ಭಾನುವಾರ, ಅಕ್ಟೋಬರ್ 25, 2009

೧೧]ಮತಾಂತರ-'ಲವ್ ಜಿಹಾದ್' ಎಂಬ ಹೊಸ ಅಸ್ತ್ರ.

ಶ್ರೀ ವಿರೋಧಿ ನಾಮ ಸಂವತ್ಸರ ದಕ್ಷಿಣಾಯಣ ಶರದೃತು ಕಾರ್ತಿಕ ಮಾಸ ಶುಕ್ಲಪಕ್ಷ ,ಸಪ್ತಮಿ -ಭಾನುವಾರ .೨೫-೦೯-೦೯.
ಇಂದಿನ ದಿನಗಳಲ್ಲಿ 'ಲವ್ ಜಿಹಾದ್ 'ಬಗ್ಗೆ ಎಲ್ಲೆಲ್ಲಿಯೂ ಚರ್ಚೆಯಾಗುತ್ತಿದೆ.ಮತಾಂತರ ಎಂಬ ಪಿಡುಗಿಗೆ ಹೊಸದೊಂದು ಅಸ್ತ್ರ ಸೇರ್ಪಡೆಯಾಗಿದೆ .ಅದುವೇ -ಲವ್ ಜಿಹಾದ್ .
ಮತಾಂತರ ಎಂಬುದು ಇಂದು ನಿನ್ನೆಯ ಪಿಡುಗಲ್ಲ .ನಮ್ಮ ದೇಶಕ್ಕೆ ಸ್ವಾತಂತ್ಯ್ರ ದೊರಕಿದ ಪೂರ್ವದ ದಿನಗಳನ್ನೊಮ್ಮೆ ಅವಲೋಕಿಸೋಣ .೭ ನೇ ಶತಮಾನದಲ್ಲಿಯೇ ನಮ್ಮ ಅಖಂಡ ಭರತ ಖಂಡದತ್ತ ಮುಸ್ಲಿಂ ಆಕ್ರಮಣಕಾರಿಗಳು ಬರಲಾರಂಬಿಸಿದರು . ೧೧ ನೇ ಶತಮಾನ ದಲ್ಲಿ ಮಹಮದ್ ಘಸ್ನಿ ಹಾಗು ೧೨ ನೇ ಶತಮಾನದಲ್ಲಿ ಮಹಮೆದ್ ಘೋರಿ ಇವರುಗಳು ನಮ್ಮ ದೇಶದ ಮೇಲೆ ಧಾಳಿ ಮಾಡಿದ ನಂತರವಂತೂ ದೇಶದಲ್ಲಿ ಕೊಲೆ,ಸುಲಿಗೆ,ನಾಶ ಧ್ವಂಸಗಳ ಘೋರ ತಾಂಡವವನ್ನೇ ಹರಿಯಬಿಟ್ಟಿದ್ದು ಒಂದು ದೊಡ್ಡ ದುರಂತವೇ ಸರಿ.ಅಲ್ಲಿಂದ ೮೦೦ ವರ್ಷಗಳ ಪರ್ಯಂತ ಪರಕೀಯ ಮುಸಲ್ಮಾನ ರೊಡನೆ ಹಿಂದುಸ್ತಾನವು ಸ್ವಾತಂತ್ರಕ್ಕೋಸ್ಕರ ಸಂಗ್ರಾಮದಲ್ಲಿ ತೊಡಗಿತು .
ದೇಶಕ್ಕೊದಕ್ಕಿದ ಮತ್ತೊಂದು ಮಹಾ ದೌರ್ಭಾಗ್ಯವೆಂದರೆ ಸಾಮ್ರಾಜ್ಯಶಾಹಿ ಬ್ರಿಟಿಷರು ವ್ಯಾಪಾರಕ್ಕೆಂದು ನಮ್ಮ ದೇಶಕ್ಕೆ ಬಂದು ಕಾಲಾನಂತರದಲ್ಲಿ ನಮ್ಮ ಇಡೀ ದೇಶವನ್ನೇ ಅವರ ಆಡಳಿತಕ್ಕೆ ಪಡೆದುಕೊಂಡಿದ್ದು.ನಂತರ ದೇಶದ ಸ್ವಾತಂತ್ರ್ಯ ಕ್ಕೋಸ್ಕರ ನಡೆದ ಹೋರಾಟ ಸಾವು, ನೋವು ,ವ್ಯಾಪಕ ಜನಾಂದೋಲನ ,ಅನೇಕ ದೇಶ ಭಕ್ತರ ಬಲಿದಾನ ,ತ್ಯಾಗ,ಸಮರ್ಪಣೆ ಧ್ಯೇಯತಪ್ತ ಜನ ಪೀಳಿಗೆ .
ಅಂತೂ ನಮ್ಮ ದೇಶಕ್ಕೆ ನಂತರ ಸ್ವಾತಂತ್ಯ್ರವೇನೋ ಸಿಕ್ಕಿತು ,ಆದರೆ ಶಾಂತಿ,ಸುಖ ಸಿಗಲಿಲ್ಲ.ಒಡೆದು ಆಳಿದ ಬ್ರಿಟಿಷರು ಕೊನೆಗೂ ದೇಶವನ್ನು ಇಬ್ಬಾಗ ಮಾಡಿ ಭಾರತ -ಪಾಕಿಸ್ತಾನ ಎಂದು ವಿಭಜಿಸಿಯೇ ಬಿಟ್ಟರು. ಈ ವಿಭಜನೆ ಮಹಾ ಭಯಂಕರ ದುರಂತವಾಗಿ
ಪರಿಣಮಿಸಿತು.ರಾತ್ರಿ ಕಳೆದು ಬೆಳಗಾಗುವುದರೊಳಗಾಗಿ ಮಿಲಿಯಗಟ್ಟಲೆ ಭಾರತೀಯ ಸುಪುತ್ರರು ಹಿಂದೂ ವಿರೋಧಿ ರಾಷ್ಟ್ರ ಎಂಬ ಹಣೆಪಟ್ಟಿ ಕಟ್ಟಿಕೊಂಡ ಪಾಕಿಸ್ತಾನದ ಪ್ರಜೆಗಳಾಗಿಹೋದರು .ಸಿಂಧು ನದಿಯನ್ನು ನಮಗೆ ಪರಮಾಡಿಬಿಟ್ಟರು.ಈ ವಿಭಜನೆಯಿಂದ ಇತ್ತ-ಅತ್ತಲಿನ ಕೊಟ್ಯಾವಧಿ ಬಂಧು-ಭಗಿನಿಯರು ಪರಸ್ಪರ ವಿದೇಶಿಗಳಾದರು . ಅಂದಿನಿಂದಲೂ ಪಾಕಿಸ್ತಾನ ನಮಗೆ ಮಗ್ಗುಲ ಮುಳ್ಳಾಗಿ ,ಅನೇಕ ರೀತಿಯ
ಉಪಟಳಗಳನ್ನೂ ನೀಡುತ್ತಲೇ ಇದೆ.ಇದು ಸರ್ವ ವಿದಿತ
ನಮ್ಮ ದೇಶವನ್ನು ದುರ್ಬಲ ಗೊಳಿಸಲು ಪಾಕಿಸ್ತಾನ ಯಾವಾಗಲೂ ಹೊಂಚು ಹಾಕುತ್ತಲೇ ಇರುವುದು ಪ್ರಪಂಚ ತಿಳಿದಿರುವ ವಿಷಯ .ಧರ್ಮ ಯುದ್ಧದ ಹೆಸರಿನಲ್ಲಿ ಇದುವರೆಗೂ ಮತಾಂಧ ಜನರನ್ನು ತರಬೇತಿಗೊಳಿಸಿ ನಮ್ಮ ದೇಶದೊಳಕ್ಕೆ ಹೇಗಾದರೂ ಮಾಡಿ
ಒಳ ನುಸುಳಿಸಿ ದೇಶದೊಳಗೆ ಅಲ್ಲೋಲ ಕಲ್ಲೋಲವನ್ನು ಉಂಟುಮಾಡಿ,ದೇಶವನ್ನು ಅಸ್ತಿರಗೊಲಿಸುವುದು ಅದರ ಸರ್ವಕಾಲಿಕ ಮಹದಾಸೆ .
ಭಾರದೇಶದಲ್ಲಿ ಹೇಗಾದರೂ ಮಾಡಿ ಅಲ್ಲಿರುವ ಮುಸ್ಲಿಂ ಜನಸಂಖ್ಯೆ ಯನ್ನು ಇಮ್ಮಡಿಗೊಳಿಸುವುದು ಪಾಕಿಸ್ತಾನದ ಹುನ್ನಾರ .
ಮತಾಂತರದ ಪಿಡುಗು ಹುಟ್ಟಿಕೊಂಡಿದ್ದೇ ಹೀಗೆ. ವೋಟು ಬ್ಯಾಂಕ್ ರಾಜಕಾರಣ ಹಾಗು ಅಲ್ಪಸಂಖ್ಯಾತರ ಓಲೈಕೆ ಹಿಂದಿನಿಂದಲೂ ನಮ್ಮ ರಾಜಕಾರಣಿಗಳಿಗೆ ಅಂಟಿದ ಜಾಡ್ಯ.ಈ ಒಲೈಕೆಯಿಂದ ಅಲ್ಪಸಂಖ್ಯಾತರ ಹೆಸಾರಿನಲ್ಲಿ ಎಲ್ಲಾ ಸವಲತ್ತು ಗಳನ್ನೂ ಪಡೆದುಕೊಳ್ಳುತ್ತಾ ,ಧರ್ಮದ ಹೆಸರಿನಲ್ಲಿ ಸರ್ಕಾರದ ಕುಟುಂಬ ಯೋಜನೆಗೆ ತನ್ನನ್ನು ಒಡ್ಡಿಕೊಳ್ಳದೆ, ಅವ್ಯಾಹತವಾಗಿ ತನ್ನ ಜನ ಸಂಖ್ಯೆ ಯನ್ನು ಹೆಚಿಸಿಕೊಳ್ಳುತ್ತ ಇರುವ ಮುಸ್ಲಿಂ ಸಮುದಾಯ ಎಂದಿಗೂ ಭಾರತೀಯ ಜನಮಾನಸ ದೊಂದಿಗೆ ಬೇರೆಯುವುದಿಲ್ಲವೇನೋ
ಎಂಬಂತೆ ನಡೆದುಕೊಳ್ಳುತ್ತಿದೆ .ನಮ್ಮ ದೇಶದ ಮುಸ್ಲಿಂ ಸಮುದಾಯಕ್ಕೆ ವಿದೇಶಗಳಿಂದಅಪಾರ ಪ್ರಮಾಣದ ಹಣ ಹರಿದುಬರುತ್ತಿರುವುದು
ಗುಟ್ಟಾಗಿ ಏನೂ ಉಳಿದಿಲ್ಲ . ಈ ಅಪಾರ ಹಣವನ್ನು ಹೇಗೆ ವ್ಯಯಿಸಲಾಗುತ್ತಿದೆ ? ಪ್ರಮುಖವಾಗಿ ಮತಾಂತರಕ್ಕೆ ಎನ್ನಬಹುದು . ಮಸೀದಿಗಳ ಸ್ಥಾಪನೆ ಗೆ ,ಮದರಾಸಗಳ ಸ್ಥಾಪನೆಗೆ,ಹಾಗು ಮತಾಂತರ ದ ಕಾನೂನು ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ಈ ಹಣ ಬಳಕೆ ಆಗುತ್ತದೆಂದು ಹೇಳಲಾಗುತ್ತದೆ .ಭಾರತ ಬಹುಸಂಖ್ಯಾತರಿರುವ ಹಿಂದೂ ರಾಷ್ಟ್ರ ವಾಗಿದ್ದರೂ ಇದು ಜಾತ್ಯಾತೀತ ರಾಷ್ಟ್ರವಾಗಿರುವುದು ಈ ರಾಷ್ಟ್ರದ ವಿಶೇಷತೆ .ಲವ್ ಜಿಹಾದ್ ಬಗ್ಗೆ ಬರೆಯಲು ಶುರುವಿಟ್ಟಾಗ ಈ ಪೀಠಿಕೆಯೇ ಮಾರುದ್ದವಾಯಿತೇನೋ ಅನಿಸುತ್ತಿದೆ .
ಲವ್ ಜಿಹಾದ್ ಬಗ್ಗೆ ನಂತರ ಮುಂದುವರೆಸುತ್ತೇನೆ.

ಈ ದಿನದ ಸ್ಪಂದನ:
ಭಾರತೀಯ ಸಂಸ್ಕೃತಿಯ ಅಂಗವೇ ಆಗಿರುವ ಧರ್ಮ,ಧಾರ್ಮೀಕ ಸಂಪ್ರದಾಯ ಹಾಗು ಅದರ ಆಚರಣೆಯಿಂದ ವೈಯುಕ್ತಿಕವಾಗಿ ,ಸಾಮೂಹಿಕವಾಗಿ ಸಿಗುವುದು ಶಾಂತಿ ಹಾಗೂ ಚಿತ್ತ ಕ್ಷೋಬೆಯಿಂದ ಮುಕ್ತಿ ಎಂಬ ವಿಚಾರದಲ್ಲಿ ಎರಡು
ಮಾತಿಲ್ಲ .ಧರ್ಮ ಕ್ಷೀಣಿಸಿದರೆ ಅಶಾಂತಿ ಮೂಡುತ್ತದೆ.

ದಿನಕರ ದೇಸಾಯಿಗಳನ್ನು ನೆನೆದು ......
ದಿನಕರ ದೇಸಾಯಿಗಳು ಬರೆದರು ನಾಲ್ಕು ಸಾಲಿನ ಪದ್ಯ ,
ಅವರ ಒಂದೊಂದು ಚುಟುಕೂ ,ನಮಗೆಲ್ಲಾ ಹೃದ್ಯ.
ಅವರ ಮಾರ್ಗದಿ ಈಗ ನಾವೆಲ್ಲ ನಡೆದು ,
ಮಾಡೋಣ ಸೇವೆಯನು ,ಅವರನ್ನು ನೆನೆದು.

[ನನ್ನ "ಬಣ್ಣಗಳು" ಕವನ-ಚುಟುಕು ಸಂಗ್ರಹದಿಂದ ]

--------------------------------------------------------------- ಓಂ -------------------------------------------------------------------


2 ಕಾಮೆಂಟ್‌ಗಳು:

  1. "ಭಾರದೇಶದಲ್ಲಿ ಹೇಗಾದರೂ ಮಾಡಿ ಅಲ್ಲಿರುವ ಮುಸ್ಲಿಂ ಜನಸಂಖ್ಯೆ ಯನ್ನು ಇಮ್ಮಡಿಗೊಳಿಸುವುದು ಪಾಕಿಸ್ತಾನದ ಹುನ್ನಾರ." - ಮುಸ್ಲಿಮರ ಜನಸಂಖ್ಯೆ ಹೆಚ್ಚಿಸುವುದರಿಂದ ಒಂದು ರಾಷ್ಟ್ರವಾಗಿ ಪಾಕಿಸ್ತಾನಕ್ಕೆ ಏನು ಪ್ರಯೋಜನ ? ಧರ್ಮ ಪ್ರಚಾರ ವಾಗುವುದು ನಿಜವಾದರೂ ಇದರಿಂದ ಅಂತರರಷ್ಟ್ರೀಯವಾಗಿ ಆಗಲಿ ಇಲ್ಲ ಆಂತರಿಕ ರಾಜಕೀಯದಲ್ಲಾಗಲಿ ಏನೂ ಸಾಧಿಸಿದಂತೆ ಆಗುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ.

    ಹಾಗೆಯೇ ಮುಸ್ಲಿಮ ಸಮುದಾಯ ಎಂದಿಗೂ ಭಾರತೀಯ ಜನಮಾನಸದೊಂದಿಗೆ ಸೇರುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದೀರಿ. ಆದರೆ ನಮಗೆ ತಿಳಿದಂತೆ ಹಲವಾರು ಜನ ಮುಸ್ಲಿಮರು ಭಾರತಕ್ಕೆ ಹಲವಾರು ರೀತಿಯ ಸೇವೆ ಸಲ್ಲಿಸಿಲ್ಲವೇ ? ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಇರಬಹುದು,ಸಿನಿಮಾ ರಂಗದಲ್ಲಿನ ಖಾನ್'ಗಳು,ಕ್ರಿಕೆಟ್ ನ ಅಜ್ಹರ್,ಪಠಾಣ್ ಮುಂತಾದವರು, ಅಸಂಖ್ಯಾತ ಸೈನಿಕರು, ಅಷ್ಟ್ಯಾಕೆ ನಮ್ಮ ನಿಸ್ಸಾರ್ ಅಹ್ಮದ್ ಇವರೆಲ್ಲ ಭಾರತೀಯರಲ್ಲವೇ ? ಹಾಗಾಗಿ ನಿಮ್ಮ ಈ ಅಭಿಪ್ರಾಯಕ್ಕೆ ನನ್ನ ಸಹಮತವಿಲ್ಲ. ನಮಗೆ ಪರಧರ್ಮೀಯರುಗಳ್ಗಿಂತಲೂ ಅಬಿಮಾನರಹಿತ ಸ್ವಧರ್ಮೀಯರಿಂದಲೇ ತೊಂದರೆ ಅಂತ ಅನ್ನಿಸೋಲ್ವ ?

    - ನವೀನ ಕಶ್ಯಪ

    ಪ್ರತ್ಯುತ್ತರಅಳಿಸಿ
  2. kkandita nimma anisikege nanna sampuurna sahamatavide.aadare intaha janaru estu janariddaru? desha edurisuttiruva mataantar pidugu bhayotpaadaneya karineralu ivella kaaryagatavaaga bekaadare staliiya ra bembala villade kastasaadya embude nanna abhipraaya
    nanna anisike abhipraaya innu mugidilla. dayavittu nanna mundina lekhana galnnuu [bhaga 2, 3] gamanisi. nimma abhipraaya tappade tilisi.

    ಪ್ರತ್ಯುತ್ತರಅಳಿಸಿ