ಶುಕ್ರವಾರ, ಅಕ್ಟೋಬರ್ 23, 2009

"ಬಣ್ಣಗಳು' ನನ್ನ ಮೊದಲ ಕವನ-ಚುಟುಕುಗಳ ಸಂಗ್ರಹ ......

ಶ್ರೀ ವಿರೋಧಿ ನಾಮ ಸಂವತ್ಸರ ,ದಕ್ಷಿಣಾಯಣ ,ಶರದೃತು ,ಕಾರ್ತಿಕ ಮಾಸ ಶುಕ್ಲಪಕ್ಷ , ಪಂಚಮಿ ಶುಕ್ರವಾರ .೨೩-೧೦-೨೦೦೯.
ನಾನು ಹೇಳಿದ್ದೆನಲ್ಲ ,ಮೊದಲಿನಿಂದಲೂ ನನಗೆ ಬರೆಯುವ ಹವ್ಯಾಸ ಇತ್ತೆಂದು .ಸಣ್ಣ, ಸಣ್ಣ ಕವನಗಳನ್ನೂ ಬರೆಯುವ ಮತ್ತು ಆ ಕವನಗಳನ್ನು ಸ್ಥಳೀಯ ಪತ್ರಿಕೆಗಳಿಗೆ ಕಳುಹಿಸಿಕೊಡುತ್ತಿದ್ದೆ .ಹೆಚ್ಹಿನವು ಯಾವ ತಿದ್ದುಪಡಿಯೂ ಇಲ್ಲದೆ ಪ್ರಕಟವಾಗುತ್ತಿದ್ದವು.
ನನ್ನ ತಂಗಿ ಉಮಾ ಆ ಕವನಗಳನ್ನು ಓದಿ ಚೆನ್ನಾಗಿದೆ ಇನ್ನೂ ಬರೆ ಎಂದು ನನ್ನನ್ನು ಪ್ರೋತ್ಸಾಹಿಸಿದ್ದರಿಂದ ನನ್ನ ಕವನ ಬರವಣಿಗೆ
ಮುಂದುವರೆಯಿತು .ಹಾಗೆ ಪ್ರಕಟವಾದದ್ದು ಮತ್ತು ಇತರೆ ಕವನಗಳನ್ನು ಹೇಗೋ ಒಂದು ಕಡೆ ಸಂಗ್ರಹಿಸುತ್ತಿದ್ದೆ .
ನಾನಾಗ [೧೯೯೬] ಸ್ಟೇಟ್ ಬ್ಯಾಂಕ್ ಆಫ್ ಮೈಸೂರು , ಶಿವಮೊಗ್ಗ ದ ಗಾಂಧೀಬಜಾರ ಶಾಖೆಯಲ್ಲಿ ಸಹ ವ್ಯವಸ್ಥಾಪಕ ನಾಗಿ ಕೆಲಸ ನಿರ್ವಹಿಸುತ್ತಿದ್ದೆ .ನಾನು ಅಸ್ಟು ಹೊತ್ತಿಗಾಗಲೇ ಹತ್ತಿರ,ಹತ್ತಿರ ೭೦-೮೦ ಕವನಗಳನ್ನು -ಚುಟುಕುಗಳನ್ನು ಬರೆದಿದ್ದೆ .ಗೆಳೆಯ ಭಗವಾನ್ [ಎಸ್ .ದತ್ತಾತ್ರಿ ,ಎಂ .ಎ .,ಬಿ .ಇಡಿ .,ಆರ್ ಬಿಪಿ.,] ಎಂಬುವವರು ಈ ಎಲ್ಲಾ ಕವನಗಳನ್ನೂ ಒಮ್ಮೆ ಓದಿ ನನ್ನ ಬೆನ್ನು ತಟ್ಟಿ ,ಒಂದು ಕವನ ಸಂಕಲನ ಹೊರತರುವಂತೆ ನನ್ನನ್ನು ಪ್ರೋತ್ಸಾಹಿಸಿದರು .ಅಲ್ಲದೆ ತಮ್ಮದೇ ಒಂದು ಪ್ರಕಾಶನ ಇರುವುದಾಗಿಯೂ ಅದರಡಿಯಲ್ಲಿಯೇ ಪುಸ್ತಕ ಪ್ರಕಟಿಸುವುದಾಗಿಯೂ ಭರವಸೆಯಿತ್ತರು.
ಸರಿ,ಪ್ರಕಟನಾರ್ಹ ಕವನಗಳನ್ನೂ,ಚುಟುಕುಗಳನ್ನು ಒಂದೆಡೆ ಬರೆದು ತಿದ್ದಿ ತೀಡಿ ಮುದ್ರಕರಿಗೆ ಕೊಟ್ಟಿದ್ದಾಯಿತು .ಇದು ನನ್ನ ಮೊದಲನೆ ಕವನ ಸಂಕಲನ .ಈ ಕವನ ಸಂಕಲನವನ್ನು ನನ್ನ ಅಣ್ಣ ಬ್ರೆಡ್ ಅಂಗಡಿ ಸುಬ್ಬಣ್ಣನಿಗೆ ,ಈ ಭೂಮಿಗೆ ನನ್ನ ತಂದ ನನ್ನ ಮಾತಾಪಿತರನ್ನು ನೆನೆದು ,ಅರ್ಪಿಸಿದೆ.ನನ್ನ ಈ ಕವನ ಸಂಗ್ರಹಕ್ಕೆ ಕನ್ನಡ ಪೂಜಾರಿ ಶ್ರೀ ಹಿರೇಮಗಳೂರು ಕಣ್ಣನ್ ಮುನ್ನುಡಿ ಬರೆದು 'ತಾ ಲೆಕ್ಖಣಿಕೆ ತಾ ದೌತಿ'ಎನ್ನದೆ ಚುಟುಕು-ಕವನ ದ ಲೆಖ್ಖ ಬರೆವ ಸಾಹಸಕ್ಕೆ ಕೈ ಹಾಕಿದ್ದೀರಿ .ಬೇಸತ್ತ ಮುಖಕ್ಕೆಲ್ಲಾ ಬಸವಳಿಸುವ ಮಸಿಗಾರರೆನಿಸಿದ್ದೀರಿ ' ನಿಮ್ಮ ಪ್ರಯತ್ನಕ್ಕೆ ಜೈ ಅನ್ನೋಣ ಎಂದು ಹರಸಿದರು.
ಅಚ್ಹಿಗೆ ಹೋಗುವಾಗ ಕರಪ್ರತಿಯನ್ನು ತಿದ್ದಿಕೊಟ್ಟು 'ಅಪ್ಪಾ ಅದು ಹೀಗೆ ....ಇದು ಹೀಗೆ'ಎಂದು ಹೇಳಿದ ನನ್ನ ಮಗಳು ಮಾಧುರ್ಯಳ ಸಹಕಾರವನ್ನು ಪ್ರೀತಿಯಿಂದ ನೆನೆದು ,ನನ್ನೆಲ್ಲಾ ಕೆಲಸಗಳಲ್ಲಿ ಸಹಭಾಗಿಯಾಗಿ ಸ್ಪೂರ್ತಿ ,ಉತ್ಸಾಹ ತುಂಬುವ ನನ್ನವಳು-ಸೌ.ಭಾರತಿಯ ಸಹಕಾರ ನೆನೆದೆ.ಪ್ರಕಾಶಕರಾಗಿ ಶ್ರೀ ಭಗವಾನ್ ಒಂದೆರಡು ಮಾತು ಬರೆದು 'ಬಣ್ಣಗಳು"ಮುದನೀಡಲಿ
ಎಂದು ಆಶಿಸಿದರು .
ಬೋರಾಯಿತಾ? ಕ್ಸಮಿಸಿ .ಕವನ ಸಂಕಲನದ ಮೊದಲ ಕವನ ಒಂದನ್ನು ನೀಡುತ್ತಾ ನಿಮ್ಮ ಅಭಿಪ್ರಾಯಕ್ಕಾಗಿ ಕಾಯುತ್ತಾ ........
ಜೀವನಾರ್ಥ :
ಗಿಡವೊಂದು,
ಬೆಳೆದು ಮರವಾಗಿ,
ಮರದಲ್ಲಿ ಹೂವುಅರಳಿ
'ಪರಾಗ'ಸ್ಪರ್ಶಿಸಿ -
ಟಿಸಿಲೊಡೆದು, ಹಲವು
ಕೊಂಬೆಗಳೊಡನೆ
ಬೆಳೆಯುತ್ತದೆ-ತಾನೆ ತಾನಾಗಿ;
ನಂತರ-
ಅದರ ಬೀಜಗಳು ದೂರ ಸಿಡಿದು ,
ಹಲವಾರು ಅಲ್ಲೇ ಬೆಳೆದು ,
ಮರವಾಗಿ
ಕಂಗೊಳಿಸಿದಾಗ -
ಆ ಮೊದಲ ಮರ,
ಉರುಳುತ್ತದೆ ,ಅಳಿಯುತ್ತದೆ ,
ತಾನೇ ,ತಾನಾಗಿ.
ಧನ್ಯತೆಯ ಭಾವ ತಳೆಯುತ್ತದೆ.

ದಿನದ ಸ್ಪಂದನ:
ಅಮೆರಿಕಾದ ಶ್ವೇತಭವನದಲ್ಲಿ ಮೊದಲಬಾರಿಗೆ ದೀಪಾವಳಿ ಹಬ್ಬ !
ಬರಾಕ್ ಒಬಾಮ ಶ್ವೇತಭವನದಲ್ಲಿ ,ವೇದ ಮಂತ್ರದ ಘೋಷದ ನಡುವೆ ೧೫-೧೦-೨೦೦೯ ರಂದು ಗುರುವಾರ ರಾತ್ರಿ ದೀಪಾವಳಿಯನ್ನು ಆಚರಿಸಿದರಂತೆ.ಇವರೇ ದೀಪಾವಳಿ ಆಚರಿಸಿದ ಅಮೆರಿಕಾದ ಮೊದಲ ಅಧ್ಯಕ್ಷರು .
ದೀಪಾವಳಿ ಬೆಳಕಿನ ಹಬ್ಬ . ದೀಪವೆಂದರೆ ಬೆಳಕು ,ಬೆಳಕೆಂದರೆ ಅರಿವು . ಎಲ್ಲರ ,ಎಲ್ಲೆಡೆ ಅಂಧಕಾರ ಕಳೆದು ಜಗತ್ತಿನಲ್ಲಿ ಬೆಳಕು ಮೂಡಿ ,ಶಾಂತಿ ಸಮೃದ್ಧಿ ,ಸಂತಸ ತರಲಿ.ಇದೆ ದೀಪಾವಳಿಯ ಸಂಕೇತ ಕೂಡ .
ತಡವಾಗಿಯಾದರೂ ಬರಾಕ್ ಒಬಾಮ ಅವರಿಗೆ ನಾವೆಲ್ಲಾ ದೀಪಾವಳಿಯ ಶುಭಾಷವಯ ಕೋರೋಣ .


ಅಮೃತವಾಣಿ:
ಸದುಪದೇಶ ಎಂಬುದೇ ಕಿವಿಗಳಿಗೆ ತುಂಬಬೇಕಾದ ಅಮೃತ.
ಶ್ರೀ ಶಂಕರ ಭಗವತ್ಪಾದಾಚಾರ್ಯರು
-------------------------------------------------------- ಓಂ--------------------------------------------------------------------------




ಸದುಪದೇಶ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ