ಶುಕ್ರವಾರ, ಅಕ್ಟೋಬರ್ 9, 2009

ಮಳೆಯ ಹಾವಳಿಯೂ ,ಮಂತ್ರಾಲಯವೂ........

ಶನಿವಾರ -ಸಪ್ತಮಿ. ದಿನಾಂಕ : ೧೦-೧೦-೨೦೦೯.
ಇತ್ತೀಚೆಗೆ ಸುರಿದ ಕುಂಭದ್ರೋಣ ಮಳೆಯಿಂದ ಇಡೀ ಮಂತ್ರಾಲಯ ಕ್ಷೇತ್ರ ಜಲಾವ್ರುತವಾಗಿ ತುಂಗಭದ್ರೆಯ ಮಹಾಪೂರಕ್ಕೆ ಸಿಲುಕಿ ನಲುಗಿದ್ದು ಈಗ ಸಹಜ ಸ್ಥಿತಿಗೆ ಮರಳುತ್ತಿದೆ .
ಮಂತ್ರಾಲಯ ಎಂದರೆ ಶ್ರೀ. ಗುರುರಾಯರ ಸನ್ನಿಧಿ ಹಾಗೂ ಶ್ರೀ.ರಾಘವೇಂದ್ರ ಸ್ವಾಮಿ ಮಠ ತಾನೆ?
ಹಾಲಿ ಮಂತ್ರಾಲಯದ ಶ್ರೀ.ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ.ಸುಯತೀಂದ್ರ ತೀರ್ಥರು ಇದೇ ಮಂತ್ರಾಲಯ ಮಳೆಯ ಅಬ್ಬರದಿಂದ ಮಹಾಪೂರಕ್ಕೆ ಸಿಲುಕಿದ್ದಾಗ ತಾವು ಮಾತ್ರ ತಮ್ಮ ಕೆಲವೇ ಕೆಲವು ಆಪ್ತರೊಂದಿಗೆ [ಸಂಸದೆ ಜೆ.ಶಾಂತಾ ,ಅನಂತಕುಮಾರ ಅವರ ಆಪ್ತ ಸಹಾಯಕ ಸುಬ್ಬಣ್ಣ ಸೇರಿ ] ಮಠವನ್ನೂ ,ರಾಯರ ಬೃಂದಾವನವನ್ನು ತೊರೆದು ಸೇನಾಪಡೆ ಹೆಲಿಕಾಪ್ಟರ್ ನಲ್ಲಿ ರಾಯಚೂರಿಗೆ ತೆರಳಿ ಅಲ್ಲಿಯ ಜವಹರನಗರ ಶ್ರೀ.ಮಠದಲ್ಲಿ ತಂಗಿದ್ದು ಅನೇಕ ಭಕ್ತರಿಗೆ ಅಸಾಮಾಧಾನ ವಾಗಿದ್ದು ಸುಳ್ಳಲ್ಲ .ಕಾರಣ ಏನೇ ನೀಡಬಹುದು ,ಅಥವಾ ಏನೇ ಸಮಜಾಯಿಷಿ ನೀಡಬಹುದು ,ಶ್ರೀಗಳು ಮಠವನ್ನು ಬಿಟ್ಟು ತೆರಳಿದ್ದು ಸಮಂಜಸವಲ್ಲವೆಂದೇ ಹಲವರ ಅಂಬೋಣ .ಮಂತ್ರಾಲಯದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು ,ತುಂಗಾನದಿಯ ಪ್ರವಾಹ ಭಯಾನಕವಾಗಿದೆ,ಭಕ್ತರು ಬೆಚಿಬಿದ್ದಿದ್ದಾರೆ ,ಪ್ರಯಾಣಿಕರು ಜಲಬಂಧನಕ್ಕೆ ಒಳಗಾಗಿದ್ದಾರೆ , 'ಇವರನ್ನು ಆ ರಾಯರೇ ಕಾಪಾಡಬೇಕು ' ಎಂದು ಕೈ ಚೆಲ್ಲಿದ ಶ್ರೀಗಳು ,ತಾವು ಮಂತ್ರಾಲಯದಲ್ಲಿಯೇ ಉಳಿದು ಅಲ್ಲಿದ್ದವರನ್ನೂ,ಭಕ್ತರನ್ನೂ ,ಅವರ ಉಳಿವಿಗಾಗಿ ದೇವರನ್ನು ಪ್ರಾರ್ಥಿಸಿದ್ದರೆ ಚಲೋ ಇತ್ತು ಎಂಬುದು ಹಲವು ಮಂದಿಯ ಅಭಿಪ್ರಾಯ.
ಪರಿಹಾರಕಾರ್ಯಕ್ಕೆ ನೆರವಿನ ಮಹಾಪೂರ .
ಮಳೆಯ ಅಬ್ಬರ ಹಾಗು ಪ್ರವಾಹದಿಂದ ಮನೆ ಮಠ ಕಳೆದುಕೊಂಡು ಬೀದಿ ಪಾಲಾಗಿರುವ ಲಕ್ಷಾಂತರ ಮಂದಿಗೆ ರಾಜ್ಯದೆಲ್ಲೆಡೆಯಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆಯಂತೆ.ಪರಿಹಾರಕಾರ್ಯದಲ್ಲಿ ಸರ್ಕಾರದ ಜೊತೆ ಕೈ ಜೋಡಿಸಲು ಸಂಘ ,ಸಂಸ್ಥೆಗಳು ಉದ್ಯಮಿಗಳೂ ,ವೈದ್ಯರು ,ಶಿಕ್ಷಣ ಸಂಸ್ಥೆಗಳು ,ಸರಕಾರೀ ನೌಕರರು ,ಖಾಸಗೀ ನೌಕರರು ,ಸಣ್ಣಪುಟ್ಟ ವ್ಯಾಪಾರಸ್ತರು ,ಚಿಲ್ಲರೆ ವ್ಯಾಪಾರಿಗಳು ಅಲ್ಲದೆ ಮಠಾಧೀಶರು ಸೇರಿದಂತೆ ಎಲ್ಲ ವರ್ಗದ ಜನರೂ ಮುಂದಾಗಿದ್ದಾರೆ.ರಾಜ್ಯದ ಜನತೆ ಸಂಕಷ್ಟದಲ್ಲಿ ಕೈ ಚೆಲ್ಲದೇ, ಕೈ ಹಿಡಿದು ಮುನ್ನಡೆಸುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕೇಂದ್ರ ಸರ್ಕಾರವೂ ಪರಿಸ್ಥಿತಿಯ ಮನಗಂಡು ಹೆಚ್ಹಿನ ಸಹಾಯಹಸ್ತ ನೀಡುವ ಭರವಸೆ ನೀಡಿದೆ ಎಂದು ತಿಳಿದುಬಂದಿದೆ.

ಮಂತ್ರಾಲಯ ಎಂದರೆ ಬೆಚ್ಹಿ
ಬೀಳುವ ಹಾಗಾಗುತ್ತದೆ!
ವಿಜಯಕರ್ನಾಟಕ -ಶನಿವಾರ ,ಅಕ್ಟೋಬರ್ ೨೦೦೯ ಪತ್ರಿಕೆಯ ಪುಟ ೯-ವಿಕಾಸ ದಲ್ಲಿ ,ತುಂಗಭದ್ರೆಯ ಆರ್ಭಟದಿಂದ ಇಡೀ ಮಂತ್ರಾಲಯ ಜಲದಿಂದಾವ್ರುತವಾಗಿ ಅಲ್ಲಿದ್ದ ಜನತೆ ಹೇಗೆ ಸಂಕಟವನ್ನು ಅನುಭವಿಸಿದರು ಎಂಬ ಬಗ್ಗೆ ,ಅಲ್ಲಿಯೇ ಇದ್ದ ಪ್ರತ್ಯಕ್ಷ ದರ್ಶಿಯೊಬ್ಬರು ಮನ ಮುಟ್ಟುವಂತೆ ಹೇಳಿಕೊಂಡಿದ್ದಾರೆ .ಮಂತ್ರಾಲಯ ಎಂದರೆ ಮನಸ್ಸು ಬೆಚ್ಹಿ ಬೀಳುತ್ತದೆ !ಎಂದಿದ್ದಾರೆ.ಅವರ ಮತ್ತು ಅವರೊಂದಿಗಿದ್ದವರ ಸ್ವಾನುಭವವನ್ನು ಶ್ರೀನಿಧಿ ಹೆಗಡೆ ,ಬೆಂಗಳೂರು ಎಂಬುವವರು ಬರೆದಿದ್ದಾರೆ. ಖಂಡಿತಾ ಓದಿ.
ಆ ಲೇಖನದ ಒಂದು ತುಣುಕು,ನಿಮಗಾಗಿ.
' ರಾತ್ರಿ ೨ ಗಂಟೆಯ ಸಮಯ .ವಸತಿ ಗೃಹದ ಕಾವಲುಗಾರ ಬಂದು ನಮ್ಮನ್ನು ಎಬ್ಬಿಸಿ "ನೀರಿನ ಮಟ್ಟ ಏರುತ್ತಿದೆ " ಎಂದು ಎಚ್ಹರಿಸಿದ .ಮುಂದೇನು? ನಾವಿದ್ದ ವಸತಿ ಗೃಹಕ್ಕೆ ಮೇಲಿನ ಅಂತಸ್ತು ಇಲ್ಲ !ಇದರಿಂದಾಗಿ ನನ್ನ ತಂದೆ iಮತ್ತು ನಾನು ಅಲ್ಲಿ ಯಾವುದಾದರು ಎತ್ತರದ ಕಟ್ಟಡ ಇದೆಯಾ ಎಂದು ಹುಡುಕಿದಾಗ ನಮಗೆ ಕಂಡು ಬಂದಿದ್ದು ಕರ್ನಾಟಕ ಭವನದ ಎರಡನೇ ಅಂತಸ್ತು .ತಕ್ಷಣ ಕುಟುಂಬದ ಸದಸ್ಯರ ಜತೆಗಿದ್ದ ಇತರ ಕುಟುಂಬಗಳನ್ನು ಸೇರಿಸಿಕೊಂಡೆವು .ನಮ್ಮನ್ನು ಎಚ್ಹರಿಸಿದ ಕಾವಲುಗಾರನನ್ನು 'ನೀವು ಜತೆಯಲ್ಲಿ ಬಂದುಬಿಡಿ ನೀರು ಏರುತ್ತಿದೆ ' ಎಂದಾಗ, ಆತ ' ಬೇಡ ನಾನು ಸ್ತಳೀಯ ,ಹೇಗೋ ಬಚಾವಾಗ್ತೇನೆ ,ನೀವು ಹೊರಡಿ ' ಎಂದ.ಎಲ್ಲರಿಗೂ ಸಮಾಧಾನದ ಮಂತ್ರ ಬ್ಹೊದಿಸುತ್ತಾ ಎದೆಯ ಮಟ್ಟದವರೆಗಿದ್ದ ರಭಸವಾದ ನೀರನ್ನು ದಾಟಿ ಎಲ್ಲರೂ ಕರ್ನಾಟಕ ಭವನಕ್ಕೆ ತೆರಳಿದೆವು.ಆಗ ಸ್ವಲ್ಪ ಜೀವ ಬಂದಂತಾಯಿತು ."
ಶ್ರೀನಿಧಿ ಹೆಗಡೆ ಯವರ ಆ ದಿನದ ಅನುಭವ ನಿಜಕ್ಕೂ ಬೆಚ್ಹಿ ಬೀಳಿಸುವಂತಿದೆ ಅಲ್ಲವೇ?


ದಿನದ ಸ್ಪಂದನ ..
'ಪ್ರಪಂಚದಲ್ಲಿಯೇ ಅತಿ ದೊಡ್ಡ ಸ್ಟೀಮ್ ಕುಕಿಂಗ್ ಸಿಸ್ಟಂ ಇರವುದು ಎಲ್ಲಿ ಎಂಬುದು ನಿಮಗೆ ಗೊತ್ತಾ?
ನಮ್ಮ ದೇಶದಲ್ಲಿಯೇ .ಆಂದ್ರದ ತಿರುಪತಿ ತಿರುಮಲ ದೇವಸ್ಥಾನದಲ್ಲಿ ! ಒಂದು ಸಲಕ್ಕೆ ಇದರಲ್ಲಿ 15oo ಮಂದಿಗೆ ಅಡುಗೆ ತಯಾರಿಸಬಹುದಂತೆ! ಒಹ್ .
ಪ್ರಕೃತಿ .

ಪ್ರಕೃತಿಯ ಮುಂದೆ
ಸಮನಾರು ಹೇಳು?
ಮಠ ವಾದರೇನು?
ಮಂದಿ ಯಾದರೇನು?
ಮಂತ್ರಾಲಯ ವಾದರೇನು ?
ಅಬ್ಬರದ ಮಳೆಯಿಂದ-

ಜಲಾವ್ರುತಆಗುವುದಿಲ್ಲವೇ ಹೇಳು ?
ಪ್ರಕೃತಿಯ ಮುಂದೆ ,
ಎಲ್ಲಾ ಸಮ ನೀ ಕೇಳು!
------ ಓಂ -----



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ