ಸೋಮವಾರ, ಅಕ್ಟೋಬರ್ 12, 2009

ಸೋಮವಾರ ,ನವಮಿ . ದಿನಾಂಕ :೧೨-೧೦-೨೦೦೯.
ಓಂ ಶಾಂತಿ :, ಓಂ ಶಾಂತಿ: ಅಂದದಕ್ಕೆ ಒಬಾಮಾಗೆ ನೊಬೆಲ್ ಪುರಸ್ಕಾರ !
ಈ ಗರಿ ಎಷ್ಟು ಸರಿ?

ಮನುಕುಲದ ಅಭಿವ್ರುದ್ಹಿಗಾಗಿ ನಡೆಸುವ ಕಾರ್ಯಕ್ಸೇತ್ರಗಳಿಗೆ ಸಂಬಂದಿಸಿದಂತೆ ಆಯಾ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಪ್ರತಿ ವರ್ಷವೂ ನೊಬೆಲ್ ಫೌಂಡೇಶನ್ ನೀಡುವ ,ಪ್ರಪಂಚದ ಅತ್ಯುನ್ನತ ಪ್ರಶಸ್ತಿ ನೊಬೆಲ್ ಪ್ರಶಸ್ತಿ .ಭೌತಶಾಸ್ತ್ರ ,ರಸಾಯನಶಾಸ್ತ್ರ ,ವೈದ್ಯಕೀಯ ,ಸಾಹಿತ್ಯ ,ಶಾಂತಿ ಮತ್ತು ಅರ್ಥಶಾಸ್ತ್ರ -ಈ ಆರು ವಿಭಾಗಗಳಲ್ಲಿ ಪುರಸ್ಕಾರ ನೀಡಲಾಗುತ್ತಿದೆ .
೨೦೦೯ ನೆ ಸಾಲಿನ ನೊಬೆಲ್ ಪ್ರಶಸ್ತಿಗಳು ಪ್ರಕಟವಾಗಿದ್ದು ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಪ್ರಶಸ್ತಿ ಘೋಷಿಸಲಾಗಿದೆ .
ಈ ಪ್ರಶಸ್ತಿಯ ಘೋಷಣೆ ಅಮೆರಿಕನ್ನರಿಗೆ ,ಹಾಗು ಒಬಾಮ ಅವರ ಕೀನ್ಯಾ ಮೂಲದ ಕುಟುಂಬ ವರ್ಗದವರಿಗೆ ಹರ್ಷ ತಂದಿರುವುದು ನಿಜ .ಆದರೆ ಒಬಾಮ ಆವರಿಗೆ ಸಂದ ಈ ಪ್ರಶಸ್ತಿ ಅನೇಕರ ಟೀಕೆಗೂ ಗುರಿಯಾಗಿದೆ .ಟೀಕಾಕಾರರ ಪ್ರಕಾರ ಒಬಾಮ ಅವರ ಯಾವ ಪ್ರಯತ್ನಗಳೂ ,ವಿದೇಶ ನೀತಿಯೂ ಸೇರಿದಂತೆ ,ಇನ್ನೂ ಫಲ ಕೊಡದ ಪ್ರಯತ್ನಗಳೂ ,ಅಭಿವೃದ್ದಿಯ ಹಂತದಲ್ಲಿರುವಾಗಲೇ ನೊಬೆಲ್ ಪುರಸ್ಕಾರ ಕೊಟ್ಟಿದ್ದು ಸರಿಯಲ್ಲ.
"ಇಂತಹ ಪ್ರಶಸ್ತಿ ಪಡೆಯುವುದಕ್ಕೂ ಮೊದಲು ಒಬಾಮ ಮಾಡಬೇಕಿದ್ದ ಕೆಲಸಗಳು ಬೇಕಾದಸ್ಟಿದ್ದವು"
"ಒಬಾಮ ಕೇವಲ ಭರವಸೆಗಳನ್ನು ನೀಡಿದ್ದಾರೆ ,ಬಹಳಷ್ಟು ಭರವಸೆಗಳು ಇನ್ನೂ ಈಡೇರಬೇಕಾಗಿದೆ"
"ವಿಶ್ವ ಶಾಂತಿಗೆ ಒಬಾಮ ಅವರ ಮಹತ್ವವಾದ ಕೊಡುಗೆಗಳು ಏನೂ ಇಲ್ಲ"

ಹೀಗೆ ಚಿಂತಕರಿಂದ ಹಲವಾರು ಅಭಿಪ್ರಾಯಗಳು ವ್ಯಕ್ತವಾಗಿವೆ. ಸ್ವತಹ:ಒಬಾಮ ಅವರೇ 'ಪ್ರಾಮಾಣಿಕವಾಗಿ ಹೇಳಬೇಕೆಂದರೆ ನೊಬೆಲ್ ಪ್ರಶಸ್ತಿಗೆ ನಾನು ಅರ್ಹನಲ್ಲ' ಶಾಂತಿಗಾಗಿ ಜೀವತೇದಿರುವ ಮಹಾನ್ ವ್ಯಕ್ತಿಗಳು ಮಾಡಿರುವಂತ ಯಾವ ಕೆಲಸಗಳನ್ನು ನಾನಿನ್ನು ಮಾಡಿಯೇ ಇಲ್ಲ' ಎಂದಿದ್ದಾರೆ. ಇಲ್ಲಿ ಒಂದು ವಿಷಯವನ್ನು ನಾವು ಸ್ಥೂಲವಾಗಿ ಗಮನಿಸಬಹುದು .ಏನೆಂದರೆ -ಪ್ರಪಂಚಕ್ಕೆ ಶಾಂತಿದೂತನಾಗಿರುವ ನಮ್ಮ ದೇಶದ ಹೆಮ್ಮೆ ಮಹಾತ್ಮ ಗಾಂಧಿ ಅವರಿಗೇ ಈ ನೊಬೆಲ್ ಪ್ರಶಸ್ತಿ ದೊರಕಲಿಲ್ಲ ಎಂಬುದು .ಅವರ ಶಾಂತಿಮಂತ್ರವನ್ನೂ ,ಅಹಿಂಸಾ ತತ್ವವನ್ನೂ
ಪ್ರಪಂಚದ ಜನರು ಮರೆಯಲು ಸಾಧ್ಯವೇ?
ಹಲವರಂತೂ ಈ ನೊಬೆಲ್ ಪ್ರಶಸ್ತಿಯನ್ನು ಒಬಾಮರವರು ವಾಪಸ್ಸು ಮಾಡಿದ್ದರೆ ಅವರಿಗೆ ಹೆಚ್ಹಿನ ಗೌರವ ಬರುತ್ತಿತ್ತು ಎನ್ನುತ್ತಿದ್ದಾರೆ.
ಮಾನವತೆಯ ಅಭಿವೃದ್ಧಿಗೆ ಒಬಾಮ ಅವರ ಕೊಡುಗೆ ಇನ್ನೂ ಅತ್ಯಲ್ಪವಾದ್ದರಿಂದ ಅವರು ನೊಬೆಲ್ ಪುರಸ್ಕಾರಕ್ಕೆ ಆಯ್ಕೆಯಾಗುವಂತಹ ವ್ಯಕ್ತಿಯಾಗಿರಲಿಲ್ಲ ಎಂದು ಹಲವರ ಅಂಬೋಣ .
ಒಬಾಮ ಅವರಿಗೆ ನೊಬೆಲ್ ಶಾಂತಿಪುರಸ್ಕಾರ ಪ್ರಶಸ್ತಿ ದೊರೆತಿರುವುದು ಪ್ರಪಂಚದಾದ್ಯಂತ ಜನರನ್ನು ಸಖೇದಾಶ್ಚರ್ಯ ಗಳಿಂದ ಮುಳುಗಿಸಿದೆ.
ನೊಬೆಲ್ ಫೌಂಡೇಶನ್ ಈ ನೊಬೆಲ್ ಪ್ರಶಸ್ತಿಗಳ ಆಯ್ಕೆಯನ್ನು ಈಗಾಗಲೇ ಸಮರ್ಥಿಸಿಕೊಂಡಿದೆ.

ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ನಾನು ನನ್ನ ಅಭಿಪ್ರಾಯವನ್ನು ತಿಳಿಸಲು ಇಚ್ಚಿಸುತ್ತೇನೆ .ಒಬಾಮ ಅವರ ಈವರೆಗಿನ ಸಾಧನೆಗಳನ್ನು ಗಮನಿಸಿದರೆ ,ಅವರು ಒಬ್ಬ ಉತ್ತಮ ಮತ್ಸದ್ದಿ ,ನಾಯಕ ಎನಿಸಿದರೂ ನೊಬೆಲ್ ಪ್ರಶಸ್ತಿಗೆ ಅರ್ಹವಾಗುವಂತಹ ಸಾಧನೆಯನ್ನೇನೂ ಅವರು ಮಾಡಿಲ್ಲ ಎಂದೇ ಹೇಳಬೇಕಾಗುತ್ತದೆ .ಅವರಿಗೆ ದೊರೆತಿರುವ ಈ ಪುರಸ್ಕಾರಕ್ಕೆ ಅವರ ಸಾಧನೆಯೇನು ಎಂದು ಅಚ್ಚರಿ ಮೂಡುತ್ತದೆ.
ಬರಾಕ್ ಒಬಾಮ ಅವರಿಗೆ ಸಂದಿರುವ ,ನೊಬೆಲ್ ಪಾರಿತೋಷಕದ ಅಷ್ಟೂ ಹಣವನ್ನು ದಾನಕ್ಕೆ ಬಳಸುವುದಾಗಿ ಒಬಾಮ ಘೋಶಿಸಿದ್ದಾರಂತೆ .
ಅಷ್ಟರಮಟ್ಟಿಗೆ ಅವರ ನಿಲುವನ್ನು ಮೆಚ್ಚಲೇಬೇಕು .

ಹೀಗೊಂದು ಚುಟುಕು :
ಕೀನ್ಯಾ ಕುಟುಂಬದಲ್ಲೀಗ ಸಂಭ್ರಮವೋ , ಸಂಭ್ರಮ .
ಇಷ್ಟು ಬೇಗ ನೊಬೆಲ್ ಪ್ರಶಸ್ತಿ ಗಿಟ್ಟಿಸಿಬಿಟ್ಟ ನಮ್ಮ ಒಬಾಮ,
ಪ್ರಾಮಾಣಿಕವಾಗಿ ಹೇಳುವದಾದರೆ ಈ ಪ್ರಶಸ್ತಿಗೆ ನಾನು ಅರ್ಹನಲ್ಲ !
ಮಹಾನ್ ವ್ಯಕ್ತಿಗಳು ಮಾಡಿರುವಂತಹ ಸಾಧನೆಯನ್ನೇನು ನಾನು ಮಾಡಿಲ್ಲ .
*
ದಿನದ ಸ್ಪಂದನ:
ಒಂಟೆಯು ನೀರು ಆಹಾರವಿಲ್ಲದೆ ಹಲವು ದಿನಗಳ ಕಾಲ ಬದುಕಿರಬಲ್ಲುದು. ಸತತವಾಗಿ ೧೮ ಗಂಟೆಗಳ ಕಾಲ ನಡೆಯುವ ಸಾಮರ್ಥ್ಯವನ್ನುಹೊಂದಿರುವ ಈ ಪ್ರಾಣಿಯು ಒಂದು ದಿನದಲ್ಲಿ ೨೦೦ ಕಿ.ಗ್ರಾಂ.ನಸ್ಟು ಹೊರೆ ಹೊತ್ತು ೧೧೦ ಕಿ.ಮೀ ವರೆಗೆ ಪ್ರಯಾಣಿಸಬಲ್ಲುದು.ಮರಳುಗಾಡಿನಲ್ಲಿ ಈ ಪ್ರಾಣಿಯಉಪಯೋಗ ಬಹಳ.
*ಬ್ಲಾಗ್ ಮಿತ್ರರೇ ನನ್ನ ಹಿಂದಿನ ಬ್ಲಾಗ್ ಗಳಿಗೆ ನಿಮ್ಮ ಅಭಿಪ್ರಾಯಕ್ಕಾಗಿ ವಂದನೆಗಳು.ನಿಮ್ಮ ಅಭಿಪ್ರಾಯಗಳನ್ನು ನನ್ನೆಲ್ಲಾ ಬ್ಲಾಗ್ ಅನಿಸಿಕೆಗಳಿಗೂ ಕಾಯುತ್ತಿರುತ್ತೀನೆ.ಪೋಸ್ಟ್ ಮಾಡಿ.



2 ಕಾಮೆಂಟ್‌ಗಳು:

  1. ನನ್ನ ಅಭಿಪ್ರಾಯಗಳಿಗೆ ಸಂದಿರುವ ಋಣಾತ್ಮಕ ಮನ್ನಣೆ ಸಂತಸ ತಂದಿದೆ. ಕಳೆದೆರಡು ಸಂಚಿಕೆಗಳಲ್ಲಿ ಮೂಡಿ ಬಂದಿರುವ ನಿಮ್ಮ ಲೇಖನಗಳಲ್ಲಿ ವಿಷಯದ ಕುರಿತಾದ ನಿಮ್ಮ ಅಭಿಪ್ರಾಯ & ಚಿಂತನೆಯೂ ವ್ಯಕ್ತವಾಗಿದೆ. ನಿಮ್ಮ ಬ್ಲಾಗಾಯಣ ಹೀಗೆ ಮುಂದುವರೆಯಲಿ.

    ಕುಟುಕು: ವಿಶ್ವದ ಅತ್ಯಂತ ಪ್ರಭಾವಶಾಲಿ ರಾಷ್ಟ್ರದ ನಾಯಕನಾಗಿ,ಅಧಿಕಾರ ಸ್ವೀಕರಿಸಿದ ಕೂಡಲೇ ಇನ್ನೂ ಬಹುತೇಕ ಪ್ರಮುಖ ವಿಷಯಗಳನೆಲ್ಲ (ಸುಲಭವಾಗಿ ಪರಿಹರಿಸಲಾಗದ ಅಮೆರಿಕದ ಹಣಕಾಸು ಉಬ್ಬರ,ನಿರುದ್ಯೋಗ ಇತ್ಯಾದಿ) ಅನುಕೂಲ ಸಿಂಧುವಿನಂತೆ ಮರೆತು - ಭಾರತ ಪಾಕಿಸ್ತಾನ, ಇರಾನ್ ಹಾಗೂ ಆಫ್ಘಾನಿಸ್ತಾನದಲ್ಲಿ ಶಾಂತಿಯ ಕುರಿತಾಗಿ ಮಾತಾಡ್ತಿರೋದೆ ಬಂದಿದ್ದು ನೋಡಿ - "ಮನೆಗೆ ಮಾರಿ ಊರಿಗೆ ಉಪಕಾರಿ ಅನ್ನೋ ತರಹ" - ನೊಬೆಲ್ ಪಾರಿತೋಷಕ ಗಿಟ್ಟಿಸಿಬಿಡೋದೆ ? ಪುರಸ್ಕಾರ ಸಮಿತಿಯವರು ಸಹ ಇದೇ ಅಭಿಪ್ರಾಯವನ್ನು ವ್ಯಂಗ್ಯವಾಗಿ ಪಾರೋತೊಷಕ ನೀಡಿ ವ್ಯಕ್ತಪಡಿಸಿದ್ದಾರೆ ಅಂತ ನನ್ನ ಅಭಿಮತ. ಇದಕ್ಕೆ ಇದೆಯೇ ನಿಮ್ಮ ಸಹಮತ ?

    - ನವೀನ ಕಶ್ಯಪ

    ಪ್ರತ್ಯುತ್ತರಅಳಿಸಿ