ಮಂಗಳವಾರ, ನವೆಂಬರ್ 3, 2009

೧೬]ನವಂಬರ್ ೧ ಕನ್ನಡ ರಾಜ್ಯೋತ್ಸವ -ಭಾಗ-೩.

[ಕನ್ನಡ ರಾಜ್ಯೋತ್ಸವ -ಭಾಗ ೨ ರ ಮುಂದವರೆದ ಭಾಗ]
ಶ್ರೀ ವಿರೋಧಿನಾಮ ಸಂವತ್ಸರ ದಕ್ಷಿಣಾಯಣ ಶರದೃತು ಕಾರ್ತಿಕ ಮಾಸ ಕೃಷ್ಣ ಪಕ್ಷ ,ಪಾಡ್ಯ -ತಾ.೦೩-೧೧-೨೦೦೯ .
ಕನ್ನಡ ನಾಡಿನ ಏಳ್ಗೆಗಾಗಿ ಸಾಹಿತ್ಯ ಕ್ಷೇತ್ರವಲ್ಲದೆ ಇನ್ನು ಅನೇಕ ಕ್ಷೇತ್ರಗಳಲ್ಲಿ ,ಅನೆಕ ಮಹನಿಯರುಗಳು ದುಡಿದಿದ್ದಾರೆ.ಅದು,ವೈಜ್ಞಾನಿಕ ಕ್ಷೇತ್ರವಿರಬಹುದು,ವಿದ್ಯಾ ಕ್ಷೇತ್ರವಿರಬಹುದು,ವ್ಯವಸಾಯ ಕ್ಷೇತ್ರವಿರಬಹುದು,ಸಂಗೀತ ಕ್ಷೇತ್ರವಿರಬಹುದು,ಸಿನಿಮಾ ಕ್ಸೆತ್ರವಿರಬಹುದು ,ಸೇವಾ ಕ್ಷೇತ್ರವಿರಬಹುದು,ಕ್ರೀಡಾ ಕ್ಷೇತ್ರವಿರಬಹುದು,ಇಂಜಿನೀರಿಂಗ್ ಕ್ಷೇತ್ರವಿರಬಹುದು,ಔದ್ಯೋಗಿಕ ಕ್ಷೇತ್ರವಿರಬಹುದು,ಹೀಗೆ ನಾಡಿಗಾಗಿ ಹೋರಾಡಿದವರು ,ನುಡಿಗಾಗಿ ಹೋರಾಡಿದವರು ,ಕನ್ನಡ ಸಂಸ್ಕೃತಿಯ ಉಳುವಿಗಾಗಿಹೋರಾಡಿದವರು,ಕಲೆಯ ಏಳ್ಗೆಗಾಗಿ ಜೀವನವನ್ನೇ ಮುಡಿಪಾಗಿಟ್ಟವರು,ರಾಜಕೀಯ,ಆರ್ಥಿಕ,ಸಾಮಾಜಿಕ, ಸಮಾನತೆ, ನೈತಿಕತೆ,ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಅನೇಕ ಮಹನೀಯರುಗಳು ಕನ್ನಡ ಭಾಷೆಯ,ನಾಡು ನುಡಿಯ ಬಗ್ಗೆ ದುಡಿದು ತಮ್ಮದೇ ಛಾಪು ಮೂಡಿಸಿದ್ದಾರೆ .ಹಲವರನ್ನಾದರು ನೆನೆಯುವುದು ಇಂದಿನ ಕರ್ತವ್ಯವಾದೀತು.
ಸರ್.ಎಂ.ವಿಶ್ವೇಶ್ವರಯ್ಯ ನವರು ಆಧುನಿಕ ಮೈಸೂರಿನ ನಿರ್ಮಾಪಕ ರೆನಿಸಿಕೊಂಡವರು. ಪ್ರಖ್ಯಾತ ಇಂಜಿನೀಯರ್ ,ಹಾಗು ದಕ್ಷ ಆಡಳಿತಗಾರರಾಗಿದ್ದರು .ಅವರು ಇಂಜಿನೀಯರ್ ಆಗಿ ನಿರ್ವಹಿಸಿದ ಅನೇಕ ಕಾರ್ಯ ಯೋಜನೆಗಳು ಅದ್ಭುತವೆನಿಸಿದವು. ಕೃಷ್ಣರಾಜ ಸಾಗರ ಅಣೆಕಟ್ಟು ,ವಾಣಿವಿಲಾಸ ಸಾಗರ ,ಶರಾವತಿ ವಿದ್ಯುತ್ ಯೋಜನೆ ,ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ,ಹೀಗೆ ಒಂದೇ ,ಎರಡೇ,ಎಲ್ಲಾ ವಿಶಿಷ್ಟ ಯೋಜನೆಗಳೇ.
ವೈಜ್ಞಾನಿಕ ಕ್ಷೇತ್ರ ದಲ್ಲಿ ಡಾ.ಯು.ಅರ್ .ರಾವ್,ಅವರನ್ನು ಮರೆಯುವುದು ಉಂಟೆ? ಇವರು ಆಂತರ ರಾಷ್ಟ್ರೀಯ ಖ್ಯಾತೀಯ ಬಾಹ್ಯಾಕಾಶ ವಿಜ್ಞಾನಿ."ಆರ್ಯಭಟ"ಉಡಾವಣೆಯ ನೇತೃತ್ವ ವಹಿಸಿದ್ದವರು.
ಕನ್ನಡ ಸಿನಿಮಾ ಪ್ರಪಂಚ ಅನೇಕ ಅದ್ಭುತಗಳನ್ನು ಸಾಧಿಸಿದೆ. 'ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ 'ಪ್ರಶಸ್ತಿ ವಿಜೇತ ನಮ್ಮ ಕೆಂಟುಕಿ ಕರ್ನಲ್,ಡಾ.ರಾಜಕುಮಾರ್ ಕನ್ನಡಿಗರ ಹ್ರುನ್ಮನಗಳಲ್ಲಿ ನೆಲೆಸಿರುವ ಮೇರು ನಟರು. ಕನ್ನಡ ಚಿತ್ರರಂಗ ವೆಂದರೆ ನಮ್ಮ ರಾಜಕುಮಾರ ಎನ್ನುವಂತೆ ಮನೆ ಮಾತಾಗಿದ್ದವರು.
ಕುಮಾರ ತ್ರಯರಲ್ಲಿ ಇನ್ನಿಬ್ಬರು,ಕಲ್ಯಾಣ್ ಕುಮಾರ್,ಹಾಗು ಉದಯಕುಮಾರ.ಇವರುಗಳೂ ಸಹ ಅಂದಿನ ಕಾಲಕ್ಕೆ ಮೇರು ನಟರುಗಳೇ. ಡಾ.ವಿಷ್ಣುವರ್ಧನ್ ,ಅಂಬರೀಶ್,ಅನಂತನಾಗ್, ಶಂಕರನಾಗ್,ಕ.ಎಸ್.ಆಶ್ವಥ್. ಆರ್.ಏನ್ .ನಾಗೇಂದ್ರ ರಾಯರು, ನರಸಿಂಹ ರಾಜು, ಬಾಲಕೃಷ್ಣ,,ದಿನೇಶ್,ದ್ವಾರಕೀಶ್, ರಾಜೇಶ್ ,ಗಂಗಾಧರ್,ಶ್ರೀನಿವಾಸಮೂರ್ತಿ ,ತೂಗುದೀಪ ಶ್ರೀನಿವಾಸ್ ,ಸುಂದರ ಕೃಷ್ಣ ಅರಸ್, ಶಕ್ತಿ ಪ್ರಸಾದ್ ,ಹೀಗೆ ನಟರುಗಳ ದೊಡ್ಡ ಸಾಲು.
ಇನ್ನು ಮಹಿಳಾ ಅಭಿನೆತ್ರೆ ಯರಲ್ಲಿ ಪಂಡರಿಬಾಯಿ,ಹರಿಣಿ ,ಲೀಲಾವತಿ, ಬಿ.ಸರೋಜಾದೇವಿ,ಸಾಹುಕಾರ್ ಜಾನಕೀ,ಉದಯಚಂದ್ರಿಕ , ಕಲ್ಪನಾ,,ಜಮುನ , ಜಯಂತಿ,ಭಾರತಿ,ಆರತಿ,ಲಕ್ಷ್ಮಿ, ಭವ್ಯ, ಮುಂತಾದ ವರು ಕನ್ನಡ ಚಿತ್ರರಂಗದಲ್ಲಿ ಪ್ರಮುಖರೆನಿಸಿದವರು.
ಇಲ್ಲಿ ಎಲ್ಲಾ ರಂಗಗಳಲ್ಲಿ ಸೇವೆ ಸಲ್ಲಿಸಿದವರನ್ನು ನೆನೆಸಿಕೊಳ್ಳುವುದು ಕರ್ತವ್ಯವಾದರೂ ಅದು ಕಷ್ಟ ಸಾಧ್ಯ.ಆದರಿಂದ ಯಾರು ತಪ್ಪು ತಿಳಿದು ಕೊಳ್ಳು ವಂತಿಲ್ಲ.
ಮತ್ತೊಮ್ಮೆ ಕನ್ನಡ ರಾಜ್ಯೋತ್ಸವ ಬಂದಿದೆ .ನವಂಬರ್ ತಿಂಗಳು ಪೂರ್ತ ಕನ್ನಡ ರಾಜ್ಯೋತ್ಸವ.ನವಂಬರ್ ತಿಂಗಳಿನಲ್ಲಿ ಮಾತ್ರ ಕನ್ನಡದ ಬಗ್ಗೆ ಚಿಂತನೆ,ಜಿಜ್ಞಾಸೆ, ಮರು ಹುಟ್ಟು ಪಡೆಯುತ್ತದೆ.ಅಂದರೆ ಆ ತಿಂಗಳಿನಲ್ಲಿ ಮಾತ್ರ ಕನ್ನಡದ ಬಗ್ಗೆ ಚಿಂತನ-ಮಂಥನ ನಡೆಯಬೇಕೆ? ಉಳಿದ ಹನ್ನೊಂದು ತಿಂಗಳೂ ಕನ್ನಡದ ಬಗ್ಗೆ ಅಸಡ್ಡೆ ಯಾಕೆ? ಕನ್ನಡ ಭಾಷೆ ಕನ್ನಡ ರಾಜ್ಯದಲ್ಲಿಯೇ ಮೂಲೆಗುಂಪಾಗಿ ,ಕನ್ನಡ ಭಾಷಿಕರು ಮುಲೆಗುಂಪಾಗಬೇಕೆ? ಕರ್ನಾಟಕ ರಾಜ್ಯಕ್ಕೆ ವಲಸೆ ಬಂದಿರುವವರೇ ರಾಜ್ಯದ ಸಾರ್ವಭೌಮ ರಾಗಬೇಕೆ? ಕನ್ನಡಿಗರೇ ಕನ್ನಡ ರಾಜ್ಯದಲ್ಲಿ ಪರಕೀಯರಾಗಬೇಕೆ? ಕನ್ನಡ ,ಕರ್ನಾಟಕ್ ರಾಜ್ಯ ತಬ್ಬಲಿಯಾಗುತ್ತಿವೆಯಾ? ಕಾಲವೇ ಉತ್ತರಿಸಬೇಕಿದೆ..
ಕನ್ನಡ ಭಾಷೆ ,ಸಂಸ್ಕೃತಿ ಯನ್ನು ಉಳಿಸಬೇಕಾದ ಅನಿವಾರ್ಯತೆ ಎಂದಿಗಿಂತ ಇಂದು ಹೆಚ್ಹಾಗಿರುತ್ತದೆ.

ಗಮನಿಸಬೇಕಾದ ಒಂದಂಶವಿದೆ.ಇತ್ತೀಚಿಗೆ ಉತ್ತರ ಕರ್ನಾಟಕದ ಬಹುತೇಕ ಭಾಗಗಳು ಮಳೆಯ ಅಬ್ಬರದಿಂದ ತುಂಬಾ ತೊಂದರೆಗೆ ಸಿಲುಕಿವೆ.ಇದನ್ನು ಮನಗಂಡ ಕನ್ನಡ ಜನತೆ ಈ ಭಾರಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುವುದಿಲ್ಲ ಎಂದು ತೀರ್ಮಾನಿಸಿ ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ.ಎಲ್ಲೂ ಅದ್ದೂರಿ ಸಮಾರಂಭಗಳು ನಡೆದಿಲ್ಲ.ನಮ್ಮ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗಳನ್ನೂ ಪ್ರಕಟಿಸಿಲ್ಲ. ಅದು ನೆರೆ ಹಾವಳಿಯ ಪರಿಹಾರ ಕಾರ್ಯದತ್ತ ಮನ ಮಾಡಿದೆ.
ಒಂದು ಅತ್ಯಂತ ಸಂತಸದ ಸಮಾಚಾರವೆಂದರೆ ಬಂಗಾರದ ಮನುಷ್ಯನಿಗೆ ಭಾರತದ ಗೌರವಾರ್ಪಣೆ.'ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ' ಪುರುಸ್ಕೃತ ಡಾ. ರಾಜಕುಮಾರ್ ಅವರ ಅಂಚೆ ಚೀಟಿ ನವಂಬರ್ ೧ ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ.ರೂ ೫ ರ ಮುಖ ಬೆಲೆಯ ಈ ಅಂಚೆ ಚೀಟಿ ಯನ್ನು ಮುಖ್ಯ ಮಂತ್ರಿ ಯಡಿಯೂರಪ್ಪ ಬಿಡುಗಡೆ ಮಾಡಿದರು .

ಈ ದಿನದ ಸ್ಪಂದನ:
'ವಂದೇ ಮಾತರಂ'ರಚಿಸಿದ ಬಂಕಿಮ ಚಂದ್ರ ಚಟರ್ಜಿ-
'ವಂದೇ ಮಾತರಂ'ಈ ರಾಷ್ಟ್ರಭಕ್ತಿ ಗೀತೆಯನ್ನು ಕೇಳುತ್ತಿದ್ದಂತೆಯೇ ,ಹಾಡುತ್ತಿದ್ದಂತೆಯೇ ನಾವುಗಳೆಲ್ಲಾ ಪುಳಕ ಗೊಳ್ಳುತ್ತೇವೆ ಅಲ್ಲವೇ?ಈ ಗೀತೆಯನ್ನು ರಚಿಸಿದ ಅಪ್ರತಿಮ ದೇಶಭಕ್ತ ಕವಿ ,ಕಾದಂಬರಿಕಾರ ಬಂಕಿಮ ಚಂದ್ರ ಚಟರ್ಜಿ ಯವರು ,ಬಂಗಾಳಿಗಳು.ಪದವಿ ಪಡೆದ ಬಂಗಾಲದ ಮೊದಲ ಇಬ್ಬರಲ್ಲಿ ಇವರೂ ಒಬ್ಬರು.ಇವರ ಪೂರ್ತಾ ಹೆಸರು ಬಂಕಿಮ ಚಂದ್ರ ಚಟ್ಟೋಪಾಧ್ಯಾಯ .ಇವರು ೨೭,ಜೂನ್ ೧೮೩೮ ರಂದು ಬಂಗಾಲದ ಕತಲಾಪುರ ಎಂಬಲ್ಲಿ ಜನಿಸಿದರು.ಆನಂದಮಠ ಎಂಬ ಕಾದಂಬರಿಯ ಬಗ್ಗೆ ಯಾರಿಗೆ ಗೊತ್ತಿಲ್ಲ ,ಆ ಕೃತಿಯ ಕರ್ತೃ ಇವರೇ .ಸ್ವಾತಂತ್ರ್ಯ ಪೂರ್ವದಲ್ಲಿ 'ವಂದೇ ಮಾತರಂ' ಗೀತೆ ,ಸ್ವಾತಂತ್ರ್ಯ ಹೋರಾಟಗಾರರಲ್ಲಿ ಸ್ಪೂರ್ತಿ ಯನ್ನು ತುಂಬಿತ್ತು.ಒಗ್ಗಟ್ಟನ್ನು ಪ್ರೇರೆಪಿಸುತ್ತಿತ್ತು .ಛಲವನ್ನು ತಂದು ಕೊಟ್ಟಿತ್ತು .ಇಂತಹದೊಂದು ಪರಮ ದೇಶಭಕ್ತಿ ಗೀತೆಯನ್ನು ನಮಗೆ ಕೊಟ್ಟ ಬಂಕಿಮ ರನ್ನು ನಾವು ಅನುದಿನವೂ ನೆನೆಯೋಣ.


ಹೀಗೊಂದು ಕನ್ನಡ ಕವನ:
ಮಾತನಾಡಿ
ಯಾವಾಗಲೂ
ಸುಂದರ ಭಾಷೆ ಕನ್ನಡ.
ಓದಿ ,ಯಾವಾಗಲೂ
ಸರಳ ಭಾಷೆ ಕನ್ನಡ.
ಬೇಡ ನಮಗೆ ,
ಎನ್ನಡ ,ಪನ್ನಡ,
ಮಮ್ಮಿ-ಡ್ಯಾಡಿ ಎನಬೇಡಿ ,
ತರಬೇಡಿ ಕನ್ನಡಕ್ಕೆ
ಅವಗಡ!
[ನನ್ನ "ಬಣ್ಣಗಳು" ಎಂಬ ಕವನ ಸಂಕಲನದಿಂದ]

***************************************ಓಂ********************************************************







ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ