ಮಂಗಳವಾರ, ಅಕ್ಟೋಬರ್ 20, 2009

ಕೋಮು ಸೌಹಾರ್ದವೆಂದರೆ......

"ಹಿಂದೂಗಳ ಅಭಿಪ್ರಾಯವನ್ನು ಧಿಕ್ಕರಿಸುವುದು ,ಅಲ್ಪಸಂಖ್ಯಾತರನ್ನು ಓಲೈಸುವುದು -ಕೋಮು ಸೌಹಾರ್ದತೆ ಎನಿಸಿ ಕೊಳ್ಳುತ್ತದೆಯೇ?
ನಾವಾಗ
ಮೈಸೂರಿನಲ್ಲಿದ್ದೆವು .ಮೈಸೂರಿನ ,ಕುವೆಂಪುನಗರದ ಕೂಡು ರಸ್ತೆಯ ವೃತ್ತವೊಂದಕ್ಕೆ ರಾಷ್ಟ್ರಪ್ರೇಮಿ ,ಡಾ .ಹೆಡಗೆವಾರ್ ರವರ

ಹೆಸರನ್ನು ಮೈಸೂರು ನಗರ ಪಾಲಿಕೆಯವರು ನಾಮಕರಣ ಮಾಡಿದರು .ಸರಿ ಯಾರ ಕುಮ್ಮಕ್ಕಿನಿಂದಲೋ ಏನೋ ಅಲ್ಲಿಯ ವಿಚಾರವಾದಿಗಳ ವೇದಿಕೆಯವರೂ ,ಹಾಗು ಕೋಮು ಸೌಹಾರ್ದವೇದಿಕೆಯವರು ಪಾಲಿಕೆಯ ಈ ನಿಲುವನ್ನು ಪ್ರತಿಭಟಿಸಿ ಹೇಳಿಕೆಗಳನ್ನಿತ್ತು ಎಂದಿನ ತಮ್ಮ ನಿಲುವನ್ನು ತೋರಿಸಿದವು. ಈ ಬಗ್ಗೆ ನಾನು ನನ್ನ ಅನಿಸಿಕೆಯನ್ನು "ಮೈಸೂರು ಮಿತ್ರ 'ಪತ್ರಿಕೆಗೆ ಬರೆದೆ .ಮೈಸೂರುಮಿತ್ರ ಪತ್ರಿಕೆಯ ೧೫-೦೮-೨೦೦೫ ರ "ನಿಮ್ಮಪತ್ರ-ವಿಭಾಗ"ದಲ್ಲಿ ಪ್ರಕಟವಾಯಿತು .
ಆ ಪತ್ರ -
"ವೃತ್ತಕ್ಕೆ ಹೆಡಗೆವಾರ್ ಹೆಸರು :ಸ್ವಾಗತಾರ್ಹ"
ಮಾನ್ಯರೇ,

ಕುವೆಂಪುನಗರದ ಕೂಡು ರಸ್ತೆ ,ಹೋಟೆಲ್ ಶಾಂತಿಸಾಗರದ
ಮುಂಭಾಗದ ವೃತ್ತಕ್ಕೆ ಒಬ್ಬ ರಾಷ್ಟ್ರ ಪ್ರೇಮಿ ಡಾ.ಹೆಡಗೆವಾರ್ ರವರ ಹೆಸರನ್ನು ನಾಮಕರಣ ಮಾಡುವುದರ ಮೂಲಕ ನಗರಪಾಲಿಕೆ ತಾನು ನಿಜವಾದ ಜನಪರ ಪಾಲಿಕೆಯೆಂದು ತೋರಿಸಿಕೊಟ್ಟಿದೆ .ಆ ವೃತ್ತಕ್ಕೆ ಡಾ.ಹೆಡಗೆವಾರ್ ಹೆಸರನ್ನಿಡುವುದರ ಮೂಲಕ ಮೈಸೂರಿನ ಜನತೆಗೆ ' ಸ್ವಾತಂತ್ರ್ಯೋತ್ಸವದ ಉಡುಗೊರೆ ನೀಡಿದೆ'
ಕೆಲವು ಸಂಘಟನೆ ,ವಿಚಾರವೇದಿಕೆಗಳು ಇವೆ .ತಮ್ಮನ್ನು ತಾವು ಪ್ರಗತಿಪರರೆಂದು ಹೇಳಿಕೊಳ್ಳುತ್ತಾ ,ಜನಪರ ಮತ್ತು ದೇಶಪ್ರೇಮಿ ಕಾರ್ಯಗಳು ಎಲ್ಲೇ ನಡೆದರೂ ,ನನ್ನದೊಂದು ಸೊಟ್ಟ ಕೈ ಎಲ್ಲಿಡಲಿ ಅಂತ ಮೂಗು
ತೂರಿಸುವುದೆ ಇವುಗಳ ಜಾಯಮಾನ .ಹೀಗೆ ಎಲ್ಲ ವಿಷಯಗಳಲ್ಲಿಯೂ ತಮ್ಮ ಮೂಗು ತೂರಿಸುವುದಕ್ಕೆ ಇವರಿಗೆ ಅಧಿಕಾರ ಕೊಟ್ಟವರು ಯಾರು?

ಕೇವಲ ಬೆರಳೆಣಿಕೆಯಷ್ಟು ಮಂದಿ ಗುಂಪುಗೂಡಿ,ಬಹುಸಂಖ್ಯಾತರ ಭಾವನೆಗಳಿಗೆ ನೋವುಂಟುಮಾಡುವಂತಹ ಇವರ ಸೋಗಲಾಡಿತನ ಹೆಚ್ಹು ದಿನ ನಡೆಯಲಾರದು .ಕೋಮುಸೌಹಾರ್ದ ವೇದಿಕೆಯವರು ಸಹ ಈ ಪಾಲಿಕೆ ಒಳ್ಳೆಯ ನಿಲುವನ್ನು ಖಂಡಿಸಿ
ಆಕ್ಷೇಪ ವ್ಯಕ್ತಪಡಿಸಿದ್ದಾರೆಂದು ಸುದ್ದಿಯಾಗಿದೆ. 'ಕೋಮು ಸೌಹಾರ್ದವೆಂದರೆ ಕೇವಲ ಅಲ್ಪ ಸಂಖ್ಯಾತರನ್ನು ಒಲೈಸುವುದಲ್ಲ ಎಂಬುದನ್ನು ಈ ಸಂಘಟನೆಗಳು ತಿಳಿಯಬೇಕಾಗಿದೆ .
ಡಾ .ಹೆಡಗೆವಾರ್ ,ಆರ್. ಎಸ್ .ಎಸ್ .ಮೂಲದವರು ಎಂದೂ ,ಅವರ ಹೆಸರನ್ನು ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರ ಆಶಯಕ್ಕೆ ವಿರುದ್ದವೆಂದೂ ಹೇಳಿರುವುದು ಹಾಸ್ಯಾಸ್ಪದ ವಿಚಾರ. ವಿಶ್ವಮಾನವ ವಿಚಾರ ಬಹು ವಿಶಾಲವಾದುದು . 'ಹಿಂದುಗಳನ್ನು' ವಿರೋಧಿಸಬೇಕೆನ್ನುವಷ್ಟು 'ಅಲ್ಪ-ಹಾಗೂ ಸಂಕುಚಿತ 'ವಿಚಾರ ಅದರಲ್ಲಿಲ್ಲ .ಇಲ್ಲಿ ನಿಜವಾಗಿ ಸಂಕುಚಿತ ಬುದ್ದಿ ತೋರಿಸುತ್ತಿರುವವರು ಈ ಬುದ್ದಿವಂತರು ಎಂದುಕೊಂಡ ಪ್ರಗತಿಪರ ಕೋಮುಸೌಹಾರ್ದ ವೇದಿಕೆಯವರೂ,ಹಾಗೂ ವಿಚಾರವಾದಿಗಳು ಎನ್ನಬೇಕಾಗಿದೆ.

ಮೈಸೂರು. -ಬೇಲೂರು ದ. ಶಂ .ಪ್ರಕಾಶ .
೧೨-೦೮-೨೦೦೫.
ಈ ಕೋಮು ಸೌಹಾರ್ದತೆ ವಿಚಾರ ನಿಮಗೆ ಏನನಿಸುತ್ತದೆ? ನನ್ನ ಈ ಬ್ಲಾಗ್ ಗೆ ನಿಮ್ಮ ಅಭಿಪ್ರಾಯ ತಿಳಿಸಿ.


ಕಾಸರವಳ್ಳಿ ಗೆ "ಎಕ್ಸಲೆನ್ಸ್ "ಪ್ರಶಸ್ತಿ - ನಾವೆಲ್ಲ ಹೆಮ್ಮೆ ಪಡೋಣ .
ಲಂಡನ್ ವರದಿ -ಕಲಾತ್ಮಕ ಚಿತ್ರಗಳ ಹೆಸರಾಂತ ನಿರ್ದೇಶಕ ಹೆಮ್ಮೆಯ ಕನ್ನಡಿಗ ಗಿರೀಶ್ ಕಾಸರವಳ್ಳಿ ಅವರಿಗೆ ೨೦೦೯ ರ ದಕ್ಷಿಣ ಏಷ್ಯಾ ಸಿನಿಮಾ ಪ್ರತಿಷ್ಠಾನ ದ 'ಎಕ್ಸಲೆನ್ಸ್ ಇನ್ ಸಿನೆಮಾ ' ಕ್ರಿಸ್ಟಲ್ ಗ್ಲೋಬ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ .
ಲಂಡನ್ನಿನ ನೆಹರು ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಬ್ರಿಟನ್ನಿನಲ್ಲಿರುವ ಭಾರತದ ಹೈಕಮಿಷನ್ನರ್ ನಳಿನ್ ಸೂರಿ ಪ್ರಶಸ್ತಿ ಪ್ರಧಾನ ಮಾಡಿದರು .
ಕಾಸರವಳ್ಳಿ ಯವರ ಬಗ್ಗೆ ಹೆಚಿನದ್ದೆನನ್ನು ಹೇಳುವುದು ಬೇಕಾಗಿಲ್ಲವೆಂದು ನನ್ನ ಭಾವನೆ.
ಕನ್ನಡ ಸಂಸ್ಕೃತಿಯ ಹೆಮ್ಮೆ ಈ ನಮ್ಮ ಗಿರೀಶ್ ಕಾಸರವಳ್ಳಿಯವರು. ಕನ್ನಡ ಸಿನೆಮಾಗಳಿಗೆ ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಬಹು ದೊಡ್ಡ ಸ್ಥಾನವನ್ನು ದೊರಕಿಸಿಕೊಟ್ಟಿದ್ದಾರೆ .ಕಳೆದ ಮೂರು ದಶಕಗಳಿಂದಲೂ ಹೊಸ ಅಲೆಯೊಂದಿಗೆ ತಮ್ಮನ್ನು ಗುರುತಿಸಿಕೊಂಡು ಇಲ್ಲಿಯವರೆಗೂ ಅದೇ ಜಾಡಿನಲ್ಲಿ ಸಾಗಿರುವ ಕಾಸರವಳ್ಳಿಯವರು ನಮ್ಮ ಸಿನೆಮಾ ಜಗತ್ತಿನ ಆದ್ಯ ಪ್ರವರ್ತಕ ಎನಿಸಿಕೊಂಡಿದ್ದಾರೆ .ಅವರು ತಯಾರಿಸಿರುವ ಚಿತ್ರಗಳ ಸಂಖ್ಯೆ ೧೨ ನ್ನು ಮೀರಿಲ್ಲವಾದರೂ ಯಾವ ಧಾವಂತವೂ ಇಲ್ಲದೆ ಚಿತ್ರ ನಿರ್ಮಿಸುವುದು ಅವರ ಸ್ಟೈಲ್ .ಸ್ತ್ರೀ ಪ್ರಧಾನ ಚಿತ್ರಗಳಿಗೆ ಅವರು ಸೀಮಿತವಗಿದ್ದಾರೆಂಬ ಆರೋಪ ವಿದ್ದರೂ ,ಅಸಮಾನತೆಯ ವಿರುದ್ದ {ಸ್ತ್ರೀ ಸಮಾನತೆ ] ಅವರ ಕೂಗಿಗೆ ಬೆಲೆಯಂತೂ ಸಿಕ್ಕಿದೆಯನ್ನಬಹುದು .
೧೮ ರಾಷ್ಟ್ರಪ್ರಶಸ್ತಿ,೩೨ ರಾಜ್ಯ ಪ್ರಶಸ್ತಿ ,ಹಾಗೂ ೧೪ ಅಂತರ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವುದಲ್ಲದೆ ,೨ ಬಾರಿ ಫಿಲಂ ಫೇರ್ ಪ್ರಶಸ್ತಿ ಗಳಿಂದ ಇವರ ಕೊರಳು ಭಾರವಾಗಿದೆ.
ನಿಜಕ್ಕೂ ನಾವು ಹೆಮ್ಮೆಪಡಬೇಕಲ್ಲವೇ?

ಈ ದಿನದ ಸ್ಪಂದನ :
ಕಣ್ಣು ತೆರೆದು ನಿದ್ರೆ ಮಾಡಲು ಸಾದ್ಯವೇ? ಹೀಗೊಂದು ಪ್ರಶ್ನೆ ಎದುರಾದರೆ -ಇಲ್ಲಿದೆ ಉತ್ತರ.
"ಡಾಲ್ಫಿನ್ ಮೀನು , ಒಂದು ಕಣ್ಣು ತೆರೆದಿಟ್ಟುಕೊಂಡೇ ನಿದ್ರಿಸುವುದಂತೆ !

________--------------------- ಓಂ -------------------____________ ನಮಸ್ತೆ .










2 ಕಾಮೆಂಟ್‌ಗಳು:

  1. ಈಗ್ಗೆ ಸುಮಾರು ೧೫ ವರ್ಷಗಳ ಹಿಂದೆ ೧ ಕನ್ನಡ ಸಿನೆಮಾದಲ್ಲಿ - ನಟ ಶ್ರೀನಿವಾಸಮೂರ್ತಿ ಒಂದು ಹಾಡು ಹೇಳ್ತಾರೆ :
    'ನನ್ನ ಸಂಸಾರದಲ್ಲಿ ರಾಜಕೀಯ,ನನ್ನ ಮನೆಯಲಿ ನಾನೇ ಪರಕೀಯ' ಅಂತ.ನಮ್ ದೇಶದ ಪರಿಸ್ಥಿತಿ ನೂ ಹಾಗೇ ಇದೆ.
    ಹಿಂದುಸ್ತಾನದಲ್ಲಿ ಕಳಪೆ ರಾಜಕೀಯ,ಇಲ್ಲಿ ಹಿಂದೂನೆ ದೊಡ್ಡ ಪರಕೀಯ' ಅಂತ. ತಾನು ತನ್ನತನವನ್ನು ಮರೆತು - ತಮ್ಮವರನ್ನೇ ಅವಹೇಳನ ಮಾಡುವುದೇ 'ಬುದ್ಧಿಜೀವಿಗಳ ಲಕ್ಷಣ' ಅಂತ ತಪ್ಪಾಗಿ ಭಾವಿಸಿದ ಬೆಪ್ಪರು ಮಾಡೋ ಕೆಲಸ ಇದು...ಕೆಂಬೂತ ಗರಿ ತೊಟ್ಟರೆ ನವಿಲಾಗುತ್ತಾ ? ತನ್ನತನವನ್ನ ಮಾರಿಕೊಳ್ಳೋದು ಕೋಮು ಸೌಹಾರ್ದ ಆಗಲು ಸಾಧ್ಯವೇ ಇಲ್ಲ. ಮತ್ತೊಬ್ಬ ಸಹೃದಯಿ ಮಾನವನೊಬ್ಬನ (ಇಲ್ಲಿ ಶ್ರೀ ಹೆಡಗೆವಾರ್) ಜೀವನ ಸಂಘರ್ಷ, ಸಾಧನೆಯನ್ನೇ ಗುರುತಿಸಲಾಗದ ಈ ಸ್ವಯಂಘೋಷಿತ ಬುದ್ಧಿಜೀವಿಗಳು - ವಿಶ್ವ-ಮಾನವ ಸಂದೇಶದ ಬಗ್ಗೆ ಮಾತನಾಡೋ ಧೈರ್ಯವಾದರೂ ಎಲ್ಲಿಂದ ತರ್ತಾರೋ, ಗೊತ್ತಿಲ್ಲ. ಯಾವುದೇ ಒತ್ತಡಕ್ಕೆ ಮಣಿಯದೆ ತಾನು ನಂಬಿದ ಧರ್ಮವನ್ನ, ಅದರ ಸಂದೇಶವನ್ನ ನಿರ್ಭಯಾಗಿ ಪ್ರತಿಪಾದಿಸಿದ,ಸಂಘಟಿಸಿದ ವ್ಯಕ್ತಿ-ಶಕ್ತಿಯನ್ನ ಕೋಮುವಾದಿ ಅಂತಾ ಕರೀತಾರಲ್ಲ, ಏನು ಹೇಳ್ಬೇಕು ಇಂತ ಜನಕ್ಕೆ ? ಇತ್ತೀಚಿಗೆ 'ಟೈಮ್ಸ್' ವಾರಪತ್ರಿಕೆಯ ಸಂಚಿಕೆಯೊಂದರಲ್ಲಿ ಪ್ರಕಟವಾದ ಧರ್ಮ ಸಹಿಷ್ಣುತೆ ಬಗೆಗಿನ ಲೇಖನವೊಂದರ ಪ್ರಕಾರ -'ನಿನ್ನ ದೈವವನ್ನಲದೆ ಪರದೇವರನ್ನ ನಂಬಿದ ಜನರನ್ನು ಕೊಚ್ಚು ಕೊಲ್ಲು' ಎಂಬ ಸಂದೇಶ ಹೊತ್ತ ಧರ್ಮಾನುಯಾಯಿಗಳನ್ನು ಮೆಚ್ಚಿಸಲು - ವಸುದೈವ ಕುಟುಂಬಕಂ, ದೇವನೊಬ್ಬ ನಾಮ ಹಲವು ಎಂದು ಸೌಹಾರ್ದ ಪ್ರತಿಪಾದಿಸಿದ ಹಿಂದೂ ಧರ್ಮದ ಪ್ರಚಾರಕನೊಬ್ಬನಿಗೆ ಸಲ್ಲುತ್ತಿರುವ ತಿರಸ್ಕಾರ ನಮ್ಮ ಬುದ್ಧಿಗೇಡಿತನವಲ್ಲದೆ ಮತ್ತಿನೇನು ?

    - ನವೀನ ಕಶ್ಯಪ

    ಪ್ರತ್ಯುತ್ತರಅಳಿಸಿ
  2. It's kinda hard to read the entire blog in kannada also it doesn't render on all readers(browsers e.g. Safari)

    ಪ್ರತ್ಯುತ್ತರಅಳಿಸಿ