬೇಲಿ ಇಲ್ಲದಿರುವುದರಿಂದ ಮತಾಂತರ ಎಂಬುದು ನಿತ್ಯ ನಡೆಯುವ ಘಟನೆ ಯಾಗಿದೆ. ಈ ಮತಾಂತರವನ್ನು ತಡೆಯುವ ಕೆಲಸವನ್ನು ನಮ್ಮ ಸಮಾಜ ಅಥವಾ ಸರ್ಕಾರ ಮಾಡಬೇಕು .ನಮ್ಮ ಸರ್ಕಾರ ನಿದ್ದೆ ಮಾಡುತ್ತಿದೆ,ಅಥವಾ ಹಾಗೆ ನಟಿಸುತ್ತಿದೆ .
ಜಾಣ ಕಿವುಡು, ಕುರುಡು ಪ್ರದರ್ಶಿಸುತ್ತಿದೆ .ನಮ್ಮ ಜನರಾದರೋ ಅಸಹಾಯಕರಾಗಿದ್ದಾರೆ. ತಮ್ಮ ಮನೆಯಲ್ಲಿ ಯಾರಾದರೂ ಅನ್ಯ ಧರ್ಮಕ್ಕೆ ಮತಾಂತರವಾದರೆ ಅದನ್ನು ಪ್ರತಿಭಟಿಸಿದರೂ ಅವರಿಗೆ ಬೆಂಬಲ ದೊರೆಯದೆ ಮೂಕ ಸಂಕಟ ಅನುಭವಿಸುತ್ತಿದ್ದಾರೆ.
ಹಾಗಾದರೆ ಈ ಲವ್ ಜಿಹಾದ್ ಎಂದರೇನು?'
"ಪ್ರೀತಿ -ಪ್ರೇಮದ ಹೆಸರಿನಲ್ಲಿ ಧಾರ್ಮಿಕ ತೀವ್ರವಾದಿಗಳು ತಮ್ಮ ಜನಾಂಗದ ಯುವ ಜನಾಂಗವನ್ನು ಪ್ರೇರೇಪಿಸಿ ,ಅನ್ಯ ಧರ್ಮೀಯ ಹುಡುಗಿಯರನ್ನು ಪುಸಲಾಯಿಸಿ ಬುಟ್ಟಿಗೆ ಹಾಕಿಕೊಳ್ಳುವಂತೆ ಹೇಳಿ ,ಅವರನ್ನು ಅವರನ್ನು ಮದುವೆಯಾಗುವುದಾಗಿ ನಂಬಿಸಿ ,ಸ್ವಲ್ಪ ದಿನ ಮದ್ರಾಸದಲ್ಲಿರಿಸಿ ಮಾನಸಿಕವಾಗಿ ಅವರನ್ನು ಮತಾಂತರಕ್ಕೆ ಅಣಿಗೊಳಿಸಲಾಗುತ್ತದೆ. ಪ್ರೀತಿ -ಪ್ರೇಮ -ವಿವಾಹದ ನೆಪದಲ್ಲಿ ಇಸ್ಲಾಂ ಗೆ
ಮತಾಂತರ ಮಾಡುತ್ತಾರೆ "
ಈ ಲವ್ ಜಿಹಾದಿಗಳು ಹೆಚ್ಚಾಗಿ ಕಾಲೇಜ್ ಕ್ಯಾಂಪಸ್ ಗಳಲ್ಲೇ ತಮ್ಮ ಬೇಟೆ ಆರಂಬಿಸುತ್ತಾರೆ. ಅಲ್ಲಿರುವ ಮುಸ್ಲಿಂ ವಿದ್ಯಾರ್ಥಿನಿಯರ ಮೂಲಕ ಅವರ ಹಿಂದೂ-ಕ್ರೈಸ್ತ ಸ್ನೇಹಿತೆಯರ ಪರಿಚಯ ಮಾಡಿಕೊಂಡು ಅವರ ಮನವೊಲಿಸುವ ಪ್ರಯತ್ನ ಮಾಡುತ್ತಾರೆ.ಈ ಪ್ರಯತ್ನದಲ್ಲಿ ಚೆನ್ನಾಗಿ ಹಣ ಖರ್ಚು ಮಾಡಲೂ ಹಿಂದೆ-ಮುಂದೆ ನೋಡುವುದಿಲ್ಲ .ನಿಧಾನವಾಗಿ ಪ್ರೀತಿಯ ಗಾಳ ಹಾಕಿ ಅವರು ಬಲೆಗೆ ಬಿದ್ದ ಮೇಲೆ ಮುಗಿಯಿತು ನಂತರ ಮತಾಂತರ . ತದನಂತರ ಈ ಯುವತಿಯರಿಗೆ ಧರ್ಮಾಂದತೆಯನ್ನು ತಲೆಗೆ ತುಂಬಿ ನಮ್ಮ ಧರ್ಮ ದ ಮೇಲೆ ಗೂಬೆ ಕೂರಿಸಿ , ಧರ್ಮಯುದ್ದದ ಬಗ್ಗೆ ತಲೆ ಸವರಿ ,ನಮ್ಮ ದೇಶದ ಮೇಲೆ ಅವರನ್ನು ಎತ್ತಿಕಟ್ಟಿ ,ದೇಶವಿರೋಧಿ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಹುನ್ನಾರ ರೂಪಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಲವ್ ಜಿಹಾದ್ ಯಾವುದೇ ವಿವಾದಕ್ಕೆ ಆಸ್ಪದ ನೀಡದೆ ,ತಣ್ಣಗೆ ತನ್ನ ಗುರಿಯತ್ತ ದಾಪುಗಾಲು ಹಾಕುತ್ತಿತ್ತು. ಕೇರಳ ಹಾಗು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಆಚರಣೆಯಲ್ಲಿ ತೊಡಗಿದ್ದಾಗಲೇ ,ಚಾಮರಾಜನಗರದ ಯುವತಿಯೊಬ್ಬಳು ಗೂಡವಾಗಿ ಕಣ್ಮರೆಯಾಗುವುದರೊಂದಿಗೆ ಈ
ಲವ್ ಜಿಹಾದ್ ಪ್ರಕರಣ ಅತಿ ಹೆಚ್ಹು ಸುದ್ದಿ ಯಾಗತೊಡಗಿತು .
ಈ ಚಾಮರಾಜನಗರದ ಲವ್ ಜಿಹಾದ್ ಪ್ರಕರಣದಿಂದಾಗಿ ,ಕೇರಳ ಹೈಕೋರ್ಟ್ ಅಲ್ಲಿನ ಸರ್ಕಾರಕ್ಕೆ ಲವ್ ಜಿಹಾದ್ ಬಗ್ಗೆ ಪೂರ್ಣ ವಿವರ ನೀಡುವಂತೆ ಆದೆಶಿಸಿರುವುದಲ್ಲದೆ , ಅದ್ರ ಉದ್ದೇಶ ,ಕಾರ್ಯ ಯೋಜನೆ ,ಈ ಕಾರ್ಯದಲ್ಲಿ ಯಾವ ಯಾವ ಸಂಘಟನೆಗಳು ಭಾಗಿಯಾಗಿವೆ?
ಇಂತಹ ಮತಾಂತರ ಚಟುವಟಿಕೆಗಳಿಗೆ ಎಲ್ಲಿಂದ ಹಣದ ಪೂರೈಕೆಯಾಗುತ್ತಿದೆ? ಕಳೆದ ಮೂರು ವರ್ಷಗಳಲ್ಲಿ ,ಶಾಲೆ ಕಾಲೇಜುಗಳ ಎಷ್ಟು
ವಿದ್ಯಾರ್ಥಿನಿಯರು ಹಾಗು vidhyaartiಗಳು ಈ ಮತಾಂತರ ಪಿಡುಗಿಗೆ ಬಲಿಯಾಗಿದ್ದಾರೆ, ಆರೋಪಿತ ಯೋಜನೆ ರಾಷ್ಟ್ರವ್ಯಾಪಿಯೇ? ಅದಕ್ಕೆ ವಿದೇಶಗಳಿಂದ ಹಣ ಹರಿದುಬರುತ್ತಿದೆಯೇ? ಬೇರೆ ಬೇರೆ ಭಯೋತ್ಪಾದಕ ಚಟುವಟಿಕೆ ಗಳಿಗೆ ಇದರೊಂದಿಗೆ ಏನಾದರೂ ಸಂಭಂದ ,ಸಂಪರ್ಕ ಇದೆಯೇ ಎಂಬ ಬಗ್ಗೆ ವರದಿ nidu vante ಸರ್ಕಾರಕ್ಕೆ ನಿರ್ದೇಶಿಸಿದೆ .
[ ಮುಂದುವರೆಯುವುದು]
ಈ ದಿನದ ಸ್ಪಂದನ :
"ಶಿಕ್ಷಣವೆಂದರೆ ಮಾಹಿತಿ ತುರುಕುವುದಲ್ಲ .ಶಿಕ್ಷಣದಿಂದ ವ್ಯಕ್ತಿತ್ವ ಅರಳಬೇಕು .ಪುರುಷ ಸಿಂಹರು ರೂಪುಗೊಳ್ಳಬೇಕು.
ದೇಶ ಭಕ್ತಿ ಮೈತಾಳಬೇಕು ."
- ಸ್ವಾಮಿ ವಿವೇಕಾನಂದ





ಭಾನುವಾರ, ಅಕ್ಟೋಬರ್ 25, 2009

೧೧]ಮತಾಂತರ-'ಲವ್ ಜಿಹಾದ್' ಎಂಬ ಹೊಸ ಅಸ್ತ್ರ.

ಶ್ರೀ ವಿರೋಧಿ ನಾಮ ಸಂವತ್ಸರ ದಕ್ಷಿಣಾಯಣ ಶರದೃತು ಕಾರ್ತಿಕ ಮಾಸ ಶುಕ್ಲಪಕ್ಷ ,ಸಪ್ತಮಿ -ಭಾನುವಾರ .೨೫-೦೯-೦೯.
ಇಂದಿನ ದಿನಗಳಲ್ಲಿ 'ಲವ್ ಜಿಹಾದ್ 'ಬಗ್ಗೆ ಎಲ್ಲೆಲ್ಲಿಯೂ ಚರ್ಚೆಯಾಗುತ್ತಿದೆ.ಮತಾಂತರ ಎಂಬ ಪಿಡುಗಿಗೆ ಹೊಸದೊಂದು ಅಸ್ತ್ರ ಸೇರ್ಪಡೆಯಾಗಿದೆ .ಅದುವೇ -ಲವ್ ಜಿಹಾದ್ .
ಮತಾಂತರ ಎಂಬುದು ಇಂದು ನಿನ್ನೆಯ ಪಿಡುಗಲ್ಲ .ನಮ್ಮ ದೇಶಕ್ಕೆ ಸ್ವಾತಂತ್ಯ್ರ ದೊರಕಿದ ಪೂರ್ವದ ದಿನಗಳನ್ನೊಮ್ಮೆ ಅವಲೋಕಿಸೋಣ .೭ ನೇ ಶತಮಾನದಲ್ಲಿಯೇ ನಮ್ಮ ಅಖಂಡ ಭರತ ಖಂಡದತ್ತ ಮುಸ್ಲಿಂ ಆಕ್ರಮಣಕಾರಿಗಳು ಬರಲಾರಂಬಿಸಿದರು . ೧೧ ನೇ ಶತಮಾನ ದಲ್ಲಿ ಮಹಮದ್ ಘಸ್ನಿ ಹಾಗು ೧೨ ನೇ ಶತಮಾನದಲ್ಲಿ ಮಹಮೆದ್ ಘೋರಿ ಇವರುಗಳು ನಮ್ಮ ದೇಶದ ಮೇಲೆ ಧಾಳಿ ಮಾಡಿದ ನಂತರವಂತೂ ದೇಶದಲ್ಲಿ ಕೊಲೆ,ಸುಲಿಗೆ,ನಾಶ ಧ್ವಂಸಗಳ ಘೋರ ತಾಂಡವವನ್ನೇ ಹರಿಯಬಿಟ್ಟಿದ್ದು ಒಂದು ದೊಡ್ಡ ದುರಂತವೇ ಸರಿ.ಅಲ್ಲಿಂದ ೮೦೦ ವರ್ಷಗಳ ಪರ್ಯಂತ ಪರಕೀಯ ಮುಸಲ್ಮಾನ ರೊಡನೆ ಹಿಂದುಸ್ತಾನವು ಸ್ವಾತಂತ್ರಕ್ಕೋಸ್ಕರ ಸಂಗ್ರಾಮದಲ್ಲಿ ತೊಡಗಿತು .
ದೇಶಕ್ಕೊದಕ್ಕಿದ ಮತ್ತೊಂದು ಮಹಾ ದೌರ್ಭಾಗ್ಯವೆಂದರೆ ಸಾಮ್ರಾಜ್ಯಶಾಹಿ ಬ್ರಿಟಿಷರು ವ್ಯಾಪಾರಕ್ಕೆಂದು ನಮ್ಮ ದೇಶಕ್ಕೆ ಬಂದು ಕಾಲಾನಂತರದಲ್ಲಿ ನಮ್ಮ ಇಡೀ ದೇಶವನ್ನೇ ಅವರ ಆಡಳಿತಕ್ಕೆ ಪಡೆದುಕೊಂಡಿದ್ದು.ನಂತರ ದೇಶದ ಸ್ವಾತಂತ್ರ್ಯ ಕ್ಕೋಸ್ಕರ ನಡೆದ ಹೋರಾಟ ಸಾವು, ನೋವು ,ವ್ಯಾಪಕ ಜನಾಂದೋಲನ ,ಅನೇಕ ದೇಶ ಭಕ್ತರ ಬಲಿದಾನ ,ತ್ಯಾಗ,ಸಮರ್ಪಣೆ ಧ್ಯೇಯತಪ್ತ ಜನ ಪೀಳಿಗೆ .
ಅಂತೂ ನಮ್ಮ ದೇಶಕ್ಕೆ ನಂತರ ಸ್ವಾತಂತ್ಯ್ರವೇನೋ ಸಿಕ್ಕಿತು ,ಆದರೆ ಶಾಂತಿ,ಸುಖ ಸಿಗಲಿಲ್ಲ.ಒಡೆದು ಆಳಿದ ಬ್ರಿಟಿಷರು ಕೊನೆಗೂ ದೇಶವನ್ನು ಇಬ್ಬಾಗ ಮಾಡಿ ಭಾರತ -ಪಾಕಿಸ್ತಾನ ಎಂದು ವಿಭಜಿಸಿಯೇ ಬಿಟ್ಟರು. ಈ ವಿಭಜನೆ ಮಹಾ ಭಯಂಕರ ದುರಂತವಾಗಿ
ಪರಿಣಮಿಸಿತು.ರಾತ್ರಿ ಕಳೆದು ಬೆಳಗಾಗುವುದರೊಳಗಾಗಿ ಮಿಲಿಯಗಟ್ಟಲೆ ಭಾರತೀಯ ಸುಪುತ್ರರು ಹಿಂದೂ ವಿರೋಧಿ ರಾಷ್ಟ್ರ ಎಂಬ ಹಣೆಪಟ್ಟಿ ಕಟ್ಟಿಕೊಂಡ ಪಾಕಿಸ್ತಾನದ ಪ್ರಜೆಗಳಾಗಿಹೋದರು .ಸಿಂಧು ನದಿಯನ್ನು ನಮಗೆ ಪರಮಾಡಿಬಿಟ್ಟರು.ಈ ವಿಭಜನೆಯಿಂದ ಇತ್ತ-ಅತ್ತಲಿನ ಕೊಟ್ಯಾವಧಿ ಬಂಧು-ಭಗಿನಿಯರು ಪರಸ್ಪರ ವಿದೇಶಿಗಳಾದರು . ಅಂದಿನಿಂದಲೂ ಪಾಕಿಸ್ತಾನ ನಮಗೆ ಮಗ್ಗುಲ ಮುಳ್ಳಾಗಿ ,ಅನೇಕ ರೀತಿಯ
ಉಪಟಳಗಳನ್ನೂ ನೀಡುತ್ತಲೇ ಇದೆ.ಇದು ಸರ್ವ ವಿದಿತ
ನಮ್ಮ ದೇಶವನ್ನು ದುರ್ಬಲ ಗೊಳಿಸಲು ಪಾಕಿಸ್ತಾನ ಯಾವಾಗಲೂ ಹೊಂಚು ಹಾಕುತ್ತಲೇ ಇರುವುದು ಪ್ರಪಂಚ ತಿಳಿದಿರುವ ವಿಷಯ .ಧರ್ಮ ಯುದ್ಧದ ಹೆಸರಿನಲ್ಲಿ ಇದುವರೆಗೂ ಮತಾಂಧ ಜನರನ್ನು ತರಬೇತಿಗೊಳಿಸಿ ನಮ್ಮ ದೇಶದೊಳಕ್ಕೆ ಹೇಗಾದರೂ ಮಾಡಿ
ಒಳ ನುಸುಳಿಸಿ ದೇಶದೊಳಗೆ ಅಲ್ಲೋಲ ಕಲ್ಲೋಲವನ್ನು ಉಂಟುಮಾಡಿ,ದೇಶವನ್ನು ಅಸ್ತಿರಗೊಲಿಸುವುದು ಅದರ ಸರ್ವಕಾಲಿಕ ಮಹದಾಸೆ .
ಭಾರದೇಶದಲ್ಲಿ ಹೇಗಾದರೂ ಮಾಡಿ ಅಲ್ಲಿರುವ ಮುಸ್ಲಿಂ ಜನಸಂಖ್ಯೆ ಯನ್ನು ಇಮ್ಮಡಿಗೊಳಿಸುವುದು ಪಾಕಿಸ್ತಾನದ ಹುನ್ನಾರ .
ಮತಾಂತರದ ಪಿಡುಗು ಹುಟ್ಟಿಕೊಂಡಿದ್ದೇ ಹೀಗೆ. ವೋಟು ಬ್ಯಾಂಕ್ ರಾಜಕಾರಣ ಹಾಗು ಅಲ್ಪಸಂಖ್ಯಾತರ ಓಲೈಕೆ ಹಿಂದಿನಿಂದಲೂ ನಮ್ಮ ರಾಜಕಾರಣಿಗಳಿಗೆ ಅಂಟಿದ ಜಾಡ್ಯ.ಈ ಒಲೈಕೆಯಿಂದ ಅಲ್ಪಸಂಖ್ಯಾತರ ಹೆಸಾರಿನಲ್ಲಿ ಎಲ್ಲಾ ಸವಲತ್ತು ಗಳನ್ನೂ ಪಡೆದುಕೊಳ್ಳುತ್ತಾ ,ಧರ್ಮದ ಹೆಸರಿನಲ್ಲಿ ಸರ್ಕಾರದ ಕುಟುಂಬ ಯೋಜನೆಗೆ ತನ್ನನ್ನು ಒಡ್ಡಿಕೊಳ್ಳದೆ, ಅವ್ಯಾಹತವಾಗಿ ತನ್ನ ಜನ ಸಂಖ್ಯೆ ಯನ್ನು ಹೆಚಿಸಿಕೊಳ್ಳುತ್ತ ಇರುವ ಮುಸ್ಲಿಂ ಸಮುದಾಯ ಎಂದಿಗೂ ಭಾರತೀಯ ಜನಮಾನಸ ದೊಂದಿಗೆ ಬೇರೆಯುವುದಿಲ್ಲವೇನೋ
ಎಂಬಂತೆ ನಡೆದುಕೊಳ್ಳುತ್ತಿದೆ .ನಮ್ಮ ದೇಶದ ಮುಸ್ಲಿಂ ಸಮುದಾಯಕ್ಕೆ ವಿದೇಶಗಳಿಂದಅಪಾರ ಪ್ರಮಾಣದ ಹಣ ಹರಿದುಬರುತ್ತಿರುವುದು
ಗುಟ್ಟಾಗಿ ಏನೂ ಉಳಿದಿಲ್ಲ . ಈ ಅಪಾರ ಹಣವನ್ನು ಹೇಗೆ ವ್ಯಯಿಸಲಾಗುತ್ತಿದೆ ? ಪ್ರಮುಖವಾಗಿ ಮತಾಂತರಕ್ಕೆ ಎನ್ನಬಹುದು . ಮಸೀದಿಗಳ ಸ್ಥಾಪನೆ ಗೆ ,ಮದರಾಸಗಳ ಸ್ಥಾಪನೆಗೆ,ಹಾಗು ಮತಾಂತರ ದ ಕಾನೂನು ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ಈ ಹಣ ಬಳಕೆ ಆಗುತ್ತದೆಂದು ಹೇಳಲಾಗುತ್ತದೆ .ಭಾರತ ಬಹುಸಂಖ್ಯಾತರಿರುವ ಹಿಂದೂ ರಾಷ್ಟ್ರ ವಾಗಿದ್ದರೂ ಇದು ಜಾತ್ಯಾತೀತ ರಾಷ್ಟ್ರವಾಗಿರುವುದು ಈ ರಾಷ್ಟ್ರದ ವಿಶೇಷತೆ .ಲವ್ ಜಿಹಾದ್ ಬಗ್ಗೆ ಬರೆಯಲು ಶುರುವಿಟ್ಟಾಗ ಈ ಪೀಠಿಕೆಯೇ ಮಾರುದ್ದವಾಯಿತೇನೋ ಅನಿಸುತ್ತಿದೆ .
ಲವ್ ಜಿಹಾದ್ ಬಗ್ಗೆ ನಂತರ ಮುಂದುವರೆಸುತ್ತೇನೆ.

ಈ ದಿನದ ಸ್ಪಂದನ:
ಭಾರತೀಯ ಸಂಸ್ಕೃತಿಯ ಅಂಗವೇ ಆಗಿರುವ ಧರ್ಮ,ಧಾರ್ಮೀಕ ಸಂಪ್ರದಾಯ ಹಾಗು ಅದರ ಆಚರಣೆಯಿಂದ ವೈಯುಕ್ತಿಕವಾಗಿ ,ಸಾಮೂಹಿಕವಾಗಿ ಸಿಗುವುದು ಶಾಂತಿ ಹಾಗೂ ಚಿತ್ತ ಕ್ಷೋಬೆಯಿಂದ ಮುಕ್ತಿ ಎಂಬ ವಿಚಾರದಲ್ಲಿ ಎರಡು
ಮಾತಿಲ್ಲ .ಧರ್ಮ ಕ್ಷೀಣಿಸಿದರೆ ಅಶಾಂತಿ ಮೂಡುತ್ತದೆ.

ದಿನಕರ ದೇಸಾಯಿಗಳನ್ನು ನೆನೆದು ......
ದಿನಕರ ದೇಸಾಯಿಗಳು ಬರೆದರು ನಾಲ್ಕು ಸಾಲಿನ ಪದ್ಯ ,
ಅವರ ಒಂದೊಂದು ಚುಟುಕೂ ,ನಮಗೆಲ್ಲಾ ಹೃದ್ಯ.
ಅವರ ಮಾರ್ಗದಿ ಈಗ ನಾವೆಲ್ಲ ನಡೆದು ,
ಮಾಡೋಣ ಸೇವೆಯನು ,ಅವರನ್ನು ನೆನೆದು.

[ನನ್ನ "ಬಣ್ಣಗಳು" ಕವನ-ಚುಟುಕು ಸಂಗ್ರಹದಿಂದ ]

--------------------------------------------------------------- ಓಂ -------------------------------------------------------------------


ಶುಕ್ರವಾರ, ಅಕ್ಟೋಬರ್ 23, 2009

"ಬಣ್ಣಗಳು' ನನ್ನ ಮೊದಲ ಕವನ-ಚುಟುಕುಗಳ ಸಂಗ್ರಹ ......

ಶ್ರೀ ವಿರೋಧಿ ನಾಮ ಸಂವತ್ಸರ ,ದಕ್ಷಿಣಾಯಣ ,ಶರದೃತು ,ಕಾರ್ತಿಕ ಮಾಸ ಶುಕ್ಲಪಕ್ಷ , ಪಂಚಮಿ ಶುಕ್ರವಾರ .೨೩-೧೦-೨೦೦೯.
ನಾನು ಹೇಳಿದ್ದೆನಲ್ಲ ,ಮೊದಲಿನಿಂದಲೂ ನನಗೆ ಬರೆಯುವ ಹವ್ಯಾಸ ಇತ್ತೆಂದು .ಸಣ್ಣ, ಸಣ್ಣ ಕವನಗಳನ್ನೂ ಬರೆಯುವ ಮತ್ತು ಆ ಕವನಗಳನ್ನು ಸ್ಥಳೀಯ ಪತ್ರಿಕೆಗಳಿಗೆ ಕಳುಹಿಸಿಕೊಡುತ್ತಿದ್ದೆ .ಹೆಚ್ಹಿನವು ಯಾವ ತಿದ್ದುಪಡಿಯೂ ಇಲ್ಲದೆ ಪ್ರಕಟವಾಗುತ್ತಿದ್ದವು.
ನನ್ನ ತಂಗಿ ಉಮಾ ಆ ಕವನಗಳನ್ನು ಓದಿ ಚೆನ್ನಾಗಿದೆ ಇನ್ನೂ ಬರೆ ಎಂದು ನನ್ನನ್ನು ಪ್ರೋತ್ಸಾಹಿಸಿದ್ದರಿಂದ ನನ್ನ ಕವನ ಬರವಣಿಗೆ
ಮುಂದುವರೆಯಿತು .ಹಾಗೆ ಪ್ರಕಟವಾದದ್ದು ಮತ್ತು ಇತರೆ ಕವನಗಳನ್ನು ಹೇಗೋ ಒಂದು ಕಡೆ ಸಂಗ್ರಹಿಸುತ್ತಿದ್ದೆ .
ನಾನಾಗ [೧೯೯೬] ಸ್ಟೇಟ್ ಬ್ಯಾಂಕ್ ಆಫ್ ಮೈಸೂರು , ಶಿವಮೊಗ್ಗ ದ ಗಾಂಧೀಬಜಾರ ಶಾಖೆಯಲ್ಲಿ ಸಹ ವ್ಯವಸ್ಥಾಪಕ ನಾಗಿ ಕೆಲಸ ನಿರ್ವಹಿಸುತ್ತಿದ್ದೆ .ನಾನು ಅಸ್ಟು ಹೊತ್ತಿಗಾಗಲೇ ಹತ್ತಿರ,ಹತ್ತಿರ ೭೦-೮೦ ಕವನಗಳನ್ನು -ಚುಟುಕುಗಳನ್ನು ಬರೆದಿದ್ದೆ .ಗೆಳೆಯ ಭಗವಾನ್ [ಎಸ್ .ದತ್ತಾತ್ರಿ ,ಎಂ .ಎ .,ಬಿ .ಇಡಿ .,ಆರ್ ಬಿಪಿ.,] ಎಂಬುವವರು ಈ ಎಲ್ಲಾ ಕವನಗಳನ್ನೂ ಒಮ್ಮೆ ಓದಿ ನನ್ನ ಬೆನ್ನು ತಟ್ಟಿ ,ಒಂದು ಕವನ ಸಂಕಲನ ಹೊರತರುವಂತೆ ನನ್ನನ್ನು ಪ್ರೋತ್ಸಾಹಿಸಿದರು .ಅಲ್ಲದೆ ತಮ್ಮದೇ ಒಂದು ಪ್ರಕಾಶನ ಇರುವುದಾಗಿಯೂ ಅದರಡಿಯಲ್ಲಿಯೇ ಪುಸ್ತಕ ಪ್ರಕಟಿಸುವುದಾಗಿಯೂ ಭರವಸೆಯಿತ್ತರು.
ಸರಿ,ಪ್ರಕಟನಾರ್ಹ ಕವನಗಳನ್ನೂ,ಚುಟುಕುಗಳನ್ನು ಒಂದೆಡೆ ಬರೆದು ತಿದ್ದಿ ತೀಡಿ ಮುದ್ರಕರಿಗೆ ಕೊಟ್ಟಿದ್ದಾಯಿತು .ಇದು ನನ್ನ ಮೊದಲನೆ ಕವನ ಸಂಕಲನ .ಈ ಕವನ ಸಂಕಲನವನ್ನು ನನ್ನ ಅಣ್ಣ ಬ್ರೆಡ್ ಅಂಗಡಿ ಸುಬ್ಬಣ್ಣನಿಗೆ ,ಈ ಭೂಮಿಗೆ ನನ್ನ ತಂದ ನನ್ನ ಮಾತಾಪಿತರನ್ನು ನೆನೆದು ,ಅರ್ಪಿಸಿದೆ.ನನ್ನ ಈ ಕವನ ಸಂಗ್ರಹಕ್ಕೆ ಕನ್ನಡ ಪೂಜಾರಿ ಶ್ರೀ ಹಿರೇಮಗಳೂರು ಕಣ್ಣನ್ ಮುನ್ನುಡಿ ಬರೆದು 'ತಾ ಲೆಕ್ಖಣಿಕೆ ತಾ ದೌತಿ'ಎನ್ನದೆ ಚುಟುಕು-ಕವನ ದ ಲೆಖ್ಖ ಬರೆವ ಸಾಹಸಕ್ಕೆ ಕೈ ಹಾಕಿದ್ದೀರಿ .ಬೇಸತ್ತ ಮುಖಕ್ಕೆಲ್ಲಾ ಬಸವಳಿಸುವ ಮಸಿಗಾರರೆನಿಸಿದ್ದೀರಿ ' ನಿಮ್ಮ ಪ್ರಯತ್ನಕ್ಕೆ ಜೈ ಅನ್ನೋಣ ಎಂದು ಹರಸಿದರು.
ಅಚ್ಹಿಗೆ ಹೋಗುವಾಗ ಕರಪ್ರತಿಯನ್ನು ತಿದ್ದಿಕೊಟ್ಟು 'ಅಪ್ಪಾ ಅದು ಹೀಗೆ ....ಇದು ಹೀಗೆ'ಎಂದು ಹೇಳಿದ ನನ್ನ ಮಗಳು ಮಾಧುರ್ಯಳ ಸಹಕಾರವನ್ನು ಪ್ರೀತಿಯಿಂದ ನೆನೆದು ,ನನ್ನೆಲ್ಲಾ ಕೆಲಸಗಳಲ್ಲಿ ಸಹಭಾಗಿಯಾಗಿ ಸ್ಪೂರ್ತಿ ,ಉತ್ಸಾಹ ತುಂಬುವ ನನ್ನವಳು-ಸೌ.ಭಾರತಿಯ ಸಹಕಾರ ನೆನೆದೆ.ಪ್ರಕಾಶಕರಾಗಿ ಶ್ರೀ ಭಗವಾನ್ ಒಂದೆರಡು ಮಾತು ಬರೆದು 'ಬಣ್ಣಗಳು"ಮುದನೀಡಲಿ
ಎಂದು ಆಶಿಸಿದರು .
ಬೋರಾಯಿತಾ? ಕ್ಸಮಿಸಿ .ಕವನ ಸಂಕಲನದ ಮೊದಲ ಕವನ ಒಂದನ್ನು ನೀಡುತ್ತಾ ನಿಮ್ಮ ಅಭಿಪ್ರಾಯಕ್ಕಾಗಿ ಕಾಯುತ್ತಾ ........
ಜೀವನಾರ್ಥ :
ಗಿಡವೊಂದು,
ಬೆಳೆದು ಮರವಾಗಿ,
ಮರದಲ್ಲಿ ಹೂವುಅರಳಿ
'ಪರಾಗ'ಸ್ಪರ್ಶಿಸಿ -
ಟಿಸಿಲೊಡೆದು, ಹಲವು
ಕೊಂಬೆಗಳೊಡನೆ
ಬೆಳೆಯುತ್ತದೆ-ತಾನೆ ತಾನಾಗಿ;
ನಂತರ-
ಅದರ ಬೀಜಗಳು ದೂರ ಸಿಡಿದು ,
ಹಲವಾರು ಅಲ್ಲೇ ಬೆಳೆದು ,
ಮರವಾಗಿ
ಕಂಗೊಳಿಸಿದಾಗ -
ಆ ಮೊದಲ ಮರ,
ಉರುಳುತ್ತದೆ ,ಅಳಿಯುತ್ತದೆ ,
ತಾನೇ ,ತಾನಾಗಿ.
ಧನ್ಯತೆಯ ಭಾವ ತಳೆಯುತ್ತದೆ.

ದಿನದ ಸ್ಪಂದನ:
ಅಮೆರಿಕಾದ ಶ್ವೇತಭವನದಲ್ಲಿ ಮೊದಲಬಾರಿಗೆ ದೀಪಾವಳಿ ಹಬ್ಬ !
ಬರಾಕ್ ಒಬಾಮ ಶ್ವೇತಭವನದಲ್ಲಿ ,ವೇದ ಮಂತ್ರದ ಘೋಷದ ನಡುವೆ ೧೫-೧೦-೨೦೦೯ ರಂದು ಗುರುವಾರ ರಾತ್ರಿ ದೀಪಾವಳಿಯನ್ನು ಆಚರಿಸಿದರಂತೆ.ಇವರೇ ದೀಪಾವಳಿ ಆಚರಿಸಿದ ಅಮೆರಿಕಾದ ಮೊದಲ ಅಧ್ಯಕ್ಷರು .
ದೀಪಾವಳಿ ಬೆಳಕಿನ ಹಬ್ಬ . ದೀಪವೆಂದರೆ ಬೆಳಕು ,ಬೆಳಕೆಂದರೆ ಅರಿವು . ಎಲ್ಲರ ,ಎಲ್ಲೆಡೆ ಅಂಧಕಾರ ಕಳೆದು ಜಗತ್ತಿನಲ್ಲಿ ಬೆಳಕು ಮೂಡಿ ,ಶಾಂತಿ ಸಮೃದ್ಧಿ ,ಸಂತಸ ತರಲಿ.ಇದೆ ದೀಪಾವಳಿಯ ಸಂಕೇತ ಕೂಡ .
ತಡವಾಗಿಯಾದರೂ ಬರಾಕ್ ಒಬಾಮ ಅವರಿಗೆ ನಾವೆಲ್ಲಾ ದೀಪಾವಳಿಯ ಶುಭಾಷವಯ ಕೋರೋಣ .


ಅಮೃತವಾಣಿ:
ಸದುಪದೇಶ ಎಂಬುದೇ ಕಿವಿಗಳಿಗೆ ತುಂಬಬೇಕಾದ ಅಮೃತ.
ಶ್ರೀ ಶಂಕರ ಭಗವತ್ಪಾದಾಚಾರ್ಯರು
-------------------------------------------------------- ಓಂ--------------------------------------------------------------------------




ಸದುಪದೇಶ

ಮಂಗಳವಾರ, ಅಕ್ಟೋಬರ್ 20, 2009

ಕೋಮು ಸೌಹಾರ್ದವೆಂದರೆ......

"ಹಿಂದೂಗಳ ಅಭಿಪ್ರಾಯವನ್ನು ಧಿಕ್ಕರಿಸುವುದು ,ಅಲ್ಪಸಂಖ್ಯಾತರನ್ನು ಓಲೈಸುವುದು -ಕೋಮು ಸೌಹಾರ್ದತೆ ಎನಿಸಿ ಕೊಳ್ಳುತ್ತದೆಯೇ?
ನಾವಾಗ
ಮೈಸೂರಿನಲ್ಲಿದ್ದೆವು .ಮೈಸೂರಿನ ,ಕುವೆಂಪುನಗರದ ಕೂಡು ರಸ್ತೆಯ ವೃತ್ತವೊಂದಕ್ಕೆ ರಾಷ್ಟ್ರಪ್ರೇಮಿ ,ಡಾ .ಹೆಡಗೆವಾರ್ ರವರ

ಹೆಸರನ್ನು ಮೈಸೂರು ನಗರ ಪಾಲಿಕೆಯವರು ನಾಮಕರಣ ಮಾಡಿದರು .ಸರಿ ಯಾರ ಕುಮ್ಮಕ್ಕಿನಿಂದಲೋ ಏನೋ ಅಲ್ಲಿಯ ವಿಚಾರವಾದಿಗಳ ವೇದಿಕೆಯವರೂ ,ಹಾಗು ಕೋಮು ಸೌಹಾರ್ದವೇದಿಕೆಯವರು ಪಾಲಿಕೆಯ ಈ ನಿಲುವನ್ನು ಪ್ರತಿಭಟಿಸಿ ಹೇಳಿಕೆಗಳನ್ನಿತ್ತು ಎಂದಿನ ತಮ್ಮ ನಿಲುವನ್ನು ತೋರಿಸಿದವು. ಈ ಬಗ್ಗೆ ನಾನು ನನ್ನ ಅನಿಸಿಕೆಯನ್ನು "ಮೈಸೂರು ಮಿತ್ರ 'ಪತ್ರಿಕೆಗೆ ಬರೆದೆ .ಮೈಸೂರುಮಿತ್ರ ಪತ್ರಿಕೆಯ ೧೫-೦೮-೨೦೦೫ ರ "ನಿಮ್ಮಪತ್ರ-ವಿಭಾಗ"ದಲ್ಲಿ ಪ್ರಕಟವಾಯಿತು .
ಆ ಪತ್ರ -
"ವೃತ್ತಕ್ಕೆ ಹೆಡಗೆವಾರ್ ಹೆಸರು :ಸ್ವಾಗತಾರ್ಹ"
ಮಾನ್ಯರೇ,

ಕುವೆಂಪುನಗರದ ಕೂಡು ರಸ್ತೆ ,ಹೋಟೆಲ್ ಶಾಂತಿಸಾಗರದ
ಮುಂಭಾಗದ ವೃತ್ತಕ್ಕೆ ಒಬ್ಬ ರಾಷ್ಟ್ರ ಪ್ರೇಮಿ ಡಾ.ಹೆಡಗೆವಾರ್ ರವರ ಹೆಸರನ್ನು ನಾಮಕರಣ ಮಾಡುವುದರ ಮೂಲಕ ನಗರಪಾಲಿಕೆ ತಾನು ನಿಜವಾದ ಜನಪರ ಪಾಲಿಕೆಯೆಂದು ತೋರಿಸಿಕೊಟ್ಟಿದೆ .ಆ ವೃತ್ತಕ್ಕೆ ಡಾ.ಹೆಡಗೆವಾರ್ ಹೆಸರನ್ನಿಡುವುದರ ಮೂಲಕ ಮೈಸೂರಿನ ಜನತೆಗೆ ' ಸ್ವಾತಂತ್ರ್ಯೋತ್ಸವದ ಉಡುಗೊರೆ ನೀಡಿದೆ'
ಕೆಲವು ಸಂಘಟನೆ ,ವಿಚಾರವೇದಿಕೆಗಳು ಇವೆ .ತಮ್ಮನ್ನು ತಾವು ಪ್ರಗತಿಪರರೆಂದು ಹೇಳಿಕೊಳ್ಳುತ್ತಾ ,ಜನಪರ ಮತ್ತು ದೇಶಪ್ರೇಮಿ ಕಾರ್ಯಗಳು ಎಲ್ಲೇ ನಡೆದರೂ ,ನನ್ನದೊಂದು ಸೊಟ್ಟ ಕೈ ಎಲ್ಲಿಡಲಿ ಅಂತ ಮೂಗು
ತೂರಿಸುವುದೆ ಇವುಗಳ ಜಾಯಮಾನ .ಹೀಗೆ ಎಲ್ಲ ವಿಷಯಗಳಲ್ಲಿಯೂ ತಮ್ಮ ಮೂಗು ತೂರಿಸುವುದಕ್ಕೆ ಇವರಿಗೆ ಅಧಿಕಾರ ಕೊಟ್ಟವರು ಯಾರು?

ಕೇವಲ ಬೆರಳೆಣಿಕೆಯಷ್ಟು ಮಂದಿ ಗುಂಪುಗೂಡಿ,ಬಹುಸಂಖ್ಯಾತರ ಭಾವನೆಗಳಿಗೆ ನೋವುಂಟುಮಾಡುವಂತಹ ಇವರ ಸೋಗಲಾಡಿತನ ಹೆಚ್ಹು ದಿನ ನಡೆಯಲಾರದು .ಕೋಮುಸೌಹಾರ್ದ ವೇದಿಕೆಯವರು ಸಹ ಈ ಪಾಲಿಕೆ ಒಳ್ಳೆಯ ನಿಲುವನ್ನು ಖಂಡಿಸಿ
ಆಕ್ಷೇಪ ವ್ಯಕ್ತಪಡಿಸಿದ್ದಾರೆಂದು ಸುದ್ದಿಯಾಗಿದೆ. 'ಕೋಮು ಸೌಹಾರ್ದವೆಂದರೆ ಕೇವಲ ಅಲ್ಪ ಸಂಖ್ಯಾತರನ್ನು ಒಲೈಸುವುದಲ್ಲ ಎಂಬುದನ್ನು ಈ ಸಂಘಟನೆಗಳು ತಿಳಿಯಬೇಕಾಗಿದೆ .
ಡಾ .ಹೆಡಗೆವಾರ್ ,ಆರ್. ಎಸ್ .ಎಸ್ .ಮೂಲದವರು ಎಂದೂ ,ಅವರ ಹೆಸರನ್ನು ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರ ಆಶಯಕ್ಕೆ ವಿರುದ್ದವೆಂದೂ ಹೇಳಿರುವುದು ಹಾಸ್ಯಾಸ್ಪದ ವಿಚಾರ. ವಿಶ್ವಮಾನವ ವಿಚಾರ ಬಹು ವಿಶಾಲವಾದುದು . 'ಹಿಂದುಗಳನ್ನು' ವಿರೋಧಿಸಬೇಕೆನ್ನುವಷ್ಟು 'ಅಲ್ಪ-ಹಾಗೂ ಸಂಕುಚಿತ 'ವಿಚಾರ ಅದರಲ್ಲಿಲ್ಲ .ಇಲ್ಲಿ ನಿಜವಾಗಿ ಸಂಕುಚಿತ ಬುದ್ದಿ ತೋರಿಸುತ್ತಿರುವವರು ಈ ಬುದ್ದಿವಂತರು ಎಂದುಕೊಂಡ ಪ್ರಗತಿಪರ ಕೋಮುಸೌಹಾರ್ದ ವೇದಿಕೆಯವರೂ,ಹಾಗೂ ವಿಚಾರವಾದಿಗಳು ಎನ್ನಬೇಕಾಗಿದೆ.

ಮೈಸೂರು. -ಬೇಲೂರು ದ. ಶಂ .ಪ್ರಕಾಶ .
೧೨-೦೮-೨೦೦೫.
ಈ ಕೋಮು ಸೌಹಾರ್ದತೆ ವಿಚಾರ ನಿಮಗೆ ಏನನಿಸುತ್ತದೆ? ನನ್ನ ಈ ಬ್ಲಾಗ್ ಗೆ ನಿಮ್ಮ ಅಭಿಪ್ರಾಯ ತಿಳಿಸಿ.


ಕಾಸರವಳ್ಳಿ ಗೆ "ಎಕ್ಸಲೆನ್ಸ್ "ಪ್ರಶಸ್ತಿ - ನಾವೆಲ್ಲ ಹೆಮ್ಮೆ ಪಡೋಣ .
ಲಂಡನ್ ವರದಿ -ಕಲಾತ್ಮಕ ಚಿತ್ರಗಳ ಹೆಸರಾಂತ ನಿರ್ದೇಶಕ ಹೆಮ್ಮೆಯ ಕನ್ನಡಿಗ ಗಿರೀಶ್ ಕಾಸರವಳ್ಳಿ ಅವರಿಗೆ ೨೦೦೯ ರ ದಕ್ಷಿಣ ಏಷ್ಯಾ ಸಿನಿಮಾ ಪ್ರತಿಷ್ಠಾನ ದ 'ಎಕ್ಸಲೆನ್ಸ್ ಇನ್ ಸಿನೆಮಾ ' ಕ್ರಿಸ್ಟಲ್ ಗ್ಲೋಬ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ .
ಲಂಡನ್ನಿನ ನೆಹರು ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಬ್ರಿಟನ್ನಿನಲ್ಲಿರುವ ಭಾರತದ ಹೈಕಮಿಷನ್ನರ್ ನಳಿನ್ ಸೂರಿ ಪ್ರಶಸ್ತಿ ಪ್ರಧಾನ ಮಾಡಿದರು .
ಕಾಸರವಳ್ಳಿ ಯವರ ಬಗ್ಗೆ ಹೆಚಿನದ್ದೆನನ್ನು ಹೇಳುವುದು ಬೇಕಾಗಿಲ್ಲವೆಂದು ನನ್ನ ಭಾವನೆ.
ಕನ್ನಡ ಸಂಸ್ಕೃತಿಯ ಹೆಮ್ಮೆ ಈ ನಮ್ಮ ಗಿರೀಶ್ ಕಾಸರವಳ್ಳಿಯವರು. ಕನ್ನಡ ಸಿನೆಮಾಗಳಿಗೆ ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಬಹು ದೊಡ್ಡ ಸ್ಥಾನವನ್ನು ದೊರಕಿಸಿಕೊಟ್ಟಿದ್ದಾರೆ .ಕಳೆದ ಮೂರು ದಶಕಗಳಿಂದಲೂ ಹೊಸ ಅಲೆಯೊಂದಿಗೆ ತಮ್ಮನ್ನು ಗುರುತಿಸಿಕೊಂಡು ಇಲ್ಲಿಯವರೆಗೂ ಅದೇ ಜಾಡಿನಲ್ಲಿ ಸಾಗಿರುವ ಕಾಸರವಳ್ಳಿಯವರು ನಮ್ಮ ಸಿನೆಮಾ ಜಗತ್ತಿನ ಆದ್ಯ ಪ್ರವರ್ತಕ ಎನಿಸಿಕೊಂಡಿದ್ದಾರೆ .ಅವರು ತಯಾರಿಸಿರುವ ಚಿತ್ರಗಳ ಸಂಖ್ಯೆ ೧೨ ನ್ನು ಮೀರಿಲ್ಲವಾದರೂ ಯಾವ ಧಾವಂತವೂ ಇಲ್ಲದೆ ಚಿತ್ರ ನಿರ್ಮಿಸುವುದು ಅವರ ಸ್ಟೈಲ್ .ಸ್ತ್ರೀ ಪ್ರಧಾನ ಚಿತ್ರಗಳಿಗೆ ಅವರು ಸೀಮಿತವಗಿದ್ದಾರೆಂಬ ಆರೋಪ ವಿದ್ದರೂ ,ಅಸಮಾನತೆಯ ವಿರುದ್ದ {ಸ್ತ್ರೀ ಸಮಾನತೆ ] ಅವರ ಕೂಗಿಗೆ ಬೆಲೆಯಂತೂ ಸಿಕ್ಕಿದೆಯನ್ನಬಹುದು .
೧೮ ರಾಷ್ಟ್ರಪ್ರಶಸ್ತಿ,೩೨ ರಾಜ್ಯ ಪ್ರಶಸ್ತಿ ,ಹಾಗೂ ೧೪ ಅಂತರ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವುದಲ್ಲದೆ ,೨ ಬಾರಿ ಫಿಲಂ ಫೇರ್ ಪ್ರಶಸ್ತಿ ಗಳಿಂದ ಇವರ ಕೊರಳು ಭಾರವಾಗಿದೆ.
ನಿಜಕ್ಕೂ ನಾವು ಹೆಮ್ಮೆಪಡಬೇಕಲ್ಲವೇ?

ಈ ದಿನದ ಸ್ಪಂದನ :
ಕಣ್ಣು ತೆರೆದು ನಿದ್ರೆ ಮಾಡಲು ಸಾದ್ಯವೇ? ಹೀಗೊಂದು ಪ್ರಶ್ನೆ ಎದುರಾದರೆ -ಇಲ್ಲಿದೆ ಉತ್ತರ.
"ಡಾಲ್ಫಿನ್ ಮೀನು , ಒಂದು ಕಣ್ಣು ತೆರೆದಿಟ್ಟುಕೊಂಡೇ ನಿದ್ರಿಸುವುದಂತೆ !

________--------------------- ಓಂ -------------------____________ ನಮಸ್ತೆ .










ಸೋಮವಾರ, ಅಕ್ಟೋಬರ್ 12, 2009

ಸೋಮವಾರ ,ನವಮಿ . ದಿನಾಂಕ :೧೨-೧೦-೨೦೦೯.
ಓಂ ಶಾಂತಿ :, ಓಂ ಶಾಂತಿ: ಅಂದದಕ್ಕೆ ಒಬಾಮಾಗೆ ನೊಬೆಲ್ ಪುರಸ್ಕಾರ !
ಈ ಗರಿ ಎಷ್ಟು ಸರಿ?

ಮನುಕುಲದ ಅಭಿವ್ರುದ್ಹಿಗಾಗಿ ನಡೆಸುವ ಕಾರ್ಯಕ್ಸೇತ್ರಗಳಿಗೆ ಸಂಬಂದಿಸಿದಂತೆ ಆಯಾ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಪ್ರತಿ ವರ್ಷವೂ ನೊಬೆಲ್ ಫೌಂಡೇಶನ್ ನೀಡುವ ,ಪ್ರಪಂಚದ ಅತ್ಯುನ್ನತ ಪ್ರಶಸ್ತಿ ನೊಬೆಲ್ ಪ್ರಶಸ್ತಿ .ಭೌತಶಾಸ್ತ್ರ ,ರಸಾಯನಶಾಸ್ತ್ರ ,ವೈದ್ಯಕೀಯ ,ಸಾಹಿತ್ಯ ,ಶಾಂತಿ ಮತ್ತು ಅರ್ಥಶಾಸ್ತ್ರ -ಈ ಆರು ವಿಭಾಗಗಳಲ್ಲಿ ಪುರಸ್ಕಾರ ನೀಡಲಾಗುತ್ತಿದೆ .
೨೦೦೯ ನೆ ಸಾಲಿನ ನೊಬೆಲ್ ಪ್ರಶಸ್ತಿಗಳು ಪ್ರಕಟವಾಗಿದ್ದು ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಪ್ರಶಸ್ತಿ ಘೋಷಿಸಲಾಗಿದೆ .
ಈ ಪ್ರಶಸ್ತಿಯ ಘೋಷಣೆ ಅಮೆರಿಕನ್ನರಿಗೆ ,ಹಾಗು ಒಬಾಮ ಅವರ ಕೀನ್ಯಾ ಮೂಲದ ಕುಟುಂಬ ವರ್ಗದವರಿಗೆ ಹರ್ಷ ತಂದಿರುವುದು ನಿಜ .ಆದರೆ ಒಬಾಮ ಆವರಿಗೆ ಸಂದ ಈ ಪ್ರಶಸ್ತಿ ಅನೇಕರ ಟೀಕೆಗೂ ಗುರಿಯಾಗಿದೆ .ಟೀಕಾಕಾರರ ಪ್ರಕಾರ ಒಬಾಮ ಅವರ ಯಾವ ಪ್ರಯತ್ನಗಳೂ ,ವಿದೇಶ ನೀತಿಯೂ ಸೇರಿದಂತೆ ,ಇನ್ನೂ ಫಲ ಕೊಡದ ಪ್ರಯತ್ನಗಳೂ ,ಅಭಿವೃದ್ದಿಯ ಹಂತದಲ್ಲಿರುವಾಗಲೇ ನೊಬೆಲ್ ಪುರಸ್ಕಾರ ಕೊಟ್ಟಿದ್ದು ಸರಿಯಲ್ಲ.
"ಇಂತಹ ಪ್ರಶಸ್ತಿ ಪಡೆಯುವುದಕ್ಕೂ ಮೊದಲು ಒಬಾಮ ಮಾಡಬೇಕಿದ್ದ ಕೆಲಸಗಳು ಬೇಕಾದಸ್ಟಿದ್ದವು"
"ಒಬಾಮ ಕೇವಲ ಭರವಸೆಗಳನ್ನು ನೀಡಿದ್ದಾರೆ ,ಬಹಳಷ್ಟು ಭರವಸೆಗಳು ಇನ್ನೂ ಈಡೇರಬೇಕಾಗಿದೆ"
"ವಿಶ್ವ ಶಾಂತಿಗೆ ಒಬಾಮ ಅವರ ಮಹತ್ವವಾದ ಕೊಡುಗೆಗಳು ಏನೂ ಇಲ್ಲ"

ಹೀಗೆ ಚಿಂತಕರಿಂದ ಹಲವಾರು ಅಭಿಪ್ರಾಯಗಳು ವ್ಯಕ್ತವಾಗಿವೆ. ಸ್ವತಹ:ಒಬಾಮ ಅವರೇ 'ಪ್ರಾಮಾಣಿಕವಾಗಿ ಹೇಳಬೇಕೆಂದರೆ ನೊಬೆಲ್ ಪ್ರಶಸ್ತಿಗೆ ನಾನು ಅರ್ಹನಲ್ಲ' ಶಾಂತಿಗಾಗಿ ಜೀವತೇದಿರುವ ಮಹಾನ್ ವ್ಯಕ್ತಿಗಳು ಮಾಡಿರುವಂತ ಯಾವ ಕೆಲಸಗಳನ್ನು ನಾನಿನ್ನು ಮಾಡಿಯೇ ಇಲ್ಲ' ಎಂದಿದ್ದಾರೆ. ಇಲ್ಲಿ ಒಂದು ವಿಷಯವನ್ನು ನಾವು ಸ್ಥೂಲವಾಗಿ ಗಮನಿಸಬಹುದು .ಏನೆಂದರೆ -ಪ್ರಪಂಚಕ್ಕೆ ಶಾಂತಿದೂತನಾಗಿರುವ ನಮ್ಮ ದೇಶದ ಹೆಮ್ಮೆ ಮಹಾತ್ಮ ಗಾಂಧಿ ಅವರಿಗೇ ಈ ನೊಬೆಲ್ ಪ್ರಶಸ್ತಿ ದೊರಕಲಿಲ್ಲ ಎಂಬುದು .ಅವರ ಶಾಂತಿಮಂತ್ರವನ್ನೂ ,ಅಹಿಂಸಾ ತತ್ವವನ್ನೂ
ಪ್ರಪಂಚದ ಜನರು ಮರೆಯಲು ಸಾಧ್ಯವೇ?
ಹಲವರಂತೂ ಈ ನೊಬೆಲ್ ಪ್ರಶಸ್ತಿಯನ್ನು ಒಬಾಮರವರು ವಾಪಸ್ಸು ಮಾಡಿದ್ದರೆ ಅವರಿಗೆ ಹೆಚ್ಹಿನ ಗೌರವ ಬರುತ್ತಿತ್ತು ಎನ್ನುತ್ತಿದ್ದಾರೆ.
ಮಾನವತೆಯ ಅಭಿವೃದ್ಧಿಗೆ ಒಬಾಮ ಅವರ ಕೊಡುಗೆ ಇನ್ನೂ ಅತ್ಯಲ್ಪವಾದ್ದರಿಂದ ಅವರು ನೊಬೆಲ್ ಪುರಸ್ಕಾರಕ್ಕೆ ಆಯ್ಕೆಯಾಗುವಂತಹ ವ್ಯಕ್ತಿಯಾಗಿರಲಿಲ್ಲ ಎಂದು ಹಲವರ ಅಂಬೋಣ .
ಒಬಾಮ ಅವರಿಗೆ ನೊಬೆಲ್ ಶಾಂತಿಪುರಸ್ಕಾರ ಪ್ರಶಸ್ತಿ ದೊರೆತಿರುವುದು ಪ್ರಪಂಚದಾದ್ಯಂತ ಜನರನ್ನು ಸಖೇದಾಶ್ಚರ್ಯ ಗಳಿಂದ ಮುಳುಗಿಸಿದೆ.
ನೊಬೆಲ್ ಫೌಂಡೇಶನ್ ಈ ನೊಬೆಲ್ ಪ್ರಶಸ್ತಿಗಳ ಆಯ್ಕೆಯನ್ನು ಈಗಾಗಲೇ ಸಮರ್ಥಿಸಿಕೊಂಡಿದೆ.

ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ನಾನು ನನ್ನ ಅಭಿಪ್ರಾಯವನ್ನು ತಿಳಿಸಲು ಇಚ್ಚಿಸುತ್ತೇನೆ .ಒಬಾಮ ಅವರ ಈವರೆಗಿನ ಸಾಧನೆಗಳನ್ನು ಗಮನಿಸಿದರೆ ,ಅವರು ಒಬ್ಬ ಉತ್ತಮ ಮತ್ಸದ್ದಿ ,ನಾಯಕ ಎನಿಸಿದರೂ ನೊಬೆಲ್ ಪ್ರಶಸ್ತಿಗೆ ಅರ್ಹವಾಗುವಂತಹ ಸಾಧನೆಯನ್ನೇನೂ ಅವರು ಮಾಡಿಲ್ಲ ಎಂದೇ ಹೇಳಬೇಕಾಗುತ್ತದೆ .ಅವರಿಗೆ ದೊರೆತಿರುವ ಈ ಪುರಸ್ಕಾರಕ್ಕೆ ಅವರ ಸಾಧನೆಯೇನು ಎಂದು ಅಚ್ಚರಿ ಮೂಡುತ್ತದೆ.
ಬರಾಕ್ ಒಬಾಮ ಅವರಿಗೆ ಸಂದಿರುವ ,ನೊಬೆಲ್ ಪಾರಿತೋಷಕದ ಅಷ್ಟೂ ಹಣವನ್ನು ದಾನಕ್ಕೆ ಬಳಸುವುದಾಗಿ ಒಬಾಮ ಘೋಶಿಸಿದ್ದಾರಂತೆ .
ಅಷ್ಟರಮಟ್ಟಿಗೆ ಅವರ ನಿಲುವನ್ನು ಮೆಚ್ಚಲೇಬೇಕು .

ಹೀಗೊಂದು ಚುಟುಕು :
ಕೀನ್ಯಾ ಕುಟುಂಬದಲ್ಲೀಗ ಸಂಭ್ರಮವೋ , ಸಂಭ್ರಮ .
ಇಷ್ಟು ಬೇಗ ನೊಬೆಲ್ ಪ್ರಶಸ್ತಿ ಗಿಟ್ಟಿಸಿಬಿಟ್ಟ ನಮ್ಮ ಒಬಾಮ,
ಪ್ರಾಮಾಣಿಕವಾಗಿ ಹೇಳುವದಾದರೆ ಈ ಪ್ರಶಸ್ತಿಗೆ ನಾನು ಅರ್ಹನಲ್ಲ !
ಮಹಾನ್ ವ್ಯಕ್ತಿಗಳು ಮಾಡಿರುವಂತಹ ಸಾಧನೆಯನ್ನೇನು ನಾನು ಮಾಡಿಲ್ಲ .
*
ದಿನದ ಸ್ಪಂದನ:
ಒಂಟೆಯು ನೀರು ಆಹಾರವಿಲ್ಲದೆ ಹಲವು ದಿನಗಳ ಕಾಲ ಬದುಕಿರಬಲ್ಲುದು. ಸತತವಾಗಿ ೧೮ ಗಂಟೆಗಳ ಕಾಲ ನಡೆಯುವ ಸಾಮರ್ಥ್ಯವನ್ನುಹೊಂದಿರುವ ಈ ಪ್ರಾಣಿಯು ಒಂದು ದಿನದಲ್ಲಿ ೨೦೦ ಕಿ.ಗ್ರಾಂ.ನಸ್ಟು ಹೊರೆ ಹೊತ್ತು ೧೧೦ ಕಿ.ಮೀ ವರೆಗೆ ಪ್ರಯಾಣಿಸಬಲ್ಲುದು.ಮರಳುಗಾಡಿನಲ್ಲಿ ಈ ಪ್ರಾಣಿಯಉಪಯೋಗ ಬಹಳ.
*ಬ್ಲಾಗ್ ಮಿತ್ರರೇ ನನ್ನ ಹಿಂದಿನ ಬ್ಲಾಗ್ ಗಳಿಗೆ ನಿಮ್ಮ ಅಭಿಪ್ರಾಯಕ್ಕಾಗಿ ವಂದನೆಗಳು.ನಿಮ್ಮ ಅಭಿಪ್ರಾಯಗಳನ್ನು ನನ್ನೆಲ್ಲಾ ಬ್ಲಾಗ್ ಅನಿಸಿಕೆಗಳಿಗೂ ಕಾಯುತ್ತಿರುತ್ತೀನೆ.ಪೋಸ್ಟ್ ಮಾಡಿ.



ಓಂ ಶಾಂತಿ:, ಓಂ ಶಾಂತಿ:

ಶುಕ್ರವಾರ, ಅಕ್ಟೋಬರ್ 9, 2009

ಮಳೆಯ ಹಾವಳಿಯೂ ,ಮಂತ್ರಾಲಯವೂ........

ಶನಿವಾರ -ಸಪ್ತಮಿ. ದಿನಾಂಕ : ೧೦-೧೦-೨೦೦೯.
ಇತ್ತೀಚೆಗೆ ಸುರಿದ ಕುಂಭದ್ರೋಣ ಮಳೆಯಿಂದ ಇಡೀ ಮಂತ್ರಾಲಯ ಕ್ಷೇತ್ರ ಜಲಾವ್ರುತವಾಗಿ ತುಂಗಭದ್ರೆಯ ಮಹಾಪೂರಕ್ಕೆ ಸಿಲುಕಿ ನಲುಗಿದ್ದು ಈಗ ಸಹಜ ಸ್ಥಿತಿಗೆ ಮರಳುತ್ತಿದೆ .
ಮಂತ್ರಾಲಯ ಎಂದರೆ ಶ್ರೀ. ಗುರುರಾಯರ ಸನ್ನಿಧಿ ಹಾಗೂ ಶ್ರೀ.ರಾಘವೇಂದ್ರ ಸ್ವಾಮಿ ಮಠ ತಾನೆ?
ಹಾಲಿ ಮಂತ್ರಾಲಯದ ಶ್ರೀ.ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ.ಸುಯತೀಂದ್ರ ತೀರ್ಥರು ಇದೇ ಮಂತ್ರಾಲಯ ಮಳೆಯ ಅಬ್ಬರದಿಂದ ಮಹಾಪೂರಕ್ಕೆ ಸಿಲುಕಿದ್ದಾಗ ತಾವು ಮಾತ್ರ ತಮ್ಮ ಕೆಲವೇ ಕೆಲವು ಆಪ್ತರೊಂದಿಗೆ [ಸಂಸದೆ ಜೆ.ಶಾಂತಾ ,ಅನಂತಕುಮಾರ ಅವರ ಆಪ್ತ ಸಹಾಯಕ ಸುಬ್ಬಣ್ಣ ಸೇರಿ ] ಮಠವನ್ನೂ ,ರಾಯರ ಬೃಂದಾವನವನ್ನು ತೊರೆದು ಸೇನಾಪಡೆ ಹೆಲಿಕಾಪ್ಟರ್ ನಲ್ಲಿ ರಾಯಚೂರಿಗೆ ತೆರಳಿ ಅಲ್ಲಿಯ ಜವಹರನಗರ ಶ್ರೀ.ಮಠದಲ್ಲಿ ತಂಗಿದ್ದು ಅನೇಕ ಭಕ್ತರಿಗೆ ಅಸಾಮಾಧಾನ ವಾಗಿದ್ದು ಸುಳ್ಳಲ್ಲ .ಕಾರಣ ಏನೇ ನೀಡಬಹುದು ,ಅಥವಾ ಏನೇ ಸಮಜಾಯಿಷಿ ನೀಡಬಹುದು ,ಶ್ರೀಗಳು ಮಠವನ್ನು ಬಿಟ್ಟು ತೆರಳಿದ್ದು ಸಮಂಜಸವಲ್ಲವೆಂದೇ ಹಲವರ ಅಂಬೋಣ .ಮಂತ್ರಾಲಯದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು ,ತುಂಗಾನದಿಯ ಪ್ರವಾಹ ಭಯಾನಕವಾಗಿದೆ,ಭಕ್ತರು ಬೆಚಿಬಿದ್ದಿದ್ದಾರೆ ,ಪ್ರಯಾಣಿಕರು ಜಲಬಂಧನಕ್ಕೆ ಒಳಗಾಗಿದ್ದಾರೆ , 'ಇವರನ್ನು ಆ ರಾಯರೇ ಕಾಪಾಡಬೇಕು ' ಎಂದು ಕೈ ಚೆಲ್ಲಿದ ಶ್ರೀಗಳು ,ತಾವು ಮಂತ್ರಾಲಯದಲ್ಲಿಯೇ ಉಳಿದು ಅಲ್ಲಿದ್ದವರನ್ನೂ,ಭಕ್ತರನ್ನೂ ,ಅವರ ಉಳಿವಿಗಾಗಿ ದೇವರನ್ನು ಪ್ರಾರ್ಥಿಸಿದ್ದರೆ ಚಲೋ ಇತ್ತು ಎಂಬುದು ಹಲವು ಮಂದಿಯ ಅಭಿಪ್ರಾಯ.
ಪರಿಹಾರಕಾರ್ಯಕ್ಕೆ ನೆರವಿನ ಮಹಾಪೂರ .
ಮಳೆಯ ಅಬ್ಬರ ಹಾಗು ಪ್ರವಾಹದಿಂದ ಮನೆ ಮಠ ಕಳೆದುಕೊಂಡು ಬೀದಿ ಪಾಲಾಗಿರುವ ಲಕ್ಷಾಂತರ ಮಂದಿಗೆ ರಾಜ್ಯದೆಲ್ಲೆಡೆಯಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆಯಂತೆ.ಪರಿಹಾರಕಾರ್ಯದಲ್ಲಿ ಸರ್ಕಾರದ ಜೊತೆ ಕೈ ಜೋಡಿಸಲು ಸಂಘ ,ಸಂಸ್ಥೆಗಳು ಉದ್ಯಮಿಗಳೂ ,ವೈದ್ಯರು ,ಶಿಕ್ಷಣ ಸಂಸ್ಥೆಗಳು ,ಸರಕಾರೀ ನೌಕರರು ,ಖಾಸಗೀ ನೌಕರರು ,ಸಣ್ಣಪುಟ್ಟ ವ್ಯಾಪಾರಸ್ತರು ,ಚಿಲ್ಲರೆ ವ್ಯಾಪಾರಿಗಳು ಅಲ್ಲದೆ ಮಠಾಧೀಶರು ಸೇರಿದಂತೆ ಎಲ್ಲ ವರ್ಗದ ಜನರೂ ಮುಂದಾಗಿದ್ದಾರೆ.ರಾಜ್ಯದ ಜನತೆ ಸಂಕಷ್ಟದಲ್ಲಿ ಕೈ ಚೆಲ್ಲದೇ, ಕೈ ಹಿಡಿದು ಮುನ್ನಡೆಸುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕೇಂದ್ರ ಸರ್ಕಾರವೂ ಪರಿಸ್ಥಿತಿಯ ಮನಗಂಡು ಹೆಚ್ಹಿನ ಸಹಾಯಹಸ್ತ ನೀಡುವ ಭರವಸೆ ನೀಡಿದೆ ಎಂದು ತಿಳಿದುಬಂದಿದೆ.

ಮಂತ್ರಾಲಯ ಎಂದರೆ ಬೆಚ್ಹಿ
ಬೀಳುವ ಹಾಗಾಗುತ್ತದೆ!
ವಿಜಯಕರ್ನಾಟಕ -ಶನಿವಾರ ,ಅಕ್ಟೋಬರ್ ೨೦೦೯ ಪತ್ರಿಕೆಯ ಪುಟ ೯-ವಿಕಾಸ ದಲ್ಲಿ ,ತುಂಗಭದ್ರೆಯ ಆರ್ಭಟದಿಂದ ಇಡೀ ಮಂತ್ರಾಲಯ ಜಲದಿಂದಾವ್ರುತವಾಗಿ ಅಲ್ಲಿದ್ದ ಜನತೆ ಹೇಗೆ ಸಂಕಟವನ್ನು ಅನುಭವಿಸಿದರು ಎಂಬ ಬಗ್ಗೆ ,ಅಲ್ಲಿಯೇ ಇದ್ದ ಪ್ರತ್ಯಕ್ಷ ದರ್ಶಿಯೊಬ್ಬರು ಮನ ಮುಟ್ಟುವಂತೆ ಹೇಳಿಕೊಂಡಿದ್ದಾರೆ .ಮಂತ್ರಾಲಯ ಎಂದರೆ ಮನಸ್ಸು ಬೆಚ್ಹಿ ಬೀಳುತ್ತದೆ !ಎಂದಿದ್ದಾರೆ.ಅವರ ಮತ್ತು ಅವರೊಂದಿಗಿದ್ದವರ ಸ್ವಾನುಭವವನ್ನು ಶ್ರೀನಿಧಿ ಹೆಗಡೆ ,ಬೆಂಗಳೂರು ಎಂಬುವವರು ಬರೆದಿದ್ದಾರೆ. ಖಂಡಿತಾ ಓದಿ.
ಆ ಲೇಖನದ ಒಂದು ತುಣುಕು,ನಿಮಗಾಗಿ.
' ರಾತ್ರಿ ೨ ಗಂಟೆಯ ಸಮಯ .ವಸತಿ ಗೃಹದ ಕಾವಲುಗಾರ ಬಂದು ನಮ್ಮನ್ನು ಎಬ್ಬಿಸಿ "ನೀರಿನ ಮಟ್ಟ ಏರುತ್ತಿದೆ " ಎಂದು ಎಚ್ಹರಿಸಿದ .ಮುಂದೇನು? ನಾವಿದ್ದ ವಸತಿ ಗೃಹಕ್ಕೆ ಮೇಲಿನ ಅಂತಸ್ತು ಇಲ್ಲ !ಇದರಿಂದಾಗಿ ನನ್ನ ತಂದೆ iಮತ್ತು ನಾನು ಅಲ್ಲಿ ಯಾವುದಾದರು ಎತ್ತರದ ಕಟ್ಟಡ ಇದೆಯಾ ಎಂದು ಹುಡುಕಿದಾಗ ನಮಗೆ ಕಂಡು ಬಂದಿದ್ದು ಕರ್ನಾಟಕ ಭವನದ ಎರಡನೇ ಅಂತಸ್ತು .ತಕ್ಷಣ ಕುಟುಂಬದ ಸದಸ್ಯರ ಜತೆಗಿದ್ದ ಇತರ ಕುಟುಂಬಗಳನ್ನು ಸೇರಿಸಿಕೊಂಡೆವು .ನಮ್ಮನ್ನು ಎಚ್ಹರಿಸಿದ ಕಾವಲುಗಾರನನ್ನು 'ನೀವು ಜತೆಯಲ್ಲಿ ಬಂದುಬಿಡಿ ನೀರು ಏರುತ್ತಿದೆ ' ಎಂದಾಗ, ಆತ ' ಬೇಡ ನಾನು ಸ್ತಳೀಯ ,ಹೇಗೋ ಬಚಾವಾಗ್ತೇನೆ ,ನೀವು ಹೊರಡಿ ' ಎಂದ.ಎಲ್ಲರಿಗೂ ಸಮಾಧಾನದ ಮಂತ್ರ ಬ್ಹೊದಿಸುತ್ತಾ ಎದೆಯ ಮಟ್ಟದವರೆಗಿದ್ದ ರಭಸವಾದ ನೀರನ್ನು ದಾಟಿ ಎಲ್ಲರೂ ಕರ್ನಾಟಕ ಭವನಕ್ಕೆ ತೆರಳಿದೆವು.ಆಗ ಸ್ವಲ್ಪ ಜೀವ ಬಂದಂತಾಯಿತು ."
ಶ್ರೀನಿಧಿ ಹೆಗಡೆ ಯವರ ಆ ದಿನದ ಅನುಭವ ನಿಜಕ್ಕೂ ಬೆಚ್ಹಿ ಬೀಳಿಸುವಂತಿದೆ ಅಲ್ಲವೇ?


ದಿನದ ಸ್ಪಂದನ ..
'ಪ್ರಪಂಚದಲ್ಲಿಯೇ ಅತಿ ದೊಡ್ಡ ಸ್ಟೀಮ್ ಕುಕಿಂಗ್ ಸಿಸ್ಟಂ ಇರವುದು ಎಲ್ಲಿ ಎಂಬುದು ನಿಮಗೆ ಗೊತ್ತಾ?
ನಮ್ಮ ದೇಶದಲ್ಲಿಯೇ .ಆಂದ್ರದ ತಿರುಪತಿ ತಿರುಮಲ ದೇವಸ್ಥಾನದಲ್ಲಿ ! ಒಂದು ಸಲಕ್ಕೆ ಇದರಲ್ಲಿ 15oo ಮಂದಿಗೆ ಅಡುಗೆ ತಯಾರಿಸಬಹುದಂತೆ! ಒಹ್ .
ಪ್ರಕೃತಿ .

ಪ್ರಕೃತಿಯ ಮುಂದೆ
ಸಮನಾರು ಹೇಳು?
ಮಠ ವಾದರೇನು?
ಮಂದಿ ಯಾದರೇನು?
ಮಂತ್ರಾಲಯ ವಾದರೇನು ?
ಅಬ್ಬರದ ಮಳೆಯಿಂದ-

ಜಲಾವ್ರುತಆಗುವುದಿಲ್ಲವೇ ಹೇಳು ?
ಪ್ರಕೃತಿಯ ಮುಂದೆ ,
ಎಲ್ಲಾ ಸಮ ನೀ ಕೇಳು!
------ ಓಂ -----



ಗುರುವಾರ, ಅಕ್ಟೋಬರ್ 8, 2009

ಕೇಂದ್ರದ ಮಲತಾಯಿ ಧೋರಣೆ........

_ ೩ _ ಶುಕ್ರವಾರ ,ಪಂಚಮಿ - ದಿನಾಂಕ :೦೯-೧೦ -೨೦೦೯

ಇತ್ತೀಚಿನ ವರ್ಷಗಳಲ್ಲಿ ಕಂಡು ಕೇಳರಿಯದ ಮಳೆಯ ರುದ್ರ ನರ್ತನದಿಂದ ಕರ್ನಾಟಕ ರಾಜ್ಯದ ಉತ್ತರದ
ಬಹುತೇಕ ಜಿಲ್ಲೆಗಳಲ್ಲಿ ಹಾಹಾಕಾರ ಉಂಟಾಗಿದ್ದು ಜನರ ಜೀವನ ಅಸ್ತ್ಯವ್ಯಸ್ತ ಗೊಂಡಿದೆ .ಸುಮಾರು ೧೮ ಜಿಲ್ಲೆಗಳಲ್ಲಿ ಈ ಮಳೆಯ
ವಿಕೋಪ ಕಂಡುಬಂದಿದ್ದು ನೂರಾರು ಜನ ಮಳೆ ಮತ್ತು ಪ್ರವಾಹಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ .ಲಕ್ಷಾಂತರ ಜನ
ನಿರ್ವಸಿತರಾಗಿದ್ದಾರೆ .ಜನರ ಆಸ್ತಿ- ಪಾಸ್ತಿ ನಾಶವಾಗಿದೆ.ಬೆಳೆದು ನಿಂತಿದ್ದ ಅಪಾರ ಬೆಳೆಗೆ ಹಾನಿಯಾಗಿದೆ .ಈ ನೈಸರ್ಗಿಕ ವಿಪತ್ತಿನಿಂದ ಅಲ್ಲಿಯ ಜನತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ .
ಇಂತಹ ಸಮಯದಲ್ಲಿ ಸಂತ್ರಸ್ತರ ನೆರವಿಗೆ ಧಾವಿಸುವುದು ರಾಜ್ಯಸರ್ಕಾರದ ,ಹಾಗು ಕೇಂದ್ರ ಸರ್ಕಾರದ ಆದ್ಯ
ಹಾಗು ತುರ್ತು ಕರ್ತವ್ಯ.ನಮ್ಮ ರಾಜ್ಯ ಸರ್ಕಾರ ಇತ್ತ ವಿಶೇಷ ಗಮನ ಹರಿಸಿದ್ದು ರಾಜ್ಯದ ಜನತೆಯ ಸಹಕಾರದೊಂದಿಗೆ
ಸಮರೋಪಾದಿಯಲ್ಲಿ ಪರಿಹಾರಕಾರ್ಯ ಕೈಗೊಂಡಿದೆ.
ಪಕ್ಕದ ರಾಜ್ಯ ಆಂದ್ರಪ್ರದೆಶವೂ ಹಿಂದೆಂದೂ ಕಾಣದ ಭಾರಿ ಮಳೆ ಮತ್ತು ಪ್ರವಾಹದಿಂದ ನಲುಗಿದೆ.ಆದರೆ
ಕರ್ನಾಟಕ ರಾಜ್ಯದಲ್ಲಿ ಆಗಿರುವಷ್ಟು ಹಾನಿ ಆಂದ್ರಪ್ರದೇಶ ದಲ್ಲಿ ಸಂಭವಿಸಿಲ್ಲ.ಆಂದ್ರಪ್ರದೇಶದಲ್ಲಿ ಮಳೆಯ ಅಬ್ಬರ ಶುರುವಾಗಿದ್ದು
ಕರ್ನಾಟಕದಲ್ಲಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ವರುಣನ ಆರ್ಭಟಕ್ಕೆ ಸಿಲುಕಿ ನಲುಗಿದ ನಂತರವೇ.
ಆಂಧ್ರಪ್ರದೇಶ ದಲ್ಲಿ ಮಳೆಯ ರುದ್ರ ನರ್ತನ ಶುರುವಾದ ನಂತರವಷ್ಟೇ ಕೇಂದ್ರ ಸರ್ಕಾರ ತನ್ನ ಕಣ್ಣು
ತೆರೆದಿದ್ದು .ಎಂದಿನಂತೆಯೇ ನಮ್ಮ ರಾಜ್ಯಕ್ಕೆ ಕೇಂದ್ರದಿಂದ ಕೊಡಮಾಡುವ ಪರಿಹಾರದ ವಿಚಾರದಲ್ಲಿ ತಾರತಮ್ಯ ಧೋರಣೆ ತಳೆದಿದೆ .ಪ್ರಕೃತಿ ಪ್ರಕೋಪ ಪರಿಹಾರ ನಿಧಿಯಿಂದ ೧೦ ಸಾವಿರ ಕೋಟಿ ರೂಗಳನ್ನು ನಮ್ಮ ರಾಜ್ಯಕ್ಕೆ ಒದಗಿಸುವಂತೆ ಕೇಂದ್ರವನ್ನು
ಕೋರಿದ್ದರೂ, ರಾಜ್ಯಕ್ಕೆ ಪರಿಹಾರ ಒದಗಿಸುವ ಧೋರಣೆಯಿಂದ ಬಹಳ ಕಡಿಮೆ ಪರಿಹಾರ ಕೊಟ್ಟು ಅದೇ ಆಂದ್ರಪ್ರದೇಶಕ್ಕೆ,

ನಮ್ಮ ರಾಜ್ಯಕ್ಕೆ ಕೊಡಮಾಡಿರುವ ಪರಿಹಾರದ ೩ ಪಟ್ಟು ಹಣವನ್ನು ಉದಾರವಾಗಿ ಪರಿಹಾರ ಪ್ರಕಟಿಸಿದೆ.ಕೇಂದ್ರದಿಂದ ರಾಜ್ಯಕ್ಕೆ
ಪಕ್ಷ ಪಾತ ವಾಗುತ್ತಿರುವುದು ಇದೆ ಮೊದಲೇನಲ್ಲ .ಬರ ಪರಿಹಾರ ನಿಧಿಯ ವಿಚಾರದಲ್ಲಿ ಇರಬಹುದು ,ಕಾವೇರಿ ನೀರಿನ ಹಂಚಿಕೆಯ ವಿಷಯದಲ್ಲಿರಬಹುದು,ಕೇಂದ್ರ ಕೈಗಾರಿಕೆಗಳ ಸ್ಥಾಪನೆಯ ವಿಚಾರವಾಗಿರಬಹುದು ,ರೈಲ್ವೆಬಡ್ಜೆಟ್ನಲ್ಲಿ ಅನುದಾನದ ವಿಷಯವೇ
ಆಗಿರಬಹುದು ,ರೈಲ್ವೆ ಮಾರ್ಗಗಳನ್ನು ಮಂಜೂರು ಮಾಡುವ ,ಅಥವಾ ಇನ್ನಾವುದೇ ಕೇಂದ್ರದ ಅನುದಾನದ ವಿಷಯವೇ ಆದರು
ಕರ್ನಾಟಕಕ್ಕೇ ಅನ್ಯಾಯ ಶತಸ್ಸಿದ್ದ .
ರಾಜ್ಯದ ಹಿತ ಕಾಯುವ ವಿಚಾರ ಬಂದಾಗ ಕ್ಶುಲ್ಲಕ ರಾಜಕಾರಣ ಮಾಡುವ ಪ್ರತಿಪಕ್ಷಗಳು ರಾಜ್ಯದ ಹಿತವನ್ನು ಬಲಿಕೊಡುತ್ತಾರೆ .
ಇಷ್ಟು ಕೇಂದ್ರದ ಮಲತಾಯಿ ಧೋರಣೆ ಬಗ್ಗೆ ಸಾಕು ಅಂತ ಕಾಣುತ್ತೆ.


ದಿನದ ಸ್ಪಂದನ
ಖ್ಯಾತ ಗಣಿತ ತಜ್ಞ ಆರ್ಯಭಟ್ಟ ನಮ್ಮವನೇ .ಆರ್ಯಭಟ್ಟ ೧೫೦೦ ವರ್ಷಗ್ಗಳ ಹಿಂದೆ ಉಜ್ಜಯಿನಿಯಲ್ಲಿನ
೨ನೆ ಚಂದ್ರಗುಪ್ತನ ಆಸ್ತಾನದಲ್ಲಿದ್ದನು.ಭೂಮಿಯು ಗುಂಡಗಿದೆ ಮತ್ತು ತನ್ನ ಕಕ್ಷೆಯಲ್ಲಿ ತಿರುಗುತ್ತದೆ ಎಂದು ಅವನು ಪ್ರತಿಪಾದಿಸಿದ್ದನು .

ಬರಬಾರದೇ ಮಳೆರಾಯ ಭುವಿಯ ತಣಿಸಲು
ಬರಿದಾದ ಕೆರೆ ಕಟ್ಟೆ ತುಂಬಿಸಲು
ನಮ್ಮ ಬಾಯಾರಿಕೆಯ ನೀಗಲು -
ಎಂಬ ದನಿಗೆ
ಉತ್ತರವೇನೋ ಎಂಬಂತೆ -
ಮಳೆರಾಯ ಬಂದೇ ಬಂದ . ಆದರೆ
ಒಬ್ಬನೇ ಬರಲಿಲ್ಲ
ಜವರಾಯನ ಜೊತೆಯಲ್ಲಿ ಬಂದ
ಸಾವು ನೋವುಗಳ ತಂದ!
ನಿಷ್ಕರುಣೆಯಿಂದ.
[
ಉತ್ತರ ಕರ್ನಾಟಕ ದ ಮಳೆಯ ಅಬ್ಬರವ ಕುರಿತು ]

ಬುಧವಾರ, ಅಕ್ಟೋಬರ್ 7, 2009

ನಮ್ಮದು ಸಂಪತ್ಬರಿತ ರಾಷ್ಟ್ರ..... ಆದರೆ?

_ ೨ _
ನಮ್ಮ ಭಾರತ ಖಂಡ ಒಂದು ಸಂಪತ್ಭರಿತ ರಾಷ್ಟ್ರ.ಪ್ರಾಕೃತಿಕ ಸಂಪತ್ತು ಹೇರಳವಾಗಿದೆ . ಅತುಲ ಖನಿಜ ಸಂಪತ್ತಿದೆ.ಜಲ ಸಂಪತ್ತೂ ಸಾಕಷ್ಟಿದೆ. ಜನ ಸಂಖ್ಯೆ ಯನ್ನು ಒಂದು ಸಂಪತ್ತು ಎಂದು ಪರಿಗಣಿಸುವುದಾದರೆ ಅಗತ್ಯಕ್ಕಿಂತ ಹೆಚ್ಚಾಗಿ
ಜನ ಸಂಪತ್ತು ಇದೆ. ಪ್ರಪಂಚಕ್ಕೆ ಮಾದರಿಯಾಗಿರುವ ಸಾಂಸ್ಕೃತಿಕ ಸಂಪತ್ತಿದೆ.ಪ್ರಪಂಚದಲ್ಲಿಯೇ ಅತಿ ಬುದ್ಧಿವಂತ ಜನರನ್ನು
ಹೊಂದಿರುವ ದೇಶವೆಂಬ ಖ್ಯಾತಿಯಿದೆ.ಆದರೂ ನಮ್ಮ ದೇಶ ಇನ್ನೂ ಸಾಕಷ್ಟು ಆಭಿವೃದ್ಧಿ ಕಂಡಿಲ್ಲ .ದೇಶದಲ್ಲಿ ಬಡತನ ,ನಿರುದ್ಯೋಗ ,ರೋಗ ,ರುಜಿನ ತಾಂಡವವಾಡುತ್ತಿವೆ .
ನಾವು ಎಲ್ಲಿ ಎಡವಿದ್ದೇವೆ ? ನಮ್ಮ ಅಭಿವ್ರುದ್ಹಿಗೆ ಅಡ್ಡ ಗಾಲಾಗಿರುವುದು ಯಾವುದು?ಅಡ್ಡಗಾಲಾಗಿರುವವರು ಯಾರು ?ಯಾವ ಶಕ್ತಿ
ನಮ್ಮ ಅಭಿವೃದ್ಧಿಯನ್ನು ಸಹಿಸಿಕೊಳ್ಳುತ್ತಿಲ್ಲ ? ಹಾಗೆ ತಡೆಯುವುದರಿಂದ ಆ ಶಕ್ತಿಗೆ ಆಗುವ ಪ್ರಯೋಜನವಾದರೂ ಏನು ?
ಪಾಕಿಸ್ತಾನ ಹಾಗು ಚೀನಾ ನಮ್ಮ ದೇಶಕ್ಕೆ ಮಗ್ಗುಲ ಮುಳ್ಳುಗಲಾಗಿವೆ .ನಮ್ಮ ಕೇಂದ್ರ ಸರಕಾರ ಈ ಎರಡೂ ದೇಶಗಳ ಕಿರುಕುಳವನ್ನು ಸಹಿಸಿಕೊಳ್ಳುತ್ತಲೇ ಬಂದಿರುವುದು ದುರದೃಸ್ಟಕರ .
ಕಾಶ್ಮೀರದ ವಿಷಯದಲ್ಲಿ ನಮಗೆ ಆ ಜನ್ಮ ಶತ್ರುವಿನಂತೆ ವರ್ತಿಸುತ್ತಿದೆ ಪಾಕಿಸ್ತಾನ.ಭಯೋತ್ಪಾದಕರನ್ನು ನಮ್ಮ ದೇಶದೊಳಗೆ ಕಳುಹಿಸುತ್ತಾ, ಆಗಾಗ ವಿದ್ವಂಸಕ ಕೃತ್ಯಗಳನ್ನು ಪ್ರಾಯೋಜಿಸುತ್ತಾ ,ಆರಾಜಕತೆಯನ್ನುಂಟು ಮಾಡುತ್ತಾ ನಮ್ಮ ದೇಶಕ್ಕೆ
ನಿವಾರಣೆಯಾಗದ ಸಮಸ್ಯೆಗಳನ್ನೂ ತಂದೊಡುತ್ತಿದೆ .
ಇನ್ನು ಚೀನಾ ಇತ್ತೀಚಿನ ದಿನಗಳಲ್ಲಿ ಗಡಿ ರೇಖೆಯ ವಿಷಯದಲ್ಲಿ ನಮ್ಮ ದೊಡ್ಡಣ್ಣನಂತೆ ವರ್ತಿಸುತ್ತಿದೆ .
ಈ ಯಾವುದೇ ವಿಷಯ ನಿಮಗೆ ಹೊಸದಲ್ಲ .ಆದರೂ ........

ದಿನದ ಸ್ಪಂದನ .
"ಮನಸ್ಸು ಎರಡೂ ಕಡೆ ಹರಿತ ಇರುವ ಅಲಗಿನ ಆಯುಧ.ಅದನ್ನು
ವಿವೇಕಯುತವಾಗಿ ಬಳಸುವುದೇ ಜಾಣತನ"
*ಸ್ವಾಮಿ ನಿರ್ಮಲಾನಂದ .
































_ ೨ _

ಸೋಮವಾರ, ಅಕ್ಟೋಬರ್ 5, 2009

ನನ್ನ ಹೊಸ ಬ್ಲಾಗ್ ಗೆಳೆಯರಿಗೆ ನಮಸ್ಕಾರ

ಜನನಿ ಹಾಗು ಜನ್ಮಭೂಮಿಗೆ ವಂದಿಸಿ ನನ್ನ ಈ ಬ್ಲಾಗ್ ಗೆ ಅಡಿಯಿರಿಸುತ್ತಿದ್ದೇನೆ .ಬ್ಲಾಗ್ ಗೆಳೆಯರೇ ನನಗೆ ಶುಭಾಷಯ
ಕೋರುತ್ತೀರಾ ತಾನೆ ?
ದಿನ ನಿತ್ಯ ನಾನು ಪತ್ರಿಕೆ ಓದಿದಾಗ , ದೂರದರ್ಶನದಲ್ಲಿ ವಾರ್ತೆಗಳನ್ನು ಹಾಗು ಇತರೆ ಸುದ್ದಿಗಳನ್ನು ಕೇಳಿದಾಗ ಕೆಲವು
ವಿಷಯಗಳ ಬಗ್ಗೆ ಗೊಂದಲ ಉಂಟಾಗುತ್ತದೆ. ಮುಖ್ಯವಾಗಿ ರಾಜಕಾರಣಿಗಳ ಗೊಸುಂಬೆತನದ ಬಗ್ಗೆ , ರಾಜ್ಯದ,ದೇಶದ ಬಗ್ಗೆ
ಅವರಿಗಿರುವ ನಿಷ್ಕಾಳಜಿಯ ಬಗ್ಗೆ ಬೇಸರ ಉಂಟಾಗುತ್ತದೆ .ಇತ್ತೀಚಿನ ಕೆಲವು ಘಟನೆಗಳು ಹಾಗು ಬೆಳವಣಿಗೆಗಳು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಮಾರಕವಾಗಿರುವುದು ಒಂದು ಅಪಾಯಕಾರಿ ಬೆಳವಣಿಗೆ ಎಂದು ನಿಮಗೆ ಅನಿಸುವುದಿಲ್ಲವೇ ?ದೇಶದ ಬಗ್ಗೆ ಕಾಳಜಿ ಯುಳ್ಳ ಯಾರಿಗಾದರೂ ಆತಂಕ ವಾಗುವುದು ಸಹಜ .ಆದರೆ ಜನಸಾಮಾನ್ಯರು ಏನು ಮಾಡಲೂ ಸಾಧ್ಯವಾಗದೆ ಅಸಹಾಯಕರಾಗಿದ್ದಾರೆ .ಇದು ಸತ್ಯ ತಾನೆ? ಉನ್ನತ ಸ್ಥಾನಗಳಲ್ಲಿರುವ ವ್ಯಕ್ತಿಗಳೇ ಮೌಲ್ಯಗಳಿಗೆ ತಿಲಾಂಜಲಿನೀಡಿ ಕೇವಲ ಸ್ವಾರ್ಥ ಸಾದನೆಗೊಸ್ಕರ ದೇಶದ ನೈತಿಕ ಪ್ರಭುದ್ದತ್ಹೆಯನ್ನು ಅಡವಿಟ್ಟು ಹುಂಬ ರಾಗುತ್ತಿರುವುದು ಏನನ್ನು ಸೂಚಿಸುತ್ತದೆ ?ದುರದೃಷ್ಟಕರ ಸಂಗತಿಯೆಂದರೆ ನಮ್ಮ ನ್ಯಾಯಾನ್ಗದಲ್ಲಿಯೂ ನೈತಿಕ ಬಿಕ್ಕಟ್ಟು ತಲೆದೋರಿರುವುದು ನಮ್ಮ ಅಧಃಪತನಕ್ಕೆ ಸಾಕ್ಷಿ . ಇಂತಹ ಅನೇಕ ವಿಷಯಗಳನ್ನು ಸಮನಸ್ಕರೊಂದಿಗೆ ಹಂಚಿ ಕೊಳ್ಳೋಣ ವೆನಿಸಿದ್ದು ನಿಜ.ಯಾವುದು ಸರಿ ? ಯಾವುದು ತಪ್ಪು? ಹೆಸರು ಗಳಿಸಬೇಕೆಂಬ ಉತ್ಕಟ ಆಸೆ ಯಿರದಿದ್ದರೂ ,ಕಥೆ ,ಕವನ ,ಲೇಖನ ಹಾಗು ಹಾಡುಗಳನ್ನು ಬರೆಯಬೇಕೆಂಬ ಆಸೆ ಯಿತ್ತು .ಆ ದಿನಗಳಲ್ಲಿ ನಾನು ಹೆಚ್ಹಾಗಿ ಕನ್ನಡ ಕಾದಂಬರಿಗಳನ್ನು ಓದುತ್ತಿದ್ದೆ .ಎಚ್ .ಏನ್ ನರಸಿಂಹಯ್ಯ ,ರಾಮಮೂರ್ತಿ ,ಮಾ.ಭಿ.ಶೇಷಗಿರಿ ರಾವ್ ,ಅ .ನ .ಕೃಷ್ಣರಾವ್ , ತ.ರಾ ಸು. ರಾವಬಹಾದ್ದೂರ ಇವರುಗಳ ಕಾದಂಬರಿಗಳನ್ನು ಓದುತ್ತಿದ್ದೆ .ನನಗೂ ಬರಹಗಾರನಾಗಬೇಕೆಂಬ ಹುಚ್ಹು ಇತ್ತೆಂದು ಆಗಲೇ ಹೇಳಿದ್ದೇನೆ ಅಲ್ಲವೇ?
ಮತ್ತೆ ಭೇಟಿಯಾಗೋಣ . ವಂದನೆಗಳು.
ದಿನದ ಸ್ಪಂದನ - ಸಂಪೂರ್ಣ ಸ್ವಾಸ್ಥ್ಯಕ್ಕಾಗಿ ಸಾತ್ವಿಕ ಆಹಾರ .
ಬೇಲೂರು ದ.ಶಂ.ಪ್ರಕಾಶ [ದಬ್ಬೆ ಶಂಕರ ನಾರಾಯಣ
ಭಟ್ಟ ಪ್ರಕಾಶ್ ]

ಮೊದಲ ಪ್ರಯತ್ನ

ನನ್ನ ಮೊದಲ ಪತ್ರ

--
ಪ್ರಕಾಶ್