ಬುಧವಾರ, ಅಕ್ಟೋಬರ್ 7, 2009

ನಮ್ಮದು ಸಂಪತ್ಬರಿತ ರಾಷ್ಟ್ರ..... ಆದರೆ?

_ ೨ _
ನಮ್ಮ ಭಾರತ ಖಂಡ ಒಂದು ಸಂಪತ್ಭರಿತ ರಾಷ್ಟ್ರ.ಪ್ರಾಕೃತಿಕ ಸಂಪತ್ತು ಹೇರಳವಾಗಿದೆ . ಅತುಲ ಖನಿಜ ಸಂಪತ್ತಿದೆ.ಜಲ ಸಂಪತ್ತೂ ಸಾಕಷ್ಟಿದೆ. ಜನ ಸಂಖ್ಯೆ ಯನ್ನು ಒಂದು ಸಂಪತ್ತು ಎಂದು ಪರಿಗಣಿಸುವುದಾದರೆ ಅಗತ್ಯಕ್ಕಿಂತ ಹೆಚ್ಚಾಗಿ
ಜನ ಸಂಪತ್ತು ಇದೆ. ಪ್ರಪಂಚಕ್ಕೆ ಮಾದರಿಯಾಗಿರುವ ಸಾಂಸ್ಕೃತಿಕ ಸಂಪತ್ತಿದೆ.ಪ್ರಪಂಚದಲ್ಲಿಯೇ ಅತಿ ಬುದ್ಧಿವಂತ ಜನರನ್ನು
ಹೊಂದಿರುವ ದೇಶವೆಂಬ ಖ್ಯಾತಿಯಿದೆ.ಆದರೂ ನಮ್ಮ ದೇಶ ಇನ್ನೂ ಸಾಕಷ್ಟು ಆಭಿವೃದ್ಧಿ ಕಂಡಿಲ್ಲ .ದೇಶದಲ್ಲಿ ಬಡತನ ,ನಿರುದ್ಯೋಗ ,ರೋಗ ,ರುಜಿನ ತಾಂಡವವಾಡುತ್ತಿವೆ .
ನಾವು ಎಲ್ಲಿ ಎಡವಿದ್ದೇವೆ ? ನಮ್ಮ ಅಭಿವ್ರುದ್ಹಿಗೆ ಅಡ್ಡ ಗಾಲಾಗಿರುವುದು ಯಾವುದು?ಅಡ್ಡಗಾಲಾಗಿರುವವರು ಯಾರು ?ಯಾವ ಶಕ್ತಿ
ನಮ್ಮ ಅಭಿವೃದ್ಧಿಯನ್ನು ಸಹಿಸಿಕೊಳ್ಳುತ್ತಿಲ್ಲ ? ಹಾಗೆ ತಡೆಯುವುದರಿಂದ ಆ ಶಕ್ತಿಗೆ ಆಗುವ ಪ್ರಯೋಜನವಾದರೂ ಏನು ?
ಪಾಕಿಸ್ತಾನ ಹಾಗು ಚೀನಾ ನಮ್ಮ ದೇಶಕ್ಕೆ ಮಗ್ಗುಲ ಮುಳ್ಳುಗಲಾಗಿವೆ .ನಮ್ಮ ಕೇಂದ್ರ ಸರಕಾರ ಈ ಎರಡೂ ದೇಶಗಳ ಕಿರುಕುಳವನ್ನು ಸಹಿಸಿಕೊಳ್ಳುತ್ತಲೇ ಬಂದಿರುವುದು ದುರದೃಸ್ಟಕರ .
ಕಾಶ್ಮೀರದ ವಿಷಯದಲ್ಲಿ ನಮಗೆ ಆ ಜನ್ಮ ಶತ್ರುವಿನಂತೆ ವರ್ತಿಸುತ್ತಿದೆ ಪಾಕಿಸ್ತಾನ.ಭಯೋತ್ಪಾದಕರನ್ನು ನಮ್ಮ ದೇಶದೊಳಗೆ ಕಳುಹಿಸುತ್ತಾ, ಆಗಾಗ ವಿದ್ವಂಸಕ ಕೃತ್ಯಗಳನ್ನು ಪ್ರಾಯೋಜಿಸುತ್ತಾ ,ಆರಾಜಕತೆಯನ್ನುಂಟು ಮಾಡುತ್ತಾ ನಮ್ಮ ದೇಶಕ್ಕೆ
ನಿವಾರಣೆಯಾಗದ ಸಮಸ್ಯೆಗಳನ್ನೂ ತಂದೊಡುತ್ತಿದೆ .
ಇನ್ನು ಚೀನಾ ಇತ್ತೀಚಿನ ದಿನಗಳಲ್ಲಿ ಗಡಿ ರೇಖೆಯ ವಿಷಯದಲ್ಲಿ ನಮ್ಮ ದೊಡ್ಡಣ್ಣನಂತೆ ವರ್ತಿಸುತ್ತಿದೆ .
ಈ ಯಾವುದೇ ವಿಷಯ ನಿಮಗೆ ಹೊಸದಲ್ಲ .ಆದರೂ ........

ದಿನದ ಸ್ಪಂದನ .
"ಮನಸ್ಸು ಎರಡೂ ಕಡೆ ಹರಿತ ಇರುವ ಅಲಗಿನ ಆಯುಧ.ಅದನ್ನು
ವಿವೇಕಯುತವಾಗಿ ಬಳಸುವುದೇ ಜಾಣತನ"
*ಸ್ವಾಮಿ ನಿರ್ಮಲಾನಂದ .
































_ ೨ _

2 ಕಾಮೆಂಟ್‌ಗಳು:

  1. ನಮಸ್ಕಾರ & ಅಭಿನಂದನೆಗಳು ,
    ನಿಮ್ಮ ಪ್ರಯತ್ನ ಶ್ಲಾಘನೀಯ. ಮುಂದಿನ ಸಂಚಿಕೆ ಗಳಲ್ಲಿ ನಿಮ್ಮ ಗೊಂದಲಗಳ ಜೊತೆಗೆ ನಿಮ್ಮ ನಿಟ್ಟಿನಲ್ಲಿ ಅವುಗಳಿಗೆ ಪರಿಹಾರವನ್ನು ಸೂಚಿಸಿದರೆ ನಿಮ್ಮ ಯೋಚನಾಲಹರಿಯ ದಿಕ್ಕು ಸಮನಸ್ಕರಿಗೆ ತಿಳಿಸಿದಂತೆಯೂ ಆಗುತ್ತದೆ,ಜೊತೆಗೆ ಚರ್ಚೆಗೆ ಗ್ರಾಸ ಸಿಕ್ಕಂತೆಯೂ ಆಗುವುದು, ಎಂಬುದು ನನ್ನ ಅಭಿಪ್ರಾಯ.
    - ನವೀನ್ ಕಶ್ಯಪ್

    ಪ್ರತ್ಯುತ್ತರಅಳಿಸಿ