ಗುರುವಾರ, ಅಕ್ಟೋಬರ್ 8, 2009

ಕೇಂದ್ರದ ಮಲತಾಯಿ ಧೋರಣೆ........

_ ೩ _ ಶುಕ್ರವಾರ ,ಪಂಚಮಿ - ದಿನಾಂಕ :೦೯-೧೦ -೨೦೦೯

ಇತ್ತೀಚಿನ ವರ್ಷಗಳಲ್ಲಿ ಕಂಡು ಕೇಳರಿಯದ ಮಳೆಯ ರುದ್ರ ನರ್ತನದಿಂದ ಕರ್ನಾಟಕ ರಾಜ್ಯದ ಉತ್ತರದ
ಬಹುತೇಕ ಜಿಲ್ಲೆಗಳಲ್ಲಿ ಹಾಹಾಕಾರ ಉಂಟಾಗಿದ್ದು ಜನರ ಜೀವನ ಅಸ್ತ್ಯವ್ಯಸ್ತ ಗೊಂಡಿದೆ .ಸುಮಾರು ೧೮ ಜಿಲ್ಲೆಗಳಲ್ಲಿ ಈ ಮಳೆಯ
ವಿಕೋಪ ಕಂಡುಬಂದಿದ್ದು ನೂರಾರು ಜನ ಮಳೆ ಮತ್ತು ಪ್ರವಾಹಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ .ಲಕ್ಷಾಂತರ ಜನ
ನಿರ್ವಸಿತರಾಗಿದ್ದಾರೆ .ಜನರ ಆಸ್ತಿ- ಪಾಸ್ತಿ ನಾಶವಾಗಿದೆ.ಬೆಳೆದು ನಿಂತಿದ್ದ ಅಪಾರ ಬೆಳೆಗೆ ಹಾನಿಯಾಗಿದೆ .ಈ ನೈಸರ್ಗಿಕ ವಿಪತ್ತಿನಿಂದ ಅಲ್ಲಿಯ ಜನತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ .
ಇಂತಹ ಸಮಯದಲ್ಲಿ ಸಂತ್ರಸ್ತರ ನೆರವಿಗೆ ಧಾವಿಸುವುದು ರಾಜ್ಯಸರ್ಕಾರದ ,ಹಾಗು ಕೇಂದ್ರ ಸರ್ಕಾರದ ಆದ್ಯ
ಹಾಗು ತುರ್ತು ಕರ್ತವ್ಯ.ನಮ್ಮ ರಾಜ್ಯ ಸರ್ಕಾರ ಇತ್ತ ವಿಶೇಷ ಗಮನ ಹರಿಸಿದ್ದು ರಾಜ್ಯದ ಜನತೆಯ ಸಹಕಾರದೊಂದಿಗೆ
ಸಮರೋಪಾದಿಯಲ್ಲಿ ಪರಿಹಾರಕಾರ್ಯ ಕೈಗೊಂಡಿದೆ.
ಪಕ್ಕದ ರಾಜ್ಯ ಆಂದ್ರಪ್ರದೆಶವೂ ಹಿಂದೆಂದೂ ಕಾಣದ ಭಾರಿ ಮಳೆ ಮತ್ತು ಪ್ರವಾಹದಿಂದ ನಲುಗಿದೆ.ಆದರೆ
ಕರ್ನಾಟಕ ರಾಜ್ಯದಲ್ಲಿ ಆಗಿರುವಷ್ಟು ಹಾನಿ ಆಂದ್ರಪ್ರದೇಶ ದಲ್ಲಿ ಸಂಭವಿಸಿಲ್ಲ.ಆಂದ್ರಪ್ರದೇಶದಲ್ಲಿ ಮಳೆಯ ಅಬ್ಬರ ಶುರುವಾಗಿದ್ದು
ಕರ್ನಾಟಕದಲ್ಲಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ವರುಣನ ಆರ್ಭಟಕ್ಕೆ ಸಿಲುಕಿ ನಲುಗಿದ ನಂತರವೇ.
ಆಂಧ್ರಪ್ರದೇಶ ದಲ್ಲಿ ಮಳೆಯ ರುದ್ರ ನರ್ತನ ಶುರುವಾದ ನಂತರವಷ್ಟೇ ಕೇಂದ್ರ ಸರ್ಕಾರ ತನ್ನ ಕಣ್ಣು
ತೆರೆದಿದ್ದು .ಎಂದಿನಂತೆಯೇ ನಮ್ಮ ರಾಜ್ಯಕ್ಕೆ ಕೇಂದ್ರದಿಂದ ಕೊಡಮಾಡುವ ಪರಿಹಾರದ ವಿಚಾರದಲ್ಲಿ ತಾರತಮ್ಯ ಧೋರಣೆ ತಳೆದಿದೆ .ಪ್ರಕೃತಿ ಪ್ರಕೋಪ ಪರಿಹಾರ ನಿಧಿಯಿಂದ ೧೦ ಸಾವಿರ ಕೋಟಿ ರೂಗಳನ್ನು ನಮ್ಮ ರಾಜ್ಯಕ್ಕೆ ಒದಗಿಸುವಂತೆ ಕೇಂದ್ರವನ್ನು
ಕೋರಿದ್ದರೂ, ರಾಜ್ಯಕ್ಕೆ ಪರಿಹಾರ ಒದಗಿಸುವ ಧೋರಣೆಯಿಂದ ಬಹಳ ಕಡಿಮೆ ಪರಿಹಾರ ಕೊಟ್ಟು ಅದೇ ಆಂದ್ರಪ್ರದೇಶಕ್ಕೆ,

ನಮ್ಮ ರಾಜ್ಯಕ್ಕೆ ಕೊಡಮಾಡಿರುವ ಪರಿಹಾರದ ೩ ಪಟ್ಟು ಹಣವನ್ನು ಉದಾರವಾಗಿ ಪರಿಹಾರ ಪ್ರಕಟಿಸಿದೆ.ಕೇಂದ್ರದಿಂದ ರಾಜ್ಯಕ್ಕೆ
ಪಕ್ಷ ಪಾತ ವಾಗುತ್ತಿರುವುದು ಇದೆ ಮೊದಲೇನಲ್ಲ .ಬರ ಪರಿಹಾರ ನಿಧಿಯ ವಿಚಾರದಲ್ಲಿ ಇರಬಹುದು ,ಕಾವೇರಿ ನೀರಿನ ಹಂಚಿಕೆಯ ವಿಷಯದಲ್ಲಿರಬಹುದು,ಕೇಂದ್ರ ಕೈಗಾರಿಕೆಗಳ ಸ್ಥಾಪನೆಯ ವಿಚಾರವಾಗಿರಬಹುದು ,ರೈಲ್ವೆಬಡ್ಜೆಟ್ನಲ್ಲಿ ಅನುದಾನದ ವಿಷಯವೇ
ಆಗಿರಬಹುದು ,ರೈಲ್ವೆ ಮಾರ್ಗಗಳನ್ನು ಮಂಜೂರು ಮಾಡುವ ,ಅಥವಾ ಇನ್ನಾವುದೇ ಕೇಂದ್ರದ ಅನುದಾನದ ವಿಷಯವೇ ಆದರು
ಕರ್ನಾಟಕಕ್ಕೇ ಅನ್ಯಾಯ ಶತಸ್ಸಿದ್ದ .
ರಾಜ್ಯದ ಹಿತ ಕಾಯುವ ವಿಚಾರ ಬಂದಾಗ ಕ್ಶುಲ್ಲಕ ರಾಜಕಾರಣ ಮಾಡುವ ಪ್ರತಿಪಕ್ಷಗಳು ರಾಜ್ಯದ ಹಿತವನ್ನು ಬಲಿಕೊಡುತ್ತಾರೆ .
ಇಷ್ಟು ಕೇಂದ್ರದ ಮಲತಾಯಿ ಧೋರಣೆ ಬಗ್ಗೆ ಸಾಕು ಅಂತ ಕಾಣುತ್ತೆ.


ದಿನದ ಸ್ಪಂದನ
ಖ್ಯಾತ ಗಣಿತ ತಜ್ಞ ಆರ್ಯಭಟ್ಟ ನಮ್ಮವನೇ .ಆರ್ಯಭಟ್ಟ ೧೫೦೦ ವರ್ಷಗ್ಗಳ ಹಿಂದೆ ಉಜ್ಜಯಿನಿಯಲ್ಲಿನ
೨ನೆ ಚಂದ್ರಗುಪ್ತನ ಆಸ್ತಾನದಲ್ಲಿದ್ದನು.ಭೂಮಿಯು ಗುಂಡಗಿದೆ ಮತ್ತು ತನ್ನ ಕಕ್ಷೆಯಲ್ಲಿ ತಿರುಗುತ್ತದೆ ಎಂದು ಅವನು ಪ್ರತಿಪಾದಿಸಿದ್ದನು .

ಬರಬಾರದೇ ಮಳೆರಾಯ ಭುವಿಯ ತಣಿಸಲು
ಬರಿದಾದ ಕೆರೆ ಕಟ್ಟೆ ತುಂಬಿಸಲು
ನಮ್ಮ ಬಾಯಾರಿಕೆಯ ನೀಗಲು -
ಎಂಬ ದನಿಗೆ
ಉತ್ತರವೇನೋ ಎಂಬಂತೆ -
ಮಳೆರಾಯ ಬಂದೇ ಬಂದ . ಆದರೆ
ಒಬ್ಬನೇ ಬರಲಿಲ್ಲ
ಜವರಾಯನ ಜೊತೆಯಲ್ಲಿ ಬಂದ
ಸಾವು ನೋವುಗಳ ತಂದ!
ನಿಷ್ಕರುಣೆಯಿಂದ.
[
ಉತ್ತರ ಕರ್ನಾಟಕ ದ ಮಳೆಯ ಅಬ್ಬರವ ಕುರಿತು ]

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ